ನಾಟಕಗಳ ಓದು ಹಾಗೂ ವೀಕ್ಷಣೆಯಿಂದ ವ್ಯಕ್ತಿಯ ಜೀವನದಲ್ಲಿ ಪರಿವರ್ತನೆ ಆಗಬಹುದು ಎಂದು ಶಬನಮ ಚಾರಿಟೆಬಲ್ ಟ್ರಸ್ಟ್ಅ ಧ್ಯಕ್ಷೆ ಡಾ.ಮಕ್ತುಂಬಿ ಎಮ್. ಅಭಿಪ್ರಾಯಪಟ್ಟರು.
ಭಾಲ್ಕಿ ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ಕಲಬುರ್ಗಿಯ ರಂಗನಯನ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಅರವಿಂದ ಕುಲಕರ್ಣಿ ನಿರ್ದೇಶನದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕೃಷ್ಣೆ ಗೌಡನ ಆನೆ ನಾಟಕ ಮತ್ತು ಬೊಳೆ ಶಂಕರ ನಾಟಕವನ್ನು ಸಸಿಗೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ, ಸಾಂಸ್ಕೃತಿಕ, ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಆದರ್ಶ ಸಂಸ್ಕೃತಿ, ನಡತೆ ಬಗ್ಗೆ ತಿಳಿಸಿಕೊಡಲಾಗುತ್ತದೆ. ಮಹಾತ್ಮಾ ಗಾಂಧೀಜಿ ,ಶ್ರವಣಕುಮಾರ ಸೇರಿದಂತೆ ಅನೇಕರು ನಾಟಕ ನೋಡುವುದರ ಮೂಲಕ ಪರಿವರ್ತನೆಯಾದ ನಿದರ್ಶನಗಳಿವೆ. ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಬಿಟ್ಟು ನೈಜ ಆದರ್ಶ ಮೌಲ್ಯ ತತ್ವಗಳುಳ್ಳ ನಾಟಕ ವೀಕ್ಷಣೆ ಮಾಡುವುದು ಅಗತ್ಯʼ ಎಂದು ಹೇಳಿದರು.
ಪ್ರೊ.ಪರಶುರಾಮ ಮಾತನಾಡಿ, ʼಪದವಿ ಪೂರ್ವ ಶಿಕ್ಷಣ ಇಲಾಖೆಯವರು ಪಿಯುಸಿ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಿದ ʼಕೃಷ್ಣೆ ಗೌಡನ ಆನೆʼ ನಾಟಕ ಮತ್ತು ʼಬೊಳೆ ಶಂಕರʼ ನಾಟಕದಿಂದ ಅಹಂ ಕಳೆದು ನಮೃತೆ ಹುಟ್ಟು ಹಾಕುತ್ತದೆʼ ಎಂದರು.
ಇದನ್ನೂ ಓದಿ : ಬೀದರ್ | ಡಿ.19 ರಂದು ಜಗನ್ಮಾತೆ ಅಕ್ಕಮಹಾದೇವಿ ಚಲನಚಿತ್ರ ಬಿಡುಗಡೆ
ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ, ನಿವೃತ್ತ ಪ್ರಾಂಶುಪಾಲ ಅಶೋಕ ರಾಜೋಳೆ, ತಾಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜೈಕಾಂತ ಗಂಗೋಜಿ, ರೋಟರಿ ಮಾಜಿ ಎಜಿ ಡಾ.ಅಮೀತ ಅಷ್ಟೂರೆ, ಪ್ರೊ.ಶೈಲಜಾ
ಪಾಟೀಲ್, ಪ್ರೊ.ಮಾಧವರಾವ ಮೋರೆ, ಪ್ರೊ.ರೇವಣಸಿದ್ದಯ್ಯಾ ಸ್ವಾಮಿ, ಪ್ರೊ.ಶೇಖ್ ಸಾಬೇರ ಪಟೇಲ್ ಸೇರಿದಂತೆ ಪಿಯು
ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರೊ.ಸುಂದರರಾಜ್ ನಿರೂಪಿಸಿ, ವಂದಿಸಿದರು.





