ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ ಕುರಿತ ಒಂದು ದಿನದ ವಿಚಾರ ಸಂಕಿರಣ: ಒಮ್ಮತದ ನಿರ್ಣಯ

Date:

ಒಂದು ಸಮಗ್ರ ನೀತಿಯು ಅಸ್ತಿತ್ವದಲ್ಲಿಲ್ಲದಿದ್ದಾಗ ನೀತಿ, ಕಾರ್ಯಕ್ರಮ, ತೀರ್ಮಾನಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳ ಬದಲಾಗಿ ವ್ಯಕ್ತಿ ಮತ್ತು ಅಧಿಕಾರಶಾಹಿ ನೆಲೆಯಲ್ಲಿ ರೂಪಗೊಳ್ಳುತ್ತವೆ ಎಂಬುದನ್ನು ಕರ್ನಾಟಕ ಸಾಕ್ಷೀಕರಿಸದೆ ಎಂಬುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಆತಂಕದಿಂದ ಗುರುತಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ನೀತಿ ನಿರೂಪಣೆಗಾಗಿ ಸಂಶೋಧನಾ ಸಂಸ್ಥೆ ಜಂಟಿಯಾಗಿ ಕರ್ನಾಟಕ ಶಾಲಾ ಶಿಕ್ಷಣದ ಸ್ಥಿತಿಗತಿ ಕುರಿತಂತೆ ಫೆಬ್ರವರಿ 28ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಒಮ್ಮತದ ನಿರ್ಣಯದ ಒಂದು ದಿನದ ವಿಚಾರ ಸಂಕಿರಣದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಸಮಗ್ರ ಅಭಿಪ್ರಾಯದ ಅನ್ವಯ, ಯಾವುದೇ ಶಿಕ್ಷಣ ನೀತಿಯ ವರದಿಯು ಶಿಕ್ಷಣದ ಜತೆಗೆ ಅನೇಕ ಅರ್ಥಪೂರ್ಣ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳನ್ನು ಒಳಗೊಂಡಿರುತ್ತದೆ. ಇದು ಅಪೇಕ್ಷಣೀಯವೇಕೆಂದರೆ ಇಂತಹ ನೀತಿಯ ಮೂಲಕ ರಾಜ್ಯವು ನಾಡು, ನುಡಿ, ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕುರಿತ ತನ್ನ ಆಶೋತ್ತರಗಳನ್ನು ಅಭಿವ್ಯಕ್ತಿಸುತ್ತದೆ. ಹಾಗೆಯೇ ಅವುಗಳ ಅನುಷ್ಠಾನಕ್ಕೆ ಸಾಮುದಾಯಿಕವಾದ ಪ್ರಯತ್ನಗಳ ಕಾರ್ಯಸೂಚಿಯೂ ಆಗಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನೇಮಕ ಮಾಡಿದ ರಾಜ್ಯ ಶಿಕ್ಷಣ ನೀತಿ ಅಯೋಗವು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯ ವರದಿಯನ್ನು ಸಿದ್ಧಪಡಿಸಿ ‌2025ರ ಆಗಸ್ಟ್‌ 8ರಂದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸರ್ಕಾರಕ್ಕೆ ಒಪ್ಪಿಸಿತು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿದ್ದ ಈ ಮಹತ್ವದ ನೀತಿಯನ್ನು ಸಾರ್ವಜನಿಕ ವಲಯದಲ್ಲಿ ಬಿಡುಗಡೆ ಮಾಡಲಾಗುವುದೆಂದು ನಿರೀಕ್ಷಿಸಲಾಗಿತ್ತು. ಕಾರಣ, ಶಿಕ್ಷಣ ನೀತಿಯ ಅನುಷ್ಠಾನದ ಭಾಗೀದಾರರಾದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಪೋಷಕರು, ಶಿಕ್ಷಣ ತಜ್ಞರು ಹಾಗೂ ರಾಜ್ಯದ ಎಲ್ಲ ನಾಗರಿಕರು ನೀತಿಯ ಆಶಯ, ಪ್ರಸ್ತಾವನೆ ಮತ್ತು ಶಿಫಾರಸುಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಒಂದು ಶಿಕ್ಷಣ ನೀತಿಯು ಕೇವಲ ಕೆಲವೇ ತಜ್ಞರ ವರದಿಯಾಗದೇ ನಾಡಿನ ಚಿಂತನೆಯ ಭಾಗವಾಗುವುದು ಮತ್ತು ಎಲ್ಲರ ಅಭಿಪ್ರಾಯಗಳು ನೀತಿಯ ಅನುಷ್ಠಾನಕ್ಕೆ ಮಾರ್ಗದರ್ಶಿಯಾಗುವುದು ರಾಜಕೀಯ ನೈತಿಕತೆಗೆ ಅನಿವಾರ್ಯ ಕರ್ತವ್ಯವಾಗಿದೆ.

ಆದ್ದರಿಂದ ಕರ್ನಾಟಕ ಸರ್ಕಾರವು ರಾಜ್ಯ ಶಿಕ್ಷಣ ನೀತಿಯ(SEP) ವರದಿಯನ್ನು ಸಾರ್ವಜನಿಕ ವಲಯದಲ್ಲಿ ಮಂಡಿಸಿ ನಾಗರಿಕ ಸಮುದಾಯದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಫೆ.28ರ ಸಭೆಯಲ್ಲಿ ಒಮ್ಮತದಿಂದ ನಿರ್ಣಯಿಸಿ ಸರ್ಕಾರದ ಗಮನಕ್ಕೆ ತರುತ್ತಿದ್ದು, ಜತೆಗೆ, ಈ ಶಿಕ್ಷಣ ನೀತಿಯ ಸ್ವೀಕಾರ, ಒಪ್ಪಿಗೆ ಅನುಷ್ಠಾನ, ಪರಾಮರ್ಶೆ ಇತ್ಯಾದಿಗಳು ಕೇವಲ ರಾಜಕೀಯ ಅಧಿಕಾರದ ಅಥವಾ ಪಕ್ಷಗಳ ಮತ್ತು ಅಧಿಕಾರಶಾಹಿಗೆ ವ್ಯಾಪ್ತಿಗೆ ಬರಕೂಡದು ಎಂದು ತಿಳಿಸಲಾಗಿದೆ.

ಸಾರ್ವಜನಿಕ ಚರ್ಚೆ, ಸಂವಾದ, ಮುಕ್ತ ವಿಮರ್ಶೆ ಇವುಗಳ ಮೂಲಕ ಎಲ್ಲರ ಒಮ್ಮತದ ಅಭಿಪ್ರಾಯವನ್ನು ರೂಪಿಸಿಕೊಂಡು, ಅನುಷ್ಠಾನದ ಕ್ರಮಗಳನ್ನು ರೂಪಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ(2020) ಅನುಷ್ಠಾನದ ಸಂದರ್ಭದಲ್ಲಿ ಆದಂತೆ ಅವಸರ, ಏಕಪಕ್ಷೀಯ ನಿರ್ಧಾರ, ಸಂವಿಧಾನ ವಿರೋಧಿ ಹಾಗೂ ನಿರ್ದೇಶನಗಳು ಮತ್ತೆ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕಿದೆ. ಕರ್ನಾಟಕ ರಾಜ್ಯದ ಶಿಕ್ಷಣ ನೀತಿಯಲ್ಲಿ ಏನಿದೆ ಮತ್ತು ಅದರ ಅನುಷ್ಠಾನ ಹೇಗಿರುತ್ತದೆ ಎಂಬುದರ ಬಗ್ಗೆ ಇಡೀ ರಾಜ್ಯ ಕಾತುರದಿಂದ ಕಾಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ(2020)ಯನ್ನು ಸಂವಿಧಾನದ ನೆಲೆಯಲ್ಲಿ ತಿರಸ್ಕರಿಸಿದ ಹಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹೀಗಾಗಿ, ಈ ನೀತಿಯ ಅಂಗೀಕಾರ ಹಾಗೂ ಅನುಷ್ಠಾನದ ಮೇಲೆ ರಾಷ್ಟ್ರದ ಗಮನವೂ ಇದೆ.

“ಈ ಹಿನ್ನೆಲೆಯಲ್ಲಿ ನಾವು ರಾಜ್ಯ ಶಿಕ್ಷಣ ನೀತಿ(SEP)ಯನ್ನು ಅಂಗೀಕರಿಸಿ, ಈ ವರದಿಯನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗಾಗಿ ಮಂಡಿಸಬೇಕೆಂದು ಹಾಗೂ ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸಿ, ಪಕ್ಷಾತೀತವಾಗಿ ರಾಜ್ಯ ಅಧಿಕೃತ ರಾಜ್ಯ ಶಿಕ್ಷಣ ನೀತಿಯಾಗಿ ಅಂಗೀಕರಿಸಬೇಕೆಂದು ಸರ್ಕಾರವನ್ನು ಗೌರವಪೂರ್ವಕವಾಗಿ ಒತ್ತಾಯಿಸುತ್ತೇವೆ. ಇದರ, ಮೊದಲ ಹೆಜ್ಜೆಯಾಗಿ, ಮುಖ್ಯ ಮಂತ್ರಿಗಳು ಇದೇ ಮಾರ್ಚ್‌ 6ರ ಅಧಿವೇಶನದ ಬಜೆಟ್‌ ಭಾಷಣದಲ್ಲಿ ಈ ವಿಷಯವನ್ನು ಘೋಷಿಸಿಬೇಕೇಂದು ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ” ಎಂದು ಒಮ್ಮತದ ನಿರ್ಣಯದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?

ಈ ವೇಳೆ ಪ್ರೊ.ಪುರುಷೋತ್ತಮ ಬಿಳಿಮಲೆ, ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ಸಬೀಹ ಭೂಮಿಗೌಡ, ಡಾ. ಜಿ ರಾಮಕೃಷ್ಣ, ಡಾ.ನಿರಂಜನಾರಾಧ್ಯ ವಿ ಪಿ, ಪ್ರೊ.ಚಂದ್ರಶೇಖರ್‌ ಟಿ ಆರ್‌, ಬಸವರಾಜ ಗುರಿಕಾರ, ಗುರುಪ್ರಸಾದ್‌ ಕೆರಗೋಡು, ಆನಂದ ಬನವಾಸಿ, ತಿರುಮಲ ರಾವ್‌ ಸಿ ವಿ, ಲೋಕೇಶ್‌ ತಾಳೀಕಟ್ಟೆ, ಯೋಗಾನಂದ ಬಿ ಎನ್‌, ಕವಿರಾಜ್‌, ಶಿವಪ್ಪ ಎನ್‌. ಅಂಬ್ಲಿಕಲ್‌, ಅಜಯ್‌ ವಿ ಕಾಮತ್‌, ವೀಣಾ ಎಲ್‌ ವೈ, ಲೇಖಾ ಅಡವಿ, ಉಮೇಶ್‌ ಗಂಗವಾಡಿ, ಶ್ರೀನಿವಾಸಲು, ಜ್ಯೋತಿ ಶೆಟ್ಟಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ಕರ್ನಾಟಕ ದಿಕ್ಸೂಚಿಯಾಗಬೇಕು: ಪ್ರೊ. ಯೋಗೇಂದ್ರ ಯಾದವ್

ಕರ್ನಾಟಕವು ಹಲವು ವಿಷಯಗಳಲ್ಲಿ ದೇಶಕ್ಕೆ ದಿಕ್ಸೂಚಿಯಾಗಿದೆ. ಎಸ್‌ಐಆರ್‍‌ ವಿರುದ್ಧದ ಹೋರಾಟದಲ್ಲಿಯೂ ದೇಶಕ್ಕೆ...

ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ‘ಹಿಂದಿ’ ತೆಗೆಯಬೇಕು: ಹಿಂದಿ ವಿರೋಧಿ ಕರ್ನಾಟಕ

ಕರ್ನಾಟಕದಲ್ಲಿ ಶೈಕ್ಷಣಿಕವಾಗಿ ಪ್ರತಿ ವರ್ಷ ನಡೆಯುವ ಎಸ್ ಎಸ್ ಎಲ್ ಸಿ...

ಬೇಲಿಯೇ ಎದ್ದು ಹೊಲ ಮೇಯ್ದಂತೆ ಮಾಡಿದ ಮಾಹಿತಿ ಆಯೋಗ; ಕಾಯ್ದೆಯ ವಾರ್ಷಿಕ ವರದಿ ನೀಡಲು ‘ಗೌಪ್ಯತೆ’ಯ ನೆಪ

ಮಾಹಿತಿ ಹಕ್ಕು ಕಾಯ್ದೆ-2005ರಡಿ ಸಾರ್ವಜನಿಕ ಪ್ರಾಧಿಕಾರಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು...

ಒಳಮೀಸಲಾತಿ: 56,000 ಹುದ್ದೆಗಳ ನೇಮಕಾತಿಗೆ ಹೊರಡಿಸಿದ ಅಧಿಸೂಚನೆ ರದ್ದತಿಗೆ ಸರ್ಕಾರ ಒಪ್ಪಿಗೆ

ಇತ್ತೀಚೆಗೆ 56,432 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು...