ಬೀದರ್‌ | ಬಸವತತ್ವ ಪ್ರಚಾರಕ್ಕೆ ಬದುಕು ಸಮರ್ಪಿಸಿಕೊಂಡ ಅಕ್ಕ ಅನ್ನಪೂರ್ಣತಾಯಿ

Date:

ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯ ನಿಸರ್ಗದ ಮಡಿಲಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಶುಕ್ರವಾರ ಆರಂಭಗೊಂಡಿತು.

ಮೊದಲಿಗೆ ಗುರುವಚನ ಪರುಷಕಟ್ಟೆಗೆ ತೆರಳಿ, ಪ್ರಭುದೇವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗುರು ವಚನಗಳಿಗೆ ಪುಷ್ಪವೃಷ್ಟಿಗೈದು, ಗೌರವ ಸಮರ್ಪಿಸಲಾಯಿತು.

ಬಳಿಕ ಧಾರವಾಡದ ಬಸವ ಭಕ್ತ ಬಸವರಾಜ ಹಡಪದ ಅವರು ಷಟ್‍ಸ್ಥಲ ಧ್ವಜಾರೋಣಗೈದರು. ಧ್ವಜಗೀತೆಯ ನಂತರ ಶರಣ ಸಂಕುಲದಿಂದ ಬಸವ ಜಯಘೋಷ ಮೊಳಗಿದವು. ಅನಂತರ ಅಕ್ಕನವರ ಐಕ್ಯ ಮಂಟಪದಲ್ಲಿ ವಚನಗಳನ್ನು ಓದಿ, ಬಸವಮಂತ್ರ ಪಠಣಗೈದು, ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಣೆ ಮಾಡಲಾಯಿತು. ವಚನ ಪಾರಾಯಣ ಸುಸೂತ್ರವಾಗಿ ನಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಕ್ಕನ ಬಸವ ನಿಷ್ಠೆ ಅನುಕರಣೀಯ :

ಅಕ್ಕ ಅನ್ನಪೂರ್ಣತಾಯಿ ಬಸವ ತತ್ವ ಪ್ರಚಾರಕ್ಕೆ ತಮ್ಮ ಬದುಕು ಸಮರ್ಪಿಸಿಕೊಂಡಿದ್ದರು. ಅವರ ಬಸವ ನಿಷ್ಠೆ ಅನುಕರಣೀಯ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೋತ್ಸವದ ಮೊದಲ ದಿನವಾದ ಶುಕ್ರವಾರ ನಡೆದ ಸಾಮೂಹಿಕ ವಚನ ಪಾರಾಯಣ ಹಾಗೂ ಅನುಭಾವ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ʼನನಗೆ ಅಕ್ಕನವರು ಗುರುವಾಗಿದ್ದರೆ, ಅವರಿಗೆ ಬಸವಣ್ಣ ಗುರುವಾಗಿದ್ದರು. ಕಾರಣ, ಅಕ್ಕನವರ ಬೋಧನೆಗಳೇ ನನಗೆ ಬಸವಣ್ಣನವರ ಬೋಧನೆಗಳಾಗಿವೆ. ಅಕ್ಕ ನನಗೆ ಗುರುವಷ್ಟೇ ಅಲ್ಲ; ತಾಯಿಯಾಗಿಯೂ ಪೋಷಿಸಿದ್ದಾರೆ. ಭಕ್ತಿ ಇದ್ದಲ್ಲಿ ಶಕ್ತಿ ಇರುತ್ತದೆ. ಕೇವಲ ತತ್ವ ಅರಿತರೆ ಸಾಲದು. ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ಬದುಕು ಅರಳುತ್ತದೆ. ವಿಸ್ತಾರಗೊಳ್ಳುತ್ತದೆʼ ಎಂದು ತಿಳಿಸಿದರು.

WhatsApp Image 2025 05 23 at 7.34.00 PM
ಸಾಮೂಹಿಕ ವಚನ ಪಾರಾಯಣ ನಡೆಯಿತು

ಚರಜಂಗಮ ಸಿದ್ರಾಮಪ್ಪ ಕಪಲಾಪುರೆ ಮಾತನಾಡಿ, ʼಅರಣ್ಯದಂತಿದ್ದ ಈ ನೆಲ ಅಕ್ಕನವರು ಪಾದವಿಟ್ಟಿದ್ದರಿಂದ ಬಸವಗಿರಿ ಆಯಿತು. ಪವಿತ್ರ ಕ್ಷೇತ್ರವಾಯಿತು. ಅಕ್ಕನವರು ಮನೆ ಮನೆಗಳ ಮೇಲೆ ಬಸವ ಧ್ವಜ ಹಾರಿಸುವುದು, ವಚನ ಓದುವುದು, ಬಸವ ಚರಿತ್ರೆ ಓದುವುದನ್ನು ಕಲಿಸಿ ಅನಿಷ್ಠ ಪದ್ಧತಿಗಳನ್ನು ಹೊಡೆದೊಡಿಸಿದರುʼ ಎಂದು ಸ್ಮರಿಸಿದರು.

ಇನ್ನೊಬ್ಬರ ನೋವು ನಲಿವುಗಳಿಗೆ ಸ್ಪಂದಿಸಿ ಧೈರ್ಯ ತುಂಬುತ್ತಿದ್ದ ಮಾತೃ ಸ್ವರೂಪಿ ಅಕ್ಕನನ್ನು ಕಳೆದುಕೊಂಡು ಸಮಾಜ ಬಡವಾಗಿದೆ. ವಚನಗಳನ್ನು ಓದುವುದರಿಂದ ನಾಲಿಗೆ, ಕಿವಿ, ಹೃದಯವಷ್ಟೇ ಅಲ್ಲ; ಜೀವನವೂ ಶುದ್ಧವಾಗುತ್ತದೆ. 108 ವಚನಗಳನ್ನು ಓದಿದರೆ ಬದುಕಿನ ಹಲವು ಕಷ್ಟಗಳು ಪರಿಹಾರಗೊಳ್ಳುತ್ತವೆʼ ಎಂದರು.

ಪರುಷಕಟ್ಟೆಯ ಚನ್ನಬಸವಣ್ಣ ಮಾತನಾಡಿ, ʼವಚನಗಳನ್ನು ಓದಿ, ಅನುಷ್ಠಾನಿಸುವುದು ವಚನ ಪಾರಾಯಣದ ಉದ್ದೇಶ. ವಚನ ಪಾರಾಯಣದಿಂದ ಮಾತು ಮೌನವಾಗಿ ಅಪರಿಮಿತ ಆನಂದ ಲಭಿಸುತ್ತದೆ. ಇನ್ನೊಬ್ಬರಲ್ಲಿ ದೋಷ ಹುಡುಕುವುದನ್ನು ಬಿಟ್ಟು, ತ್ಯಾಗ ಭಾವನೆ ಬೆಳೆಸಿಕೊಳ್ಳಬೇಕು. ಪರ ಚಿಂತೆ ನಮಗೇಕಯ್ಯ ಎಂಬ ಬಸವಾಣಿಯನ್ನು ಮರೆಯಬಾರದು. ಅಕ್ಕನವರು ಹೇಳಿದಂತೆ ಯಾವಾಗಲೂ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.

ಅಕ್ಕನವರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದರು. ವಚನ ವೈಭವ ಅಕ್ಕನವರಿಂದ ಜಾರಿಯಾಯಿತು ಎಂದು ಭಾಲ್ಕಿ ಹಿರೇಮಠದ ಮಹಾಲಿಂಗ ಸ್ವಾಮೀಜಿ ಸ್ಮರಿಸಿದರು. ಕಲ್ಪನಾ ಬೀದೆ ಅಕ್ಕನವರ ಜೀವನ ಹಾಗೂ ಸಂದೇಶಗಳನ್ನು ಬಣ್ಣಿಸುವ ಸ್ವರಚಿತ ಕವನ ವಾಚಿಸಿದರು.

ಇದನ್ನೂ ಓದಿ : ಬೀದರ್‌ | ಮೇ 26 ರಿಂದ ಜೂ.2ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 : 47 ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆ

ಕಲಬುರಗಿಯ ಪತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ, ಉದ್ಯಮಿಗಳಾದ ಚಂದ್ರಶೇಖರ ಹೆಬ್ಬಾಳೆ, ಜೈರಾಜ ಖಂಡ್ರೆ, ಹುಮನಾಬಾದ್‍ನ ಮಲ್ಲಿಕಾರ್ಜುನ ರಟಕಲ್, ಸಾಹಿತಿ ರಮೇಶ ಮಠಪತಿ ಉಪಸ್ಥಿತರಿದ್ದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ರೇವಣಪ್ಪ ಮೂಲಗೆ ಹಾಗೂ ಮಹೇಶ ಬಿರಾದಾರ ತಂಡದವರ ವಚನ ಸಂಗೀತ ಗಮನ ಸೆಳೆಯಿತು. ಲಿಂಗಾಯತ ಸೇವಾ ದಳದ ಅಧ್ಯಕ್ಷ ಅಭಿಷೇಕ ಮಠಪತಿ ಸ್ವಾಗತಿಸಿದರು. ಸಿ.ಎಸ್. ಪಾಟೀಲ, ಅಣವೀರ ಕೂಡಂಬಲ ಶರಣು ಸಮರ್ಪಿಸಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...