ಬೀದರ್‌ | ಬೆರಗು ಹುಟ್ಟಿಸುವ ಕಲ್ಯಾಣದ ಅನುಭವ ಮಂಟಪ : ಕಥೆಗಾರ ಮಹಾಂತೇಶ ನವಲಕಲ್

Date:

ಬಸವಕಲ್ಯಾಣದ ಅನುಭವ ಮಂಟಪ, ಮಹಾಮನೆ, ತ್ರಿಪುರಾಂತ ಈ ಎಲ್ಲ ಶಬ್ದಗಳು ಏಕಕಾಲದಲ್ಲಿ ಬೆರಗು ಹಾಗೂ ಸಂವೇದನೆಗಳು ಹುಟ್ಟಿಸುತ್ತವೆʼ ಎಂದು ರಾಯಚೂರಿನ ಕಥೆಗಾರ ಮಹಾಂತೇಶ ನವಲಕಲ್ ಹೇಳಿದರು.

ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲೇಖಕರೊಂದಿಗೆ ಸಂವಾದ ಸಮಾರಂಭದಲ್ಲಿ ಮಾತನಾಡಿದ ಅವರು, ʼ ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ವಚನಕಾರರಲ್ಲಿ ಕಲ್ಯಾಣ ಸಾಂಸ್ಕೃತಿಕ ವ್ಯಾಖ್ಯಾನ ಪಡೆದ ಊರು. ಅಕ್ಕ, ಅಲ್ಲಮ, ಬಸವಣ್ಣ ಸೇರಿ ಹಲವು ವಚನಕಾರರು ಕಲ್ಯಾಣದ ಪರಿಕಲ್ಪನೆ ಬೌದ್ಧಿಕ, ವೈಚಾರಿಕ, ಅನುಭಾವಿಕ ನೆಲೆಗಳಲ್ಲಿ ಕಟ್ಟಿಕೊಟ್ಟಿದ್ದಾರೆʼ ಎಂದರು.

ʼಬಹುದೊಡ್ಡ ಮಹಾರಾಜರಿದ್ದವರು ಕಾಯಕ ಜೀವಿಗಳಾಗಿ, ಶಿವಶರಣರಾಗಿ ಕಲ್ಯಾಣದ ಬೀದಿಯಲ್ಲಿ ಸ್ವಾತಂತ್ರ್ಯದ ತಾತ್ವಿಕತೆ ತಿಳಿಸಿದ್ದರು. ಲಿಂಗ ತಾರತಮ್ಯ ಹಾಗೂ ಜಾತಿಯತೆ ವಿರುದ್ಧ ದೊಡ್ಡ ದನಿಯಾದ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿಯೇ ದುಡಿಯುವರ ವರ್ಗದ ಸಮಾಜವನ್ನು ನಿರ್ಮಿಸಿದ್ದರು. ಕಾರ್ಲ್ ಮಾರ್ಕ್ಸ್ ಪರಿಕಲ್ಪನೆ ಅಂದಿನ ಕಾಲದಲ್ಲಿಯೇ ಬಸವಣ್ಣ ಅನುಷ್ಠಾನಕ್ಕೆ ತಂದಿದ್ದರುʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2025 06 14 at 9.34.27 AM
ಕಥೆಗಾರ ಮಹಾಂತೇಶ ನವಲಕಲ್ ಅವರು ಮಾತನಾಡಿದರು.

ಬೀದರ ವಿಶ್ವವಿದ್ಯಾಲಯದ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ಪಠ್ಯಕ್ಕಿರುವ ಮಹಾಂತೇಶ ನವಲಕಲ್ ಅವರ  ‘ಬುದ್ಧ ಗಂಟೆಯ ಸದ್ದು’ ಕತೆಯ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ʼಉದಾರವಾದಿ ಮಾರುಕಟ್ಟೆ ಅನುಸರಿಸುವ  ನೀತಿಯಿಂದ ಎಲ್ಲಕ್ಕಿಂತ ಹೆಚ್ಚಾಗಿ ಅಪಾಯ ಎದುರಾದದ್ದು ರೈತರಿಗೆ. ರೈತನ ಬದುಕು ಹಸನು ಮಾಡಲು ಬೇಕಾದ ಉಳುಮೆ ಬೀಜ, ಕೀಟನಾಶಕ, ರಸಗೊಬ್ಬರ ಮಾರುಕಟ್ಟೆ ತಂತ್ರಗಾರಿಕೆಯಿಂದ, ಕಂಪನಿಯ ಲಾಭಕೋರತನದಿಂದ ರೈತನನ್ನು ಸಾವಿನ ಮನೆಗೆ ದೂಡುತ್ತಿವೆʼ ಎಂದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಭಾರತೀಯ ಸಾಮಾಜಿಕ  ಹಾಗೂ ಸಾಂಸ್ಕೃತಿಕ ಸಂದರ್ಭದಲ್ಲಿ ನೆಲ, ನೀರು, ಕಾಡಿಗೆ ವಿಶಿಷ್ಟ ಸ್ಥಾನವಿದೆ.  ಭೂಮಿ ಅನ್ನ ಕೊಡುವ ಜೊತೆಗೆ ಎಲ್ಲ ಜೀವಿಗಳು ಜೀವಿಸುವ ತಾಣವಾಗಿದೆ.  ಆಧುನಿಕ ಕಾಲಘಟ್ಟದಲ್ಲಿ, ಜಾಗತೀಕರಣದ ಸಂದರ್ಭದಲ್ಲಿ ನೆಲವನ್ನು ಸರಕಾಗಿ ಪರಿಗಣಿಸಲಾಗಿದೆ. ಉಳುಮೆ ಮಾಡುವವರು ನಶಿಸಿ ಹೋದರೆ ಸಹಜವಾಗಿ ಬಂಡವಾಳಶಾಹಿಗಳ ವಶಕ್ಕೆ ಭೂಮಿ ಹೋಗುವಂತೆ ಪ್ರಭುತ್ವಗಳು ತಂತ್ರಗಾರಿಕೆ ಅಡಗಿರುತ್ತದೆʼ ಎಂದರು.

ʼಕಥೆಗಾರ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕತೆ ಲಾಭದ ಲೆಕ್ಕಾಚಾರ ಇರುವ ಮಾರುಕಟ್ಟೆಗೆ ಮಾನವಿಯತೆಯ ಗುಣ ಇರುವುದಿಲ್ಲ. ರೈತರ ಬದುಕು ಮಾರುಕಟ್ಟೆಯಲ್ಲಿ ಅಮೌಲೀಕರಣಗೊಂಡ ಬಗೆ, ಮನುಷ್ಯನ ಮೂಲ ಪ್ರವೃತ್ತಿಯಾದ ಕಾಮವನ್ನು ಮಾರುಕಟ್ಟೆ ಬಳಸಿಕೊಳ್ಳುವ ವಿಧಾನ ಈ ಕತೆ ಧ್ವನಿಸುತ್ತದೆʼ ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ : ಜೂ.17ರಂದು ಕಲಬುರ್ಗಿ ವಿಭಾಗ ಯುವ ಕವಿಗೋಷ್ಠಿ: ಸಂಗಪ್ಪಾ ತೌಡಿ, ಅಜಿನ್‌ ನೇಳಗಿ ಆಯ್ಕೆ

ಐಕ್ಯುಎಸಿ ಸಂಯೋಜಕ ಪವನ ಪಾಟೀಲ, ಗಂಗಾಧರ ಸಾಲಿಮಠ, ರೋಷನ್ ಬಿ ಯದಲಾಪುರ, ನೀಲಮ್ಮ ಮೇತ್ರೆ, ನಾಗರಾಜ ನಾಸೆ, ಕೃಷ್ಣ ಗೌಳಿ, ಸಾಯಿರಾಜ ಪಾಟೀಲ,  ಸಚಿನ್ ಬಿಡವೆ, ಎಂಡಿ ಜಬಿ, ಇಮ್ತಿಯಾಜ್ ಮೊದಲಾದವರು ಉಪಸ್ಥಿತರಿದ್ದರು. ಸ್ನೇಹಾ ರಾಜಪೂತ್ ಸ್ವಾಗತಿಸಿದರು. ಪೃಥ್ವಿ ಪಾಟೀಲ ನಿರೂಪಿಸಿದರು. ಮಹೇಶ್ವರಿ ಬಿರಾದಾರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...