ಬೀದರ್‌ | ಸೈಬರ್ ವಂಚನೆ : 3 ವರ್ಷದಲ್ಲಿ ₹8.18 ಕೋಟಿ ದೋಖಾ

Date:

ದೇಶದಲ್ಲಿ ಡಿಜಿಟಲೀಕರಣದ ವ್ಯಾಪ್ತಿ ವಿಸ್ತರಣೆಯಾಗಿ ಸ್ಮಾರ್ಟ್‌ಪೋನ್‌ಗಳ ಸಂಖ್ಯೆಯೂ ಹೆಚ್ಚಾದಂತೆ ದಿಢೀರ್‌ ಶ್ರೀಮಂತರಾಗಬೇಕೆಂಬ ಆಸೆಯಿಂದ ಅಮಾಯಕರು ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿರುವ ಸೈಬರ್ ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿವೆ.

ಇದೇ ವರ್ಷ ಹರಿಯಾಣ ಮೂಲದ ಶಿಕ್ಷಕರೊಬ್ಬರು ಹುಮನಾಬಾದ್ ಪಟ್ಟಣದ ಖಾಸಗಿ ಶಾಲೆಯಲ್ಲಿ ವೃತ್ತಿ ಮಾಡುತ್ತಿದ್ದರು. ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಸಿಂಗಾಪುರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಶಿಕ್ಷಕನ ಇಮೇಲ್‌ಗೆ ಹುದ್ದೆಯ ದಾಖಲಾತಿ, ವೇತನ ಹಾಗೂ ರಜಿಸ್ಟ್ರರೇಶನ್ ಕಳುಹಿಸಿದರು. ವಿದೇಶದಲ್ಲಿ ಕೆಲಸ ಸಿಕ್ಕಿತೆಂಬ ಖುಷಿಯಲ್ಲಿ ನಂಬಿದ ಶಿಕ್ಷಕ ಇಮೇಲ್‌ಗೆ ಬಂದ ಲಿಂಕ್‌ ಮೂಲಕ ಮೊದಲು ₹5 ಸಾವಿರ ಹಣ ವರ್ಗಾವಣೆ ಮಾಡಿದರು.

ಅಷ್ಟಕ್ಕೆ ಬಿಡದ ವಂಚಕರು ಬೇರೆ-ಬೇರೆ ಮೊಬೈಲ್‌ ಸಂಖ್ಯೆಗಳಿಂದ ಶಿಕ್ಷಕನಿಗೆ ಕರೆ ಮಾಡಿ, ಪ್ರೋಫೈಲ್‌ ವೇರಿಫಿಕೇಶನ್‌, ಎನ್‌ಓಸಿ ಡಿಪಾಜಿಟ್, ಐಡೆಂಟಿಟಿ ಚೆಕ್‌,‌ ಜಾಬ್‌ ಕೋಡ್‌, ಪ್ರೋಫೈಲ್‌ ಕ್ಲೋಜಿಂಗ್‌, ಎಂಪ್ಲಾಯ್‌ಮೆಂಟ್ ಪಾಸ್‌, ಎಲ್‌ಎಂಐಎ ಅಂತ ಹೇಳಿ ಲಿಂಕ್‌ ಕಳುಹಿಸಿ ಶಿಕ್ಷಕನಿಂದ ಹಂತಹಂತವಾಗಿ 9 ಬಾರಿ ₹4.66 ಲಕ್ಷ ಹಣ ವರ್ಗಾಯಿಸಿಕೊಂಡರು. ಬಳಿಕ ಶಿಕ್ಷಕ ನಿರಂತರ ಕರೆ ಮಾಡಿದರೂ ಅವರು ಕರೆ ಸ್ವೀಕರಿಸದಿದ್ದಾಗ ಮೋಸ ಹೋಗಿರುವುದಾಗಿ ತಿಳಿದು ಠಾಣೆಗೆ ದೂರು ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದು ಒಬ್ಬರ ಕತೆಯಲ್ಲ. ಹಣ ಹೂಡಿಕೆ, ಓಟಿಪಿ, ಎಪಿಕ್‌ ಲಿಂಕ್‌ ಹೆಸರಿನಲ್ಲಿ ಅನೇಕರು ಇಂತಹ ಸೈಬರ್‌ ವಂಚನೆಗಳಿಗೆ ಒಳಗಾಗಿದ್ದಾರೆ. ಅಧಿಕ ಆರ್ಥಿಕ ಲಾಭದ ಆಸೆಯಿಂದ ವಂಚಕರು ತಿಳಿಸಿದ ನಂಬರ್‌, ಖಾತೆಗೆ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡಿ ತಮ್ಮ ಬ್ಯಾಂಕ್‌ ಖಾತೆಗಳು ಖಾಲಿ ಮಾಡಿಕೊಂಡಿರುವ ಘಟನೆಗಳು ಡಿಜಿಟಲ್‌ ಮೋಸ ಜಾಲದ ಹೊಸ ಕರಾಮತ್ತು.

ಅಪರಿಚಿತರೊಂದಿಗೆ ವಹಿವಾಟು, ಷೇರು ಹೂಡಿಕೆ, ಪಾರ್ಟ್‌ ಟೈಂ ಜಾಬ್‌, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಅಸುರಕ್ಷಿತ ಆ್ಯಪ್‌, ಎಪಿಕ್ ಲಿಂಕ್‌ ಸೇರಿದಂತೆ ಹಲವು ಮಾರ್ಗಗಳಲ್ಲಿ‌ ವಂಚಕರು ನಾಗರಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಪೊಲೀಸರ ಎಚ್ಚರಿಕೆಗಳ ನಡುವೆಯೂ ಸುಶಿಕ್ಷಿತರೂ ಸಹ ಇಂತಹ ಮೋಸದ ಜಾಲಕ್ಕೆ ಸಿಲುಕಿ, ಲಕ್ಷಾಂತರ ಹಣ ಸೈಬರ್‌ ವಂಚಕರ ಪಾಲಾಗಿದೆ.

ಬೀದರ್ ಜಿಲ್ಲೆಯಲ್ಲಿ 2023ರಲ್ಲಿ 40 ಪ್ರಕರಣಗಳಲ್ಲಿ ₹1.81 ಕೋಟಿ ಕಳೆದುಕೊಂಡಿದ್ದರು. 2024ರಲ್ಲಿ ದಾಖಲಾದ ವಂಚನೆಯ ಪ್ರಕರಣಗಳ ಸಂಖ್ಯೆ 45ಕ್ಕೆ ಏರಿಕೆಯಾಗಿದ್ದರೂ ಕಳೆದುಕೊಂಡಿದ್ದ ಮೊತ್ತ ₹1.64 ಕೋಟಿಗೆ ತಲುಪಿತ್ತು. 2025ರ ನವೆಂಬರ್ 15ವರೆಗೆ ಒಟ್ಟು 38 ಪ್ರಕರಣಗಳು ವರದಿಯಾಗಿದ್ದು, 11 ತಿಂಗಳಲ್ಲಿ ಸೈಬರ್‌ ವಂಚಕರು ಬರೋಬ್ಬರಿ ₹4.72 ಕೋಟಿ ದೋಚಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಎಪಿಕೆ ಫೈಲ್‌ ಕಳುಹಿಸಿ ಪಾಸ್‌ವರ್ಡ್‌ಗಳನ್ನು ಬೇಕಾದ ನಂಬರ್‌ಗೆ ಕಳುಹಿಸಿ ಬ್ಯಾಂಕ್‌ ಖಾತೆಯಿಂದ ಹಣ ಎಗರಿಸುವುದು, ಹೀಗೆ ವಿಭಿನ್ನ ರೀತಿಯಲ್ಲಿ ಅಮಾಯಕರನ್ನು ಖೆಡ್ಡಾಕ್ಕೆ ತಳ್ಳಿ ಹಣ ದೋಚುವ ಪ್ರಕರಣಗಳನ್ನು ಪೊಲೀಸರಿಗೆ ಪತ್ತೆ ಹಚ್ಚುವುದು ತಲೆನೋವಾಗಿದೆ. 2023ರಲ್ಲಿ ದಾಖಲಾದ 40 ಪ್ರಕರಣಗಳಲ್ಲಿ 12 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. 2024ರ 45 ಕೇಸ್‌ಗಳಲ್ಲಿ 9 ಪ್ರಕರಣಗಳು ಪತ್ತೆಯಾಗಿದ್ದು, 2025ರ ನವೆಂಬರ್‌ನಲ್ಲಿ ದಾಖಲಾದ 38 ಪ್ರಕರಣಗಳಲ್ಲಿ ಎರಡು ವಂಚನೆ ಪ್ರಕರಣಗಳು ಪತ್ತೆ ಮಾಡಲಾಗಿದೆ.

ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೈಬರ್‌ ವಂಚನೆಯ 123 ಪ್ರಕರಣ ದಾಖಲಾಗಿವೆ. ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಸೈಬರ್ ಅಪರಾಧಗಳ ಸ್ವರೂಪವೂ ಬದಲಾಗುತ್ತಿದೆ. ವಂಚಕರ ಕಾರ್ಯವಿಧಾನದಲ್ಲಿಯೂ ಬದಲಾವಣೆ ಆಗಿದೆ. ಇದು ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದರಿಂದ ಪ್ರತಿವರ್ಷ ಒಂದು ಕೋಟಿಗೂ ಅಧಿಕ ಹಣ ವಂಚಕರ ವಶವಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಪೊಲೀಸರಿಗೆ 22 ಪ್ರಕರಣಗಳು ಪತ್ತೆ ಹಚ್ಚಲು ಸಾಧ್ಯವಾಗಿದೆ.

ʼ2024ರಲ್ಲಿ ಒಟ್ಟು 40 ಪ್ರಕರಣಗಳಲ್ಲಿ 3 ಪ್ರಕರಣ ಭೇದಿಸಿ, ₹7.48 ಲಕ್ಷ ವಶಕ್ಕೆ ಪಡೆದು ಸಂತ್ರಸ್ತರಿಗೆ ಹಿಂದಿರುಗಿಸಲಾಗಿದೆ. ಪ್ರಸಕ್ತ 2025ರಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯದ ಮುಖಾಂತರ ₹50.56 ಲಕ್ಷ ಹಣವನ್ನು ಸಂತ್ರಸ್ತ ದೂರುದಾರರಿಗೆ ವಾಪಸ್‌ ಕೊಡಲಾಗಿದೆ. ಉಳಿದ ಪ್ರಕರಣಗಳು ತನಿಖೆಯ ಹಂತದಲ್ಲಿವೆʼ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೀದರ್‌ ತಾಲೂಕಿನ ಕಾರ್ಮಿಕರೊಬ್ಬರಿಗೆ 2025ರ ಆಗಸ್ಟ್‌ ತಿಂಗಳಲ್ಲಿ ಅಪರಿಚಿತ ನಂಬರ್‌ದಿಂದ ಎಸ್‌ಎಂಎಸ್ ಮೂಲಕ ಓಟಿಪಿ ಕಳುಹಿಸಿ, ಬಳಿಕ ಬ್ಯಾಂಕ್‌ ಖಾತೆಯಿಂದ ₹8 ಲಕ್ಷ ವರ್ಗಾಯಿಸಿಕೊಂಡಿದ್ದರು. ಸೈಬರ್‌ ಮೋಸಕ್ಕೊಳಗಾದ ಸಂತ್ರಸ್ತರು ಆ.30ರಂದು ಬೀದರ್‌ನ ಸೆನ್‌ (ಸೈಬರ್, ಆರ್ಥಿಕ ಹಾಗೂ ಮಾದಕ ದ್ರವ್ಯ ಅಪರಾಧ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಈ ಬಗ್ಗೆ ಸದರಿ ಸಂತ್ರಸ್ತ ವ್ಯಕ್ತಿಯನ್ನು ʼಈದಿನʼ ಸಂಪರ್ಕಿಸಿದಾಗ, ʼಪ್ರಕರಣ ನ್ಯಾಯಾಲಯ ಹಂತದಲ್ಲಿದ್ದು, ಇನ್ನೂ ಹಣ ಮರಳಿ ವಾಪಸ್‌ ಬಂದಿಲ್ಲʼ ಎಂದು ತಿಳಿಸಿದ್ದಾರೆ.

ಸೈಬರ್‌ ವಂಚನೆ ಹೆಚ್ಚಳಕ್ಕೆ ಕಾರಣಗಳೇನು?

ಸ್ಮಾರ್ಟ್‌ಫೋನ್, ಕಂಪ್ಯೂಟರ್‌ ಮತ್ತುಇಂಟರ್ನೆಟ್‌ ಬಳಕೆದಾರರ ಸಂಖ್ಯೆ ಹೆಚ್ಚಳ, ಜನರಿಗೆ ಆನ್‌ಲೈನ್ ಭದ್ರತಾ ವಿಧಾನಗಳನ್ನು ಸರಿಯಾಗಿ ತಿಳಿಯದೆ ಇರುವುದು. ಸೋಶಿಯಲ್‌ ಮೀಡಿಯಾ ಅತಿಯಾದ ಬಳಕೆ, ಅತ್ಯಾಧುನಿಕ ತಂತ್ರಜ್ಞಾನ ದುರುಪಯೋಗ ಸೇರಿದಂತೆ ಡಿಜಿಟಲ್‌ ಪಾವತಿ ವಿಧಾನಗಳಾದ ಯುಪಿಐ, ಕ್ರೆಡಿಟ್‌ ಕಾರ್ಡ್‌ ಬಳಕೆ ಹೆಚ್ಚಾದಂತೆ ಮೋಸದ ಅಪಾಯವೂ ಹೆಚ್ಚುತ್ತಿದೆ.

ʼಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಬಡತನ ಮತ್ತು ಆರ್ಥಿಕ ಅಸಮತೋಲನ ಕಾರಣವಾಗಿದೆ. ಆರ್ಥಿಕ ಅಂತರ ಹೆಚ್ಚಾದಂತೆ ಅಸಮಧಾನ ಮತ್ತು ಅಪರಾಧ ಪ್ರವೃತ್ತಿ ಏರುತ್ತದೆ. ನಿರುದ್ಯೋಗ ಸಮಸ್ಯೆಯಿಂದ ಯುವಕರು ಖಾಲಿ ಸಮಯದಲ್ಲಿ ತಪ್ಪು ಚಟುವಟಿಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಮಾದಕ ವಸ್ತು ಬಳಕೆ ಹಾಗೂ ಶಿಕ್ಷಣದ ಕೊರತೆ ಸೇರಿ ಹಲವು ಕಾರಣಗಳು ಇಂತಹ ವಂಚನೆ ಕೃತ್ಯಗಳಿಗೆ ಕಾರಣಗಳಾಗಿವೆʼ ಎಂದು ಸರ್ಕಾರ ಹೇಳುತ್ತದೆ.

ಸೈಬರ್ ಅಪರಾಧವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ʼಕರ್ನಾಟಕ ಸೈಬರ್ ಭದ್ರತಾ ನೀತಿ-2024ʼ ಜಾರಿಗೆ ತಂದಿದೆ. ಸೈಬರ್ ಸೆಕ್ಯುರಿಟಿ ನೀತಿಯ ಜೊತೆಗೆ ಸಿಸ್ಕೋ ಸಹಯೋಗದೊಂದಿಗೆ ಸೈಬರ್ ಭದ್ರತಾ ಕೌಶಲ್ಯ ಮತ್ತು ಸೈಬರ್ ಜಾಗೃತಿಯಲ್ಲಿ ತರಬೇತಿ ನೀಡಲಾಗುವುದು ಎಂದು ಸರ್ಕಾರ ಹೇಳಿತು. ಆದರೆ, ಸೈಬರ್ ಅಪರಾಧದ ಗಂಭೀರತೆಯನ್ನು ಅರಿತು, ಬಹುದೊಡ್ಡ ಸಂಖ್ಯೆಯಲ್ಲಿ ಸೈಬರ್ ಪ್ರವೀಣರು ಅಥವಾ ಸೈಬರ್ ತಜ್ಞರನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿದೆ. ಅವರು ಅಗತ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಅಂತರ್ಜಾಲ ಹಾಗೂ ತಂತ್ರಜ್ಞಾನದ ಸುರಕ್ಷಿತ ಬಳಕೆ ಕುರಿತು ಮಕ್ಕಳು, ಹಿರಿಯರಲ್ಲಿ ಜಾಗೃತಿ ಮೂಡಿಸಬೇಕು. ಜನಸಾಮಾನ್ಯರು ಜಾಗೃತರಾಗುವುದೇ ಸೈಬರ್‌ ವಂಚನೆ ತಡೆಗಟ್ಟಲು ಇರುವ ಏಕೈಕ ಮದ್ದು ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಇದನ್ನೂ ಓದಿ : ಔರಾದ್‌ ಸೀಮೆಯ ಕನ್ನಡ | ಈ ಚಳಿಗಿ ಅಂಜಿ ಮಂದಿ ಮನ್ಯಾಗಿಂದ್ ಹೊರಗ ಬರಲಾಕ್ ಅಂಜ್ಲಾತರ್!

ʼಮೊಬೈಲ್‌ಗೆ ಬರುವ ಎಪಿಕೆ ಫೈಲ್‌ ಓಪನ್ ಮಾಡುವುದು, ಅನುಮಾನಾಸ್ಪದ ಲಿಂಕ್‌ ಒತ್ತುವುದು, ಒಟಿಪಿ ಹಂಚಿಕೊಳ್ಳುವುದು ಸೇರಿ ಅಧಿಕ ಲಾಭದ ಆಮಿಷಕ್ಕೆ ಒಳಗಾಗುವುದನ್ನು ಬಿಟ್ಟರೆ, ನಾಗರಿಕರು ಸೈಬರ್‌ ವಂಚನೆಯಿಂದ ಪಾರಾಗಬಹುದು. ನಾಗರಿಕರು ಸೈಬರ್‌ ವಂಚನೆಗೆ ಒಳಗಾದರೆ ಕೂಡಲೇ 1930ಗೆ ಕರೆ ಮಾಡಿ ಮಾಹಿತಿ ಕೊಡಬೇಕು. ತ್ವರಿತವಾಗಿ ಮಾಹಿತಿ ಕೊಟ್ಟರೆ ಕಳೆದುಕೊಂಡ ಹಣ ಶೀಘ್ರ ಜಪ್ತಿ ಮಾಡುವ ಸಾಧ್ಯತೆಯಿದೆ. ಯಾವುದೇ ಸಂದೇಹಾಸ್ಪದ ಕರೆಗಳು ಬಂದರೆ ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕುʼ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹೇಳಿದರು.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ನಂಜನಗೂಡಿನಲ್ಲಿ ಮರಗಳ ಹನನ; ಸಂಘಟನೆಗಳಿಂದ ಪ್ರತಿಭಟನೆ

ದಿನಾಂಕ-07-03-2026ರಂದು ಮೈಸೂರು ಜಿಲ್ಲೆ, ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...