ಭೀಮ್ ಪ್ರಜಾ ಸಂಘದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಕಾಶ ಶಿಂಧೆ ಅವರನ್ನು ನೇಮಕ ಮಾಡಲಾಗಿದೆ.
ಬೀದರ್ ನಗರದ ಖಾಸಗಿ ಹೊಟೇಲ್‌ನಲ್ಲಿ ಸಂಘದ ರಾಜ್ಯಾಧ್ಯಕ್ಷ ವೈಟ್‌ಫೀಲ್ಡ್, ಉಪಾಧ್ಯಕ್ಷ ಮುನಿರತ್ನ ಅರವಿಂದ್ ಅವರ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆಯಿತು.
ರಾಜ್ಯಾಧ್ಯಕ್ಷ ಮುರುಗೇಶ ಅವರು ಮಾತನಾಡಿ, ʼನಿಷ್ಕಲ್ಮಶ ನಾಡ ಪ್ರೇಮ, ನಡೆ-ನುಡಿ, ಉತ್ತಮ ಚಾರಿತ್ರ್ಯ ಹಾಗೂ ಸಮಾಜಮುಖಿ ಕೆಲಸಗಳನ್ನು ನಿಸ್ವಾರ್ಥ ಭಾವನೆಯಿಂದ ಮಾಡುವ ಉದ್ದೇಶದಿಂದ ಜಿಲ್ಲಾ ಅಧ್ಯಕರನ್ನಾಗಿ ನೇಮಿಸಲಾಗಿದೆ. ನಾಡಾಭಿಮಾನ ಎತ್ತಿ ಹಿಡಿಯುವುದರೊಂದಿಗೆ ದಲಿತರ, ಶೋಷಿತರ, ರೈತರ, ಕಾರ್ಮಿಕರ, ಮಹಿಳೆಯರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯಕ್ಕಾಗಿ ಶ್ರಮಿಸಬೇಕುʼ ಎಂದು ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಆಕಾಶ ಶಿಂಧೆ ಮಾತನಾಡಿ, ʼಭೀಮ್ ಪ್ರಜಾ ಸಂಘದ ಜವಾಬ್ದಾರಿ ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುವೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮಾರ್ಗದರ್ಶನದಲ್ಲಿ ಸಂಘಟನೆಯ ಬಲಪಡಿಸಿ ನೊಂದವರಿಗೆ ಪರ ದನಿಯಾಗುವ ಕೆಲಸ ಮಾಡುತ್ತೇವೆʼ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಅಯೋದ್ದೀನ್ (ಜಿಲ್ಲಾ ಉಪಾಧ್ಯಕ್ಷ), ಚಂದ್ರಕಾಂತ್ ದೇವಕೆ (ಜಿಲ್ಲಾ ಕಾರ್ಯದರ್ಶಿ) ಶಿವಕುಮಾರ್ ಶಿಂದೆ (ಜಿಲ್ಲಾ ಖಜಾಂಚಿ) ಅವರನ್ನು ಆಯ್ಕೆ ಮಾಡಲಾಯಿತು.
ಇದನ್ನೂ ಓದಿ : ಸರಾಯಿ ಬಂದ್ ಮಾಡಿದ್ರೆ ಸಿದ್ರಾಮಯ್ಯ ಫೋಟೊ ಜಗಲಿ ಮೇಲಿಟ್ಟು ಪೂಜೆ ಮಾಡ್ತೀನಿ : ಶಾಸಕ ಶರಣು ಸಲಗರ
ಈ ಸಭೆಯಲ್ಲಿ ಸುರೇಶ್ ಜೋಜನಾಕರ್, ಸಂತೋಷ್ ಪಡಸಾಲೆ, ಹರ್ಷಿತ್ ದಾಂಡೇಕರ್, ಜೈವರ್ಧನ್ ಫುಲೆ, ಉಮಾಕಾಂತ್ ಶಾಸ್ತ್ರಿ , ಸಂತೋಷ್ ಹಾಲೆಹಿಪ್ಪುರ್ಗೆ, ರಾಜು ಗುಂಗೆ, ನರೇಶ್ ಚಿದ್ರಿ ಮತ್ತಿತರರು ಉಪಸ್ಥಿತರಿದ್ದರು.





