ಭಾನುವಾರ ಸಂಜೆ ಫ್ರೇಸರ್‌ಟೌನ್‌ನಲ್ಲಿ ನಡೆದ ಪ್ಯಾಲೆಸ್ತೀನ್ ಪರ ಪ್ರತಿಭಟನೆಗೆ ಬೆಂಗಳೂರು ಪೊಲೀಸರು ಅಡ್ಡಿಪಡಿಸಿದ್ದು, 15 ಮಂದಿಯನ್ನು ಬಂಧಿಸಿದ್ದಾರೆ.
ಫ್ರೇಸರ್‌ಟೌನ್‌ನ ಮಸೀದಿ ರಸ್ತೆಯ ಕ್ಯಾರಿ ಫ್ರೆಶ್ ಸೂಪರ್ ಮಾರ್ಕೆಟ್ ಬಳಿ ಸಂಜೆ 4.30ರ ಸುಮಾರಿಗೆ ಪ್ಯಾಲೆಸ್ತೀನ್ ಪರ ಕರಪತ್ರಗಳು ಮತ್ತು ಪೋಸ್ಟರ್‌ಗಳನ್ನು ಹಂಚಲು ಪ್ರತಿಭಟನಾಕಾರರು ಮುಂದಾಗಿದ್ದರು. ಆದರೆ ಪೊಲೀಸ್ ಸಿಬ್ಬಂದಿಗಳು ಅವರನ್ನು ಬಂಧಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ಯಾಲೆಸ್ತೀನ್ ಪರ ಪೋಸ್ಟ್‌ಗೆ ಲೈಕ್, ಕಾಮೆಂಟ್ ಮಾಡಿದ ಪ್ರಾಂಶುಪಾಲರಿಗೆ ರಾಜೀನಾಮೆ ನೀಡಲು ಸೂಚನೆ!
ಆರ್.ಟಿ.ನಗರ ಮತ್ತು ಪುಲಕೇಶಿನಗರ ಪೊಲೀಸ್ ಠಾಣೆಗಳಿಗೆ ಬಂಧಿತರನ್ನು ಕರೆದೊಯ್ಯಲಾಗಿದೆ. ಪೊಲೀಸರು ಓರ್ವ ವಿದ್ಯಾರ್ಥಿನಿಗೆ ಥಳಿಸಿದ್ದಾರೆ. ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Dozens of peaceful pro-Palestine protesters were manhandled and detained by Karnataka Police in Bengaluru for attending a demonstration.
Watch: pic.twitter.com/xSmUyhMjpY
— Maktoob (@MaktoobMedia) June 2, 2024
ಸಂಜೆ 5.30ರ ಸುಮಾರಿಗೆ ಆರ್‌ಟಿ ನಗರ ಠಾಣೆಯಲ್ಲಿದ್ದ ಪ್ರತಿಭಟನಾಕಾರರನ್ನು ಪುಲಕೇಶಿನಗರಕ್ಕೆ ಸ್ಥಳಾಂತರಿಸಲಾಗಿದೆ. ಅಂತಿಮವಾಗಿ ಅವರನ್ನು ರಾತ್ರಿ 10 ಗಂಟೆಯ ಸುಮಾರಿಗೆ ಬಿಡುಗಡೆಗೊಳಿಸಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಕಾರ್ಯಕರ್ತ ಶಾರಿಕ್ ದಾಸ್‌ಗುಪ್ತಾ, ಪೊಲೀಸರು ಇಬ್ಬರು ಪ್ರತಿಭಟನಾಕಾರರಿಗೆ ಪೊಲೀಸ್ ಠಾಣೆಯಲ್ಲಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ಯಾವುದೋ ವಸ್ತು ಖರೀದಿ ಮಾಡಲೆಂದು ಬಂದಿದ್ದ ಸ್ಥಳದಲ್ಲಿಯೇ ಇದ್ದ ಒಬ್ಬ ನಾಗರಿಕನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ ಪ್ರತಿಭಟನೆಗೆ ಬಂದಿರುವುದಲ್ಲ, ಆತನನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಮನವಿ ಮಾಡಿದರೂ ಕೂಡಾ ಆತನನ್ನು ಬಂಧಿಸಿದ್ದಾರೆ” ಎಂದು ದೂರಿದ್ದಾರೆ.
ಇದನ್ನು ಓದಿದ್ದೀರಾ? ಕೇರಳ| ಪ್ಯಾಲೆಸ್ತೀನ್ ಪರ ಪೋಸ್ಟರ್ ಹರಿದ ಆರೋಪ; ಇಬ್ಬರು ಆಸ್ಟ್ರೇಲಿಯಾದ ಮಹಿಳೆಯರ ಮೇಲೆ ಪ್ರಕರಣ
“ಮನೆಯಲ್ಲಿ ಅನಾರೋಗ್ಯಕ್ಕೆ ಒಳಗಾಗಿರುವ ತಾಯಿ ಇದ್ದಾರೆ ಎಂದು ಪದೇ ಪದೇ ಮನವಿ ಮಾಡಿದರೂ ಪೊಲೀಸರು ಆತನನ್ನು ಬಿಡುಗಡೆ ಮಾಡಲಿಲ್ಲ. ಉಳಿದ ಎಲ್ಲರನ್ನೂ ಬಿಡುಗಡೆ ಮಾಡಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ” ಎಂದು ಶಾರಿಕ್ ದಾಸ್‌ಗುಪ್ತಾ ಆರೋಪಿದ್ದಾರೆ.
ಈ ಬಗ್ಗೆ ಪುಲಕೇಶಿನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಫೋನ್ ಕರೆಗೆ ಪ್ರತಿಕ್ರಿಯಿಸಿಲ್ಲ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.





