ಬೀದರ್ | ದಲಿತ ಕಥನ ಜೀವನಾನುಭವದ ಕೆನೆಪದರು: ಬಿ ಎಸ್ ಖೂಬಾ

Date:

ದಲಿತ ಸಾಹಿತ್ಯ ಮತ್ತು ದಲಿತ ಕಥೆಗಳು ಜೀವನಾನುಭವದ ಕೆನೆಪದರು. ಸಾಮಾಜಿಕ ವಾಸ್ತವ ಜೀವನಾನುಭವ ಅಕ್ಷರದ ಮೂಲಕ ರೂಪುಗೊಂಡು ಕಥೆಗಳಾಗಿವೆ. ಲೇಖಕನ ಕಥೆಗಳು ಜೀವನ, ಪರಿಸರದ ಚಿತ್ರಣ ನೀಡಬೇಕು ಎಂದು ಹಿರಿಯ ಕಥೆಗಾರ ಬಿ ಎಸ್ ಖೂಬಾ ಹೇಳಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮತ್ತು ಕರ್ನಾಟಕ ಜಾನಪದ ಪರಿಷತ್ತಿನ ಸಹಯೋಗದಲ್ಲಿ ಬಿದರ್‌ ಜಿಲ್ಲೆ ಹುಮನಾಬಾದ್ ತಾಲೂಕಿನ ಗಡವಂತಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಲೋಕ ಹಾಗೂ ದಲಿತ ಕಥೆ: ಓದು-ವಿಮರ್ಶೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಪ್ರಾಸ್ತಾವಿಕವಾಗಿ ಮಾತನಾಡಿ, “ಅಕಾಡೆಮಿಯು ಪ್ರಶಸ್ತಿ, ಪುಸ್ತಕ ಪ್ರಕಟಿಸುವ ಜೊತೆಗೆ ಗ್ರಾಮಲೋಕ ಸಮಾರಂಭದ ಮೂಲಕ ಜನಸಾಮಾನ್ಯರಿಗೆ ತಲುಪುವ ಪ್ರಯತ್ನ ಮಾಡುತ್ತಿದೆ. ಈ ಭಾಗದಲ್ಲಿ ಅಕಾಡೆಮಿಯಿಂದ ಹೆಚ್ಚೆಚ್ಚು ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯುವ ಲೇಖಕ ಡಾ.ವಿಜಯಕುಮಾರ ಬೀಳಗಿ ಅವರು ದೇವನೂರು ಮಹಾದೇವರ ಅಮಾಸ ಕತೆಯ ಕುರಿತು ಮಾತನಾಡಿ, “ಅಮಾಸ ಕತೆಯಲ್ಲಿ ದಲಿತ ಅಸ್ಮಿತೆ, ದಲಿತ ಬದುಕನ್ನು ನಿರೂಪಿತವಾಗಿದೆ. ಓದುಗರನ್ನು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯ್ಯವುದಾಗದೆ ಬರಹದ ಉದ್ದೇಶವಾಗಿದೆ” ಎಂದರು.

ಹುಮನಾಬಾದ್‌ನ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳೆ ಅವರು, ಡಾ. ಹನುಮಂತರಾವ್ ದೊಡ್ಡಮನಿಯವರ ʼಶ್ಯಾರಿ ಶ್ಯಾಣೆಯಾದಾಗʼ ಕಥೆ ಕುರಿತು ಮಾತನಾಡಿ, “ದಲಿತ ಲೋಕದಲ್ಲಿ ಹೆಣ್ಣು ದೈಹಿಕ ಮತ್ತು ಬೌದ್ಧಿಕವಾಗಿ ದಮನಕ್ಕೊಳಗಾಗುವ ಬಗೆಯನ್ನು ನಿರೂಪಿತವಾಗಿದೆ. ಮುತ್ತುಕಟ್ಟುವುದು, ಬಸವಿ ಬಿಡುವುದು ಹೆಣ್ಣಿನ ವಾಸ್ತವ ಲೋಕದ ಚಿತ್ರಣ ಚಿತ್ರಿಸಿದ್ದಾರೆ” ಎಂದರು.

ಡಾ.ಎಚ್ ಟಿ ಪೋತೆಯವರ ‘ಅನೇಕಲವ್ಯ’ ಕಥೆಯ ಕುರಿತು, ಬಸವಕಲ್ಯಾಣದ ಉಪನ್ಯಾಸಕ ಭೀಮಾಶಂಕರ ಬಿರಾದಾರ ಮಾತನಾಡಿ, “ಸಾಮಾಜಿಕ ಸಂಕೀರ್ಣಗಳಾದ ಜಾತಿ, ಮತಗಳು ಮನುಷ್ಯನಲ್ಲಿ ಸೃಷ್ಟಿಸುವ ಬಿರುಕನ್ನೂ, ಉಳ್ಳವರ ಹಾಗೂ ಉಳ್ಳದವರ ದ್ವಂದ್ವಾತ್ಮಕತೆಯೂ, ಸಂಘರ್ಷವೂ, ಶೋಷಣೆಯೂ ಕತೆಯಲ್ಲಿ ನಿರೂಪಿತವಾಗಿದೆ. ಚರಿತ್ರೆ, ಪುರಾಣ ಸಮಕಾಲೀನಗೊಂಡ ವಿಧಾನ ಮತ್ತು ವರ್ತಮಾನದಲ್ಲಿ ಪ್ರಭುತ್ವ, ರಾಜಕೀಯ ಅಧಿಕಾರಗಳನ್ನು ಅನುಸರಿಸುವ ಶೋಷಣೆಯ ದಾರಿಯ ಕುರಿತು ಕತೆಯಲ್ಲಿ ಆಳವಾಗಿ ನಿರ್ಮಾಣಗೊಂಡಿದೆ. ಬಹು ಆಯಾಮಗಳಲ್ಲಿ ಆಲೋಚನೆಗಳನ್ನು ರೂಪಿಸಬೇಕಾದ ಶಿಕ್ಷಣ ವ್ಯವಸ್ಥೆ ಜಡಗೊಳ್ಳುತ್ತಿರುವುದನ್ನು ಕಥೆಗಾರರು ಸೂಕ್ಷ್ಮವಾಗಿ ಕಟ್ಟಿ ಕೊಟ್ಟಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಕೃಷಿ ವಿದ್ಯಾರ್ಥಿಗಳು ಉದ್ಯೋಗ ಸೃಷ್ಟಿದಾತರಾಗಬೇಕು: ರಾಜ್ಯಪಾಲ ಗೆಹ್ಲೋಟ್

ಡಾ.ಅನಸೂಯಾ ಕಾಂಬಳೆ ಅವರ ಹರಿದಪತ್ರ ಯುವ ಕಥೆಗಾರ ಡಾ.ಸಂಗಪ್ಪ ತೌಡಿ ಮಾತನಾಡಿ, “ಮಹಿಳಾ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಹೇಗೆ ನಡೆಯುತ್ತದೆ ಎಂಬುದು ಅನಸೂಯಾ ಅವರ ಕಥೆಗಳಲ್ಲಿದೆ” ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ, ವಿಷ್ಣುವರ್ಧನ ಮಾರಪಳ್ಳಿ, ವೀರಂತ ರೆಡ್ಡಿ ಜಂಪಾ, ಗುಂಡಪ್ಪ ದೊಡ್ಮನಿ, ಸುಭಾಷ ಪಾಟೀಲ, ಜಾಕೀಯಮೀಯಾ, ಚಂದ್ರಕಾಂತ ಅಂಬಲಗೆ, ವಿಜಯಕುಮಾರ ಚೆಟ್ಟಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...