ಬೀದರ್ ತಾಲ್ಲೂಕಿನ ಜನವಾಡದಲ್ಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಖಾಸಗಿ ಶಾಲಾ ವಾಹನ ಡಿಕ್ಕಿ ಹೊಡೆದು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಜನವಾಡದ ಪೊಲೀಸ್ ಕ್ವಾಟರ್ಸ್‌ನಲ್ಲಿ ವಾಸವಾಗಿರುವ ಔರಾದ್ ತಾಲ್ಲೂಕಿನ ಗಡಿಕುಶನೂರ ಗ್ರಾಮದ ಸುನೀಲಕುಮಾರ ಅವರ ಪುತ್ರಿ, 3ನೇ ತರಗತಿಯಲ್ಲಿ ಓದುತ್ತಿದ್ದ ಮಾಡುತ್ತಿದ್ದ ಋತ್ವಿಕಾ (9) ಮೃತಪಟ್ಟವರು.
ಗ್ರಾಮದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಶಾಲೆಯ ಚಾಲಕ ವಾಹನದಲ್ಲಿ ಪೊಲೀಸ್ ಕ್ವಾಟರ್ಸ್ ಸಮೀಪ ತಂದು ಇಳಿಸಿದ್ದರು. ಬಸ್ ಮುಂಭಾಗದಲ್ಲಿದ್ದ ನಿಂತ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಗೊಂಡಿದ್ದ ವಿದ್ಯಾರ್ಥಿನಿ ವಾಹನದಲ್ಲಿ ಬೀದರ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಋತ್ವಿಕಾ ಅವರ ತಾಯಿ ರೇಣುಕಾ ಪೊಲೀಸ್ ಕಾನ್‍ಸ್ಟಬಲ್ ಆಗಿದ್ದಾರೆ. ಡಿವೈಎಸ್‌ಪಿ ಸನದಿ, ಬೀದರ್ ಗ್ರಾಮೀಣ ಸಿಪಿಐ ಜಿ.ಎಸ್. ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





