ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣವನ್ನು ಶನಿವಾರ ಜಿಲ್ಲಾದ್ಯಂತ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ 69ನೇ ಮಹಾಪರಿನಿರ್ವಾಣ ಅಂಗವಾಗಿ ಶನಿವಾರ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು ʼದೇಶದಲ್ಲಿರುವ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ಕಲ್ಪಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಅನುಸರಿಸಿ ಬದುಕು ಸಾರ್ಥಕಗೊಳಿಸಬೇಕು. ಡಾ.ಬಿ.ಆರ್.ಅಂಬೇಡ್ಕರ ಅವರ ಸೈದ್ಧಾಂತಿಕ ಹೋರಾಟ ಮತ್ತು ವಿಚಾರಧಾರೆ ಸರ್ವಶ್ರೇಷ್ಠವಾಗಿವೆʼ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ದಲಿತಪರ ಸಂಘಟನೆಗಳ ಒಕ್ಕೂಟದ
ಅಧ್ಯಕ್ಷ ವಿಲಾಸ ಮೋರೆ, ಪ್ರಮುಖರಾದ ಕೈಲಾಸ ಭಾವಿಕಟ್ಟಿ, ಸಂಜೀವಕುಮಾರ ಭಾವಿಕಟ್ಟಿ, ಧನರಾಜ ಕುಂದೆ, ಪ್ರಕಾಶ ಭಾವಿಕಟ್ಟಿ, ಜೈಪಾಲ ಭೋರಾಳೆ ಸೇರಿದಂತೆ ಹಲವರು ಇದ್ದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನ ಆಚರಣೆ
ವಿಶ್ವರತ್ನ ಸಂವಿಧಾನಶಿಲ್ಪಿ ಮಹಾ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ನೌಬಾದನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹಾಗೂ ಶಂಕುತಲಾ ಬೆಲ್ದಾಳೆ, ವಿಶೇಷ ಉಪನ್ಯಾಸಕ ಡಾ.ಗೌತಮ್, ಜಿಲ್ಲಾ ಪರಿಶಿಷ್ಟ ಪಂಗಡ ಘಟಕದ ಜಿಲ್ಲಾಧ್ಯಕ್ಷರಾದ ರವಿ ನಿಜಾಂಪೂರೆ ಲುಂಬಾಣಿ ಗೌತಮ್ ಅವರು ಅಂಬೇಡ್ಕರರವರ ಜೀವನ ಚರಿತ್ರೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಈಶ್ವರ ಸಿಂಗ್ ಠಾಕೂರ್, ರಾಜಶೇಖೆ ನಾಗಮೂರ್ತಿ, ಕಿರಣ ಪಾಟೀಲ್, ಬಾಬುರಾವ ಕಾರುಬಾರಿ, ರಾಜಕುಮಾರ ನೇಮತಾಬಾದ, ಶಶಿ ಹೊಸಳ್ಳಿ, ದೀಪಕ ಗಾದಗಿ , ಜೈಭೀಮ ಬಂಧು, ಯೊಗೇಶ್ವರಿ ಸೋಮು ಕಾಂಬಳೆ, ಸಂತೋಷ ರೆಡ್ಡಿ, ಸತೀಶ ರಾಠೋಡ್, ರೋಶನ್ ವರ್ಮಾ, ನವೀನ ಚಿಟ್ಟಾ, ರಾಜು ಪೋಳು, ಸತೀಶ ದೊಡ್ಡಿ, ನರೇಶ ಗೌಳಿ, ಗಣೇಶಭೋಸ್ಲೆ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕರಾದ ಶ್ರೀನಿವಾಸ ಚೌದರಿ ಅವರು ಉಪಸ್ಥಿತರಿದ್ದರು.
ಕೌಡಗಾಂವ್‌ನಲ್ಲಿ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನ ಆಚರಣೆ :
ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸತೀಷ ವಗ್ಗೆ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅನೇಕ ನೋವು, ಸಂಕಟ, ಅಪಮಾನಗಳನ್ನು ಮೆಟ್ಟಿ ನಿಂತು ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅವರ ಹೋರಾಟದ ಬದುಕೇ ನಮಗೆ ಆದರ್ಶ. ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಪಾಲಿಸೋಣʼ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಗನಾಥ್ ಮೇತ್ರೆ, ಸತೀಶ್ ಹಾರೂರಗೇರಿಕರ್, ಶಿವರಾಜ ವಗ್ಗೆ, ಲಕ್ಷ್ಮಣ್ ಮೇತ್ರೆ, ಶಿವರಾಜ ಮೇತ್ರೆ, ಅಖಿಲೇಶ್ ಸಾಗರ್, ಶಾಂತಕುಮಾರ್ ಮೇತ್ರೆ, ಪಾಂಡುರಂಗ ಸಾಧು, ಸುಧಾಕರ್ ಬಡಿಗೇರ್, ಸಂತೋಷ್ ಹಲಬುರ್ಗಿ, ಸುನಿಲ್ ಹೋಳಿಗೆ, ಲಕ್ಷ್ಮಿ ಮೇತ್ರೆ, ಬಂಡೆಮ್ಮ ವಗ್ಗೆ. ಲಕ್ಷ್ಮಿ, ಶ್ರೀದೇವಿ, ಜಗದೇವಿ, ಕಾಶಿಬಾಯಿ ಸೇರಿದಂತೆ ಮತ್ತಿತರರಿದ್ದರು.
ಅಂಬೇಡ್ಕರ ಅವರಿಂದ ನೆಮ್ಮದಿ ಜೀವನ : ಶಿವಪುತ್ರ ಧರಣಿ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸೃಜನಶೀಲ ವ್ಯಕ್ತಿತ್ವದವರಾಗಿದ್ದರು. ದೇಶದಲ್ಲಿ ನೆಲೆಯೂರಿದ ಅಸ್ಪೃಶ್ಯತೆ, ಅಸಮಾನತೆ, ಜಾತಿಯತೆ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ನೆಮ್ಮದಿ ಜೀವನ ದೊರಕುವಂತೆ ಮಾಡಿದ್ದಾರೆ ಎಂದು ಉಪನ್ಯಾಸಕ ಶಿವಪುತ್ರ ಧರಣಿ ಹೇಳಿದರು.

ಔರಾದ್ ತಾಲೂಕಿನ ಸಂತಪೂರ ಗ್ರಾಮದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, ʼಅಂಬೇಡ್ಕರ ಅವರು ರಚಿಸಿದ ಸಂವಿಧಾನದಿಂದ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಮಾನವೀಯತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಬಾಬಾ ಸಾಹೇಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕುʼ ಎಂದು ಹೇಳಿದರು.
ಉಪನ್ಯಾಸಕರಾದ ಮೀರಾತಾಯಿ ಕಾಂಬಳೆ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಪ್ರಿಯಾಂಕಾ ಗುನ್ನಳ್ಳಿಕರ್, ಅಶ್ವಿನಿ ಹಿಂದೊಡ್ಡೆ, ರಾಜಕುಮಾರ ಹಳ್ಳಿಕರ್, ಸುಧೀರ್ ಅಲೂರೆ, ಮಹಾಂತೇಶ ಪಾಂಚಾಳ, ಸಂತೋಷ ಧೂಳ್ಗಂಡೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.





