ಬೀದರ್‌ | ಅಳಿವಿನಂಚಿನಲ್ಲಿ ಪೊರಕೆ : ಹೆಳವರ ಕುಟುಂಬಕ್ಕೆ ಬೇಕಿದೆ ಸಹಾಯ ಹಸ್ತ

Date:

ಔರಾದ್‌ ಪಟ್ಟಣದಲ್ಲಿ ದೇಸಿ ಹುಲ್ಲುಕಡ್ಡಿ ಪೊರಕೆ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸುಮಾರು 50ಕ್ಕೂ ಅಧಿಕ ಹೆಳವ ಸಮುದಾಯದ ಕುಟುಂಬಗಳಿವೆ. ಆದರೆ, ಜಾಗತೀಕರಣದ ಭರಾಟೆಯಲ್ಲಿ ಹುಲ್ಲುಕಡ್ಡಿ ಪೊರಕೆ ಮೂಲೆ ಸೇರಿವೆ. ಇದೀಗ ಹೇಳವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಪಟ್ಟಣದ ಗಾಂಧಿ ಚೌಕ್ ಸಮೀಪದ ಬಡಾವಣೆಯಲ್ಲಿ ಹೇಳವ ಸಮುದಾಯದ ಸುಮಾರು 50ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಮೂರ್ನಾಲ್ಕು ದಶಕದಿಂದ ಮಹಿಳೆಯರು ರಸ್ತೆ, ಮನೆ ಸ್ವಚ್ಚ ಮಾಡುವ ಪೊರಕೆ ತಯಾರಿಸುವ ಕುಲಕಸುಬು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಪುರುಷರು ಮೀನು ಹಿಡಿಯುವ ಕಾಯಕ ನಡೆಸಿ ಉಪ ಜೀವನ ನಡೆಸುತ್ತಿದ್ದಾರೆ.

WhatsApp Image 2024 11 17 at 7.55.19 PM
ಔರಾದ್‌ ಪಟ್ಟಣದ ಗಾಂಧಿ ಚೌಕ್‌ ಬಡಾವಣೆಯಲ್ಲಿ ಪೊರಕೆ ತಯಾರಿಸುತ್ತಿರುವ ಮಹಿಳೆಯರು

ಇಲ್ಲಿನ ಕೆಲ ಕುಟುಂಬಗಳಿಗೆ ಪೊರಕೆಯೇ ಜೀವನಾಧಾರ. ಆದರೆ, ಆಧುನಿಕತೆಯ ಬಿರುಗಾಳಿಯ ಸುಳಿಗೆ ಈ ಕುಟುಂಬಗಳೂ ಸಿಲುಕಿ ನಲುಗುತ್ತಿದ್ದು, ಸರ್ಕಾರದ ಸಹಾಯಧನದಿಂದಲೂ ವಂಚಿತರಾಗಿ ಬದುಕು ದೂಡುತ್ತಿದ್ದೇವೆ. ನಮ್ಮ ಸಂಕಷ್ಟ ಯಾರೂ ಕೇಳೋರಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೊರಕೆ ತಯಾರಿಕೆಗೆ ಬೇಕಾದ ಈಚಲ ಮರದ ಗರಿಗಳು ತಾಲೂಕಿನ ಸಿಗದ ಕಾರಣ ಕಲಬುರಗಿ ಜಿಲ್ಲೆಯ ಚಿಂಚೋಳಿ ಹಾಗೂ ನೆರೆಯ ತೆಲಂಗಾಣದ ತಾಂಡೂರ ಸೇರಿದಂತೆ ವಿವಿಧೆಡೆ ತೆರಳಿ ದುಬಾರಿ ಬೆಲೆ ನೀಡಿ ಖರೀದಿಸುತ್ತೇವೆ. ಒಂದೆರಡು ತಿಂಗಳು ಅಲ್ಲೇ ನೆಲೆಸಿ ತರುತ್ತೇವೆ ಎಂದು ಹೇಳುತ್ತಾರೆ ಶೋಭಾ

WhatsApp Image 2024 11 17 at 9.16.02 PM 1 1
ಕಮಲನಗರ ಪಟ್ಟಣದ ರೈಲ್ವೆ ಸೇತುವೆ ಪಕ್ಕದಲ್ಲಿ ಟಿನ್‌ಶೆಡ್‌ನಲ್ಲಿ ವಾಸಿಸುವ ಪೊರಕೆ ತಯಾರಿಸುವ ಕುಟುಂಬಗಳು

ಸಿಂದಿ ಮರದ ಗರಿಗಳನ್ನು ಮನೆಯಂಗಳದಲ್ಲಿ ಒಣಗಿಸಿ, ಹದಗೊಳಿಸಿ ಕೈಯಿಂದಲೇ ಪೊರಕೆ ನೇಯುತ್ತಾರೆ. ದಿನಕ್ಕೆ 50 ರಿಂದ 60 ಪೊರಕೆ ಸಿದ್ದಪಡಿಸುತ್ತೇವೆ. ಈ ಹಿಂದೆ ಪೊರಕೆಗಳಿಗೆ ಬಹಳ ಬೇಡಿಕೆ ಇತ್ತು. ಈಗ ಮಾರುಕಟ್ಟೆಯಲ್ಲಿ ಹುಲ್ಲುಕಡ್ಡಿ ಪೊರಕೆಗೆ ಬೇಡಿಕೆಯಿಲ್ಲ. ಮಾರಾಟಕ್ಕೆ ಸೂಕ್ತ ಮಾರುಕಟ್ಟೆಗಳಿಲ್ಲದ ಕಾರಣ ವಾರದ ಸಂತೆ ಅಥವಾ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಮಾರಾಟ ಮಾಡುತ್ತೇವೆ. ಒಂದು ಪೊರಕೆ ಬೆಲೆ 20 ರಿಂದ 30 ರೂ. ಇದೆ. ಅದೇ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಪೊರಕೆ ತಯಾರಿಸುವ ಮಹಿಳೆಯರು.

ʼಸುಮಾರು 3-4 ದಶಕಗಳಿಂದ ಇದೇ ಕಾಯಕ ಮಾಡಿಕೊಂಡು ಬರುತ್ತಿದ್ದೇವೆ. ಉಪ ಜೀವನಕ್ಕೆ ಇದೇ ಆಧಾರವಾಗಿದೆ.‌ ಆದರೆ, ಪೊರಕೆ ಬೇಡಿಕೆ ಕುಗ್ಗಿದ ಕಾರಣ ಲಾಭ ಆಗುತ್ತಿಲ್ಲ. ಸರ್ಕಾರದ ಯಾವುದೇ ಯೋಜನೆಗಳು ನಮಗೆ ತಲುಪುತ್ತಿಲ್ಲ ಎಂದು ಶಿವಮ್ಮ ಬೇಸರ ವ್ಯಕ್ತಪಡಿಸಿದರು.

ಕಮಲನಗರ ಪಟ್ಟಣದ ರೈಲ್ವೆ ಸೇತುವೆ ಪಕ್ಕದಲ್ಲಿ ವಾಸಿಸುವ ಪೊರಕೆ ತಯಾರಿಸುವ ಐದಾರು ಕುಟುಂಬಗಳು ವಾಸವಾಗಿವೆ. ಕಳೆದ ಹಲವು ವರ್ಷಗಳಿಂದ ಟಿನ್‌ಶೆಡ್ ನಲ್ಲಿ ವಾಸಿಸುತ್ತಾರೆ. ಮೂಲ ಸೌಕರ್ಯವೂ ಇಲ್ಲ. ಬದುಕಿಗೆ ಆಸರೆಯಾದ ಪೊರಕೆ ಕುಲಕುಸುಬು ನೆಲಕಚ್ಚಿದಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ಕನಿಷ್ಠ ಸೂರು ಕಲ್ಪಿಸಬೇಕು ಎಂದು ಹೆಳವ ಸಮಾಜದ ಸಂತೋಷ ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಅನರ್ಹರ ಬಿಪಿಎಲ್ ಕಾರ್ಡ್‌ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

ʼಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಹೆಳವ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ, ಸರ್ಕಾರಗಳು ಗಮನ ಹರಿಸುತ್ತಿಲ್ಲ. ಪೊರಕೆ ತಯಾರಿಕೆ, ಮೀನು ಹಿಡಿಯುವ ಕಾಯಕ ಸೇರಿದಂತೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಉನ್ನತ ವ್ಯಾಸಂಗ ಮಾಡಿದರೂ ನಮ್ಮಂಥ ಯುವಕರು ಉದ್ಯೋಗ ಇಲ್ಲದೆ ಪರದಾಡುತ್ತಿದ್ದೇವೆ. ಸರ್ಕಾರದ ಸಹಾಯಧನ ಕೂಡ ಸಿಗುತ್ತಿಲ್ಲʼ ಎಂದು ಹೆಳವ ಸಮುದಾಯದ ಈಶ್ವರ ಔರಾದ್ ಹೇಳುತ್ತಾರೆ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...