ಬೀದರ್‌ | ವಸತಿ ಶಾಲೆಯಲ್ಲಿ 6ನೇ ತರಗತಿಗೆ ಖಾಲಿಯಿರುವ ಸೀಟು ಭರ್ತಿಗೆ ಕೌನ್ಸಲಿಂಗ್

Date:

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ 6ನೇ ತರಗತಿಯಲ್ಲಿ ಖಾಲಿ ಉಳಿದಿರುವ ಸ್ಥಾನಗಳ ದಾಖಲಾತಿಗೆ ಕೌನ್ಸಿಲಿಂಗ್ ಆಗಸ್ಟ್ 14 ರಂದು ಬೆಳಿಗ್ಗೆ 10:30ಕ್ಕೆ ಬೀದರ್‌ನ ನೌಬಾದ್‌ನಲ್ಲಿರುವ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಿಗದಿಪಡಿಸಲಾಗಿದ್ದು, ಅರ್ಹ ಮಕ್ಕಳು ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಬೀದರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

2025-26ನೇ ಸಾಲಿಗಾಗಿ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರೈಸ್ ಅಡಿಯ ವಸತಿ ಶಾಲೆಗಳಿಗೆ ಕೆಇಎ ಮುಖಾಂತರ 6ನೇ ತರಗತಿಗೆ ಮೆರಿಟ್ ಆಧಾರದ ಮೇಲೆ ವಿವಿಧ ಮೀಸಲಾತಿ ವರ್ಗಗಳಲ್ಲಿ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸ್ಥಳ ನಿಯುಕ್ತಿಗೊಳಿಸಿದ ನಂತರ ವಿಶೇಷ ವರ್ಗದ ಮಕ್ಕಳಿಗೆ ಕೌನ್ಸಲಿಂಗ್ ನಡೆಸಿ ಸ್ಥಳ ನಿಯುಕ್ತಿ ಮಾಡಲಾಗಿದೆ ಎಂದಿದ್ದಾರೆ.

ಪ್ರಸಕ್ತ 6 ನೇ ತರಗತಿಯಲ್ಲಿ ವಸತಿ ಶಾಲೆಗಳಲ್ಲಿ ವರ್ಗವಾರು, ಲಿಂಗವಾರು ಖಾಲಿಯುಳಿದ ಸಾಮಾನ್ಯ ವರ್ಗ (ಇತರೆ)ಹೆಣ್ಣು-2 ಗಂಡು 5, ಪ್ರವರ್ಗ-1 ಹೆಣ್ಣು-7, ಪರಿಶಿಷ್ಟ ಜಾತಿ ಹೆಣ್ಣು-55 ಗಂಡು 12, ಪರಿಶಿಷ್ಟ ಪಂಗಡ ಹೆಣ್ಣು-14, ಪ್ರವರ್ಗ 2 (ಎ) ಹೆಣ್ಣು-14 ಗಂಡು 9, ಪ್ರವರ್ಗ 2(ಬಿ) ಹೆಣ್ಣು-8, ಗಂಡು-7, ಪ್ರವರ್ಗ 3(ಎ) ಹೆಣ್ಣು 7 ಗಂಡು 7 , ಪ್ರವರ್ಗ 3(ಬಿ) ಹೆಣ್ಣು 7 ಒಟ್ಟು 152 ಸೀಟುಗಳ ಭರ್ತಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ಮಾನ್ಯ ಸಹಾಯಕ ಆಯುಕ್ತರು ಬಸವಕಲ್ಯಾಣ ಹಾಗೂ ಬೀದರ ಇವರ ಅಧ್ಯಕ್ಷತೆಯ ಸಮಿತಿ ನಿರ್ಧರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮೆರಿಟ್ ಆಧಾರದ ಮೇಲೆ ಅರ್ಹರಿರುವ ವಿದ್ಯಾರ್ಥಿಗಳನ್ನು ವರ್ಗಾವಾರು, ಲಿಂಗಾವಾರು, ಮೀಸಲಾತಿ ರೋಸ್ಟರ್ ಪ್ರಕಾರ ಕೌನ್ಸಿಲಿಂಗ್ ನಡೆಸಲು ಅಂಕಗಳ ಕಟ್ ಆಫ್ ನಿಗದಿ ಮಾಡಿದ್ದು ಶೇಕಡಾ ಅಂಕಗಳನ್ನು  ಸಮಿತಿಯ ಸದಸ್ಯರು ನಿಗದಿಪಡಿಸಿರುತ್ತಾರೆ. ಸಾಮಾನ್ಯ ವರ್ಗ (ಇತರೆ) ಹೆಣ್ಣು-72 ಅಂಕ  ಗಂಡು 75 ಅಂಕ, ಪ್ರವರ್ಗ-1 ಹೆಣ್ಣು-39, ಪರಿಶಿಷ್ಟ ಜಾತಿ ಹೆಣ್ಣು-26 ಅಂಕ, ಗಂಡು 49 ಅಂಕ, ಪರಿಶಿಷ್ಟ ಪಂಗಡ ಹೆಣ್ಣು-47 ಅಂಕ , ಪ್ರವರ್ಗ 2 ಎ ಹೆಣ್ಣು-131 ಅಂಕ ಗಂಡು 49 ಅಂಕ, ಪ್ರವರ್ಗ 2ಬಿ ಹೆಣ್ಣು-16 , ಗಂಡು-46 ಅಂಕ, ಪ್ರವರ್ಗ 3ಎ ಹೆಣ್ಣು 44 ಅಂಕ,  ಗಂಡು 57 ಅಂಕ, ಪ್ರವರ್ಗ 3ಬಿ ಹೆಣ್ಣು 69 ಮೆರಿಟ್ ಕಟ್-ಆಪ್ ಅಂಕ ಇದ್ದ ಅರ್ಹ ಮಕ್ಕಳಿರುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೀದರ್‌ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...