ಬುದ್ಧ ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಬೀದರ ಜಿಲ್ಲಾದಾದ್ಯಂತ ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ತಿಳಿಸಿದ್ದಾರೆ
ʼಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಒಬಿಸಿ, ಅಲ್ಪಸಂಖ್ಯಾತರ ಸೇರಿದಂತೆ ಎಲ್ಲಾ ಜಾತಿ ಸಮುದಾಯದ ಮಹಿಳೆಯರಿಗೆ, ಕಾರ್ಮಿಕರಿಗೆ ವಿದ್ಯಾರ್ಥಿಗಳಿಗೆ, ರೈತರಿಗೆ ಮತ್ತು ಎಲ್ಲಾ ಕ್ಷೇತ್ರದಲ್ಲಿ ಪ್ರಬುದ್ಧ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳು ಅನನ್ಯವಾಗಿದೆʼ ಎಂದರು.
ಸಾಮಾಜಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಅವರು ಪಟ್ಟ ಶ್ರಮದ ಬಗ್ಗೆ ಜಿಲ್ಲಾಯಾದ್ಯಂತ ಅರಿವು ಮತ್ತು ಜಾಗೃತಿ ಮೂಡಿಸಲು ಮನೆ-ಮನೆಗೆ ಅಂಬೇಡ್ಕರ್ ಅಭಿಯಾನ ಪ್ರಾರಂಭಿಸಿದ್ದು, ಅಭಿಯಾನಕ್ಕೆ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌರವಾಧ್ಯಕ್ಷ : ಮಾರುತಿ ಬೌಧ್ದೆ, ಅಧ್ಯಕ್ಷ : ಡಾ.ಕಾಶಿನಾಥ ಚೆಲ್ವಾ, ಕಾರ್ಯಾಧ್ಯಕ್ಷ: ಶಿವಶರಣಪ್ಪಾ ಹುಗ್ಗಿ ಪಾಟೀಲ್ ಹಾಗೂ ಬಾಬು ಟೈಗರ್ ಹಾಗೂ ಉಪಾಧ್ಯಕ್ಷ : ಓಂಪ್ರಕಾಶ ರೋಟ್ಟೆ, ಜಗದೀಶ್ವರ ಬಿರಾದರ, ಗಾಲಿಬ್ ಹಾಷ್ಮಿ, ಖಲಿಲಮಿಯ್ಯ ಗುತ್ತೆದಾರ
ಪ್ರಧಾನ ಕಾರ್ಯದರ್ಶಿ : ವಿನಯಕುಮಾರ ಮಾಳಗೆ, ವಿನೋದ ರತ್ನಾಕರ್, ಕಾರ್ಯದರ್ಶಿಗಳಾಗಿ ಕಂಟೆಪ್ಪಾ ಪೂಜಾರಿ, ರಾಜಕುಮಾರ ವಾಘಮಾರೆ, ಸಂತೋಷ ಪಡಸಾಲೆ, ರಮೇಶ ಗೌಡ ಸಾಗರ, ಸಹ ಕಾರ್ಯದರ್ಶಿ : ಶ್ರೀಧರ್ ಸೋಮನೋರ್, ಧರ್ಮಾನಂದ ಶಿಂದೆ, ರಾಜಕುಮಾರ ಪ್ರಸಾದೆ, ಲೋಕೇಶ್ ಕಾಂಬಳೆ, ಸಿದ್ದಾರ್ಥ ನಾಟೆಕರ್, ದೀಪಕ್ ದೊಡ್ಡಿ
ಕೋಶಾಧ್ಯಕ್ಷ : ದಶರಥ ಗುರು ಹಾಗೂ ಗೌರವ ಸಲಹೆಗಾರರು : ಶ್ರೀಕಾಂತ ಸ್ವಾಮಿ, ಬಾಬುರಾವ ಹೊನ್ನಾ, ವಿಠಲದಾಸ ಪ್ಯಾಗೆ, ರಾಜಕುಮಾರ ಮೂಲಭಾರತಿ, ರಾಜಪ್ಪಾ ಗೂನ್ನಳ್ಳಿಕರ್, ರಾಜಕುಮಾರ ಬನ್ನೆರ್
ಜಿಲ್ಲಾ ಯುವ ಘಟಕ ಅಧ್ಯಕ್ಷ – ಪ್ರಕಾಶ ರಾವಣ, ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ – ರಾಜೇಶ್ವರಿ ಮೋರೆ, ಜಿಲ್ಲಾ ವಿಧ್ಯಾರ್ಥಿ ಘಟಕ ಅಧ್ಯಕ್ಷ ಹರ್ಷಿತ ದಾಂಡೆಕರ್, ಜಿಲ್ಲಾ ಸಾಂಸ್ಕೃತಿಕ ಘಟಕ ಅಧ್ಯಕ್ಷ ಸೂರ್ಯಕಾಂತ ಬಡಿಗೇರ್
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ನಾಗಮಾರಪಳ್ಳಿ ಶಾಲೆಗೆ ತಾಲೂಕು ಪಂಚಾಯತ್ ಇಒ ಭೇಟಿ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು : ಪುನಿತಾ ಗಾಯಕವಾಡ, ಇಂದುಮತಿ ಸಾಗರ, ಸಂಗೀತಾ ಕಾಂಬಳೆ, ಅರುಣ ಪಟೇಲ್, ಅಮರ ಅಲ್ಲಾಪೂರ, ಪ್ರಕಾಶ ನಾಗರಕಟ್ಟಿ, ರಮೇಶ ಮಾಲೆ, ಗೌತಮ ಸಿ.ಎಂ., ರವಿ ಕೋಟೆರ್, ಶರಣು ಫುಲೆ, ಕೃಷ್ಣ ಭೂತಾಳೆ, ಅವಿನಾಶ ಮಂದಕನಳ್ಳಿ, ರಾಜಶೇಖರ ಕುಂಚೆ, ಪ್ರಕಾಶ ಗುಪ್ತಾ, ಗೌತಮ ಮುತಂಗಿಕರ್, ಕುಶಾಲ ನಾಟೇಕರ್ ಇವರನ್ನು ನೇಮಿಸಲಾಗಿದೆ.





