ಒಂದು ಲಕ್ಷ ನಗದು ಲಂಚ ಸ್ವೀಕರಿಸುವಾಗ ಬಸವಕಲ್ಯಾಣ ಕೋಹಿನೂರು ಉಪ-ತಹಶೀಲ್ದಾರ್ ಶಿವಾನಂದ ಬಿರಾದರ್ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮೀನಿನ ಮ್ಯುಟೇಶನ್ ಹಾಗೂ ಪಹಣಿಯಲ್ಲಿ ಹೆಸರು ಸೇರಿಸಲು ಉಪ ತಹಸೀಲ್ದಾರ್ ಶಿವಾನಂದ ಬಿರಾದರ್ 2.5 ಲಕ್ಷ ಬೇಡಿಕೆಯಿಟ್ಟಿದ್ದರು ಎಂದು ಉಜಳಂಬ ಗ್ರಾಮದ ರೈತ ಸುಧೀರ್ ಡೊಂಬೆ ಲೋಕಾಯಕ್ತ ಪೊಲೋಸರಿಗೆ ದೂರು ನೀಡಿದ್ದರು. 1 ಲಕ್ಷ ಮುಗಂಡವಾಗಿ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎನ್. ಓಲೇಕಾರ್ ನೇತ್ರತ್ವದ ಪೊಲೀಸ್ ತಂಡ ದಾಳಿ ನಡೆಸಿ ಉಪ ತಹಸೀಲ್ದಾರ್ ಶಿವಾನಂದ ಬಿರಾದರ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.




