ಬೀದರ್‌ | ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪಣ ತೊಡಿ : ಭಾನುಪ್ರತಾಪ ಸಿಂಗ್

Date:

ʼಇಂದು ದೇಶದಲ್ಲಿ ಮನುವಾದ, ಅಸಮಾನತೆ, ಸಂವಿಧಾನ ವಿರುದ್ಧ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ಸರ್ಕಾರಗಳಿಂದಲೇ ನಡೆಯುತ್ತಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯವಾದಿ ಭಾನುಪ್ರತಾಪ ಸಿಂಗ್ ಹೇಳಿದರು.

ʼಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಬೀದರ್‌ ಜಿಲ್ಲಾ ಘಟಕದಿಂದ ನಾಗಪುರದ ದೀಕ್ಷಾಭೂಮಿ ಕಾರ್ಯಕ್ರಮದ ಅಂಗವಾಗಿ ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬಹುಜನ ಜಾಗೃತಿ ಸಮಾವೇಶ ಹಾಗೂ ರಾಜ್ಯಮಟ್ಟದ ಬುದ್ಧ, ಭೀಮ ಗೀತೆಗಳ ಭಜನೆ ಸಂಗೀತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

ʼಶಾಂತಿ, ಸಮಾನತೆ, ಬಂಧುತ್ವ ಮರು ನಿರ್ಮಾಣ ಮಾಡಲು ದೇಶದ ಬಹುಜನರು ಡಾ.ಬಿ.ಆರ್‌.ಅಂಬೇಡ್ಕರ್ ಅವರು ತೋರಿಸಿದ ತಥಾಗತ ಗೌತಮ ಬುದ್ಧನ ಬೌದ್ಧ ಧರ್ಮ ಸ್ವೀಕರಿಸಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು. ಮನುವಾದ ದೇಶದಿಂದ ಶಾಶ್ವತವಾಗಿ ನಿರ್ನಾಮ ಮಾಡಲು ಸಾಮೂಹಿಕ ಹೋರಾಟದ ಅವಶ್ಯಕತೆ ಇದೆʼ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಬಹುಜನರು ದೇಶವನ್ನು ಗೌರವಿಸುವಾಗ ಭಾರತ ಅಥವಾ ಇಂಡಿಯಾ ಎಂದು ಮಾತ್ರ ಹೇಳಬೇಕು. ಹಿಂದುಸ್ತಾನ ಪದ ಬಳಸಬಾರದು. ಸಂವಿಧಾನದಲ್ಲಿ ಸಹ ಅವಕಾಶ ಇಲ್ಲ ಎಂದು ಹೇಳಿದ ಅವರು ಡಾ.ಅಂಬೇಡ್ಕರ್ ರವರು ಸಾಕಷ್ಟು ನೋವು ಸಹಿಸುಕೊಂಡು ನಮ್ಮೆಲರಿಗೆ ಸಂವಿಧಾನದ ಮೂಲಕ ಮುಕ್ತಿ ನೀಡಿದ್ದಾರೆ. ಸಂವಿಧಾನ ಸಂಪೂರ್ಣ ಅನುಷ್ಠಾನ ಆಗಬೇಕಾದರೆ ಬಹುಜನರು ರಾಜಕೀಯವಾಗಿ ಮುಂದೆ ಬರಬೇಕಿದೆʼ ಎಂದರು.

ಈಚೆಗೆ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಮನುವಾದಿ ಹಿನ್ನೆಲೆಯ ರಾಕೇಶ ಕಿಶೋರ್ ಎಂಬ ವಕೀಲನೊಬ್ಬ ಶೂ ಎಸೆದಿರುವುದು ಅತ್ಯಂತ ಖಂಡನೀಯ. ಇದರ ಹಿಂದೆ ಮನುವಾದಿಗಳ ದೊಡ್ಡ ಷಡ್ಯಂತ್ರವಿದೆ. ಇದಕ್ಕೆ ಭಾರತೀಯ ಪ್ರತಿಯೊಬ್ಬ ನಾಗರಿಕರೂ ಖಂಡಿಸಲೇಬೇಕುʼ ಎಂದು ಹೇಳಿದರು

ಕಾರ್ಯಕ್ರಮದಲ್ಲಿ ಭಂತೆ ಜ್ಞಾನ ಸಾಗರ ಸಾನಿಧ್ಯ ವಹಿಸಿದರು. ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕಾಂಚೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡರಾದ ವೈಜಿನಾಥ ಸೂರ್ಯವಂಶಿ, ನ್ಯಾಯವಾದಿ ಬಿ.ಕೃಷ್ಣಪ್ಪ, ವಿಶ್ವನಾಥ ದೀನೆ, ವಿಜಯಕುಮಾರ್ ಸೋನಾರೆ, ದಯಾನಂದ ನೌಲೆ, ಡಾ.ಅಮೃತ ಎಸ್.ಮೊಳಕೇರೆ, ರಾಜಕುಮಾರ ಮೂಲಭಾರತಿ, ಚಂದ್ರಕಾಂತ ನಿರಾಟೆ, ಪ್ರಕಾಶ ಠಾಕೂರ್, ಮಹೇಶ ಗೋರನಾಳಕರ್, ಬಬ್ರವಾನ್ ಬೆಳಮಗಿ, ಸಂಜುಕುಮಾರ ಡಾಕುಳಗಿ, ಕಂಟೆಪ್ಪಾ ಪೂಜಾರಿ, ಸುರೇಶ ಜೋಜನಾಕರ್, ರಾಜಕುಮಾರ ಗೂನಳ್ಳಿ, ಮಲ್ಲಿಕಾರ್ಜುನ ಮಹೇಂದ್ರಕುಮಾರ, ರಾಜಕುಮಾರ ಕಾಂಬಳೆ, ನರಸಿಂಗ್ ಸಾಮ್ರಾಟ, ಘಾಳೆಪ್ಪಾ ಮೈಲೂರೆ, ಗೋಪಲರಾವ ಹೊಸಮನಿ, ಸತೀಶಕುಮಾರ ದೀನೆ ಮತ್ತಿತರರಿದ್ದರು.

ಇದನ್ನೂ ಓದಿ : ಬೀದರ್‌ | ಮಾಧ್ಯಮಗಳ ಪ್ರಾಮಾಣಿಕತೆ-ಬದ್ಧತೆಯಿಂದ ಸಾಮಾಜಿಕ ಏಳಿಗೆ ಸಾಧ್ಯ : ಡಾ.ಪ್ರಹ್ಲಾದ ಚೆಂಗಟಿ

ಕರ್ನಾಟಕ  ಪಂಚಶೀಲ ಸಾಹಿತ್ಯ ಕಲಾ ಸಮಿತಿಯ ಅರ್ಜುನ ಕಾಂಚೆ ಸ್ವಾಗತ ಗೀತೆ ನಡೆಸಿಕೊಟ್ಟರು. ಸೂರ್ಯಕಾಂತ ಬಡಿಗೆರ್ ಸ್ವಾಗತಿಸಿದರು. ಕರ್ನಾಟಕ ದಲಿತ ರಕ್ಷಣಾ ವೆದಿಕೆ ಅಧ್ಯಕ್ಷ ಅಂಬಾದಾಸ ಗಾಯಕವಾಡ ನಿರೂಪಿಸಿದರು. ರೇಖಾ ಕಾಂಚೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...