ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನ ಅಂಗವಾಗಿ ಡಿಸೆಂಬರ್ 6ರಂದು ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಯೋಜನಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ.
ಮಂಗಳವಾರ ಬೀದರ್ ನಗರದ ಶಹಾಗಂಜ್‌ನ ಅಂಬೇಡ್ಕರ್ ಭವನ ಬೆಳಿಗ್ಗೆ ವಿವಿಧ ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರು, ಚಿಂತಕರು ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳ ನೇತೃತ್ವದಲ್ಲಿ ಸಭೆ ಕರೆಯಲಾಯಿತು.
ಹಿರಿಯ ಸಮಾಜ ಸೇವಕರಾದ ಈಶ್ವರ ಕನ್ನೇರಿ ಅವರು ಸಭೆಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಡಿಸೆಂಬರ್ 6ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ಪ್ರಯುಕ್ತ ಬೀದರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬೆಳಿಗ್ಗೆ 9 ಗಂಟೆಗೆ ಜಿಲ್ಲಾಡಳಿತ ಮತ್ತು ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜನಾ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ಬಳಿಕ 11 ಗಂಟೆಗೆ ಅಂಬೇಡ್ಕರ್ ವೃತ್ತದ ಎದುರುಗಡೆ ಭೀಮ ಗೀತೆಗಳ ಗಾಯನ ಮತ್ತು ನುಡಿನಮನ ಕಾರ್ಯಕ್ರಮ ನಡೆಸಲಾಗುವುದು. ಸಂಜೆ 5 ಗಂಟೆಗೆ ಪ್ರತಿವರ್ಷದಂತೆ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ಚಿಂತಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪದಾಧಿಕಾರಿಗಳು ಆಯ್ಕೆ :
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಕಾರ್ಯಕ್ರಮ ಆಯೋಜನಾ ಸಮಿತಿಗೆ ಅಧ್ಯಕ್ಷರಾಗಿ ರಮೇಶ ಡಾಕುಳಗಿ, ಕಾರ್ಯಾಧ್ಯಕ್ಷರಾಗಿ ಮಹೇಶ ಗೋರನಾಳಕರ್, ಗೌರವ ಅಧ್ಯಕ್ಷರಾಗಿ ಪ್ರಕಾಶ ಮಾಳಗೆ, ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ ನಿಲಿಕಟ್ಟಿ ಹಾಗೂ ಕಾರ್ಯದರ್ಶಿಗಳಾಗಿ ವಿನಯಕುಮಾರ ಮಾಳಗೆ, ಸಾಯಿ ಶಿಂಧೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಲಹೆಗಾರರಾಗಿ ಅನೀಲಕುಮಾರ ಬೆಲ್ದಾರ, ಮಾರುತಿ ಬೌದ್ಧೆ, ಬಾಬುರಾವ ಪಾಸ್ವಾನ್, ಬಕ್ಕಪ್ಪಾ ದಂಡಿನ್, ಅಶೋಕ ಮಾಳಗೆ, ಶ್ರೀಪತರಾವ ದೀನೆ, ಡಾ.ಕಾಶಿನಾಥ ಚೆಲ್ವಾ, ವಿಠಲದಾಸ ಪ್ಯಾಗೆ, ಅಂಬಾದಾಸ ಗಾಯಕವಾಡ, ಈಶ್ವರಪ್ಪಾ ಗಾಯಕವಾಡ ಹಾಗೂ ದಶರಥ ಗುರು.
ಇದನ್ನೂ ಓದಿ : ಕಲಬುರಗಿಯಲ್ಲೇಕೆ ಓದುಗರ ಸಮಾವೇಶ? ಈ ಒಂದು ಒಲವಿನೋಲೆ ಓದಿ
ಉಪಾಧ್ಯಕ್ಷರಾಗಿ ಮಾರುತಿ ಕಂಟಿ, ಬಾಬುರಾವ ಮಿಠಾರೆ,ಸುನೀಲ ಸಂಗಮ್, ಜಗನಾಥ ಗಾಯಕವಾಡ, ರಮೇಶ ಮಂದಕನಳ್ಳಿ, ರಮೇಶ ಪಾಸ್ವಾನ, ಮೊಗಲಪ್ಪಾ ಮಾಳಗೆ, ಸಂದೀಪ ಕಾಂಟೆ, ಪ್ರದೀಪ ನಾಟೆಕರ್, ಪ್ರಸನ್ನ ಡಾಂಗೆ, ಮುಕೇಶ ರಾಯ್, ಶಾಲಿವಾನ ಬಡಿಗೆರ್, ಪುಟ್ಟರಾಜ ದೀನೆ, ನಾಗೇಶ ಸಾಗರ, ವಿನೋದ ಅಪ್ಪೆ, ಅವಿನಾಶ್ ದೀನೆ, ಸಂಜುಕುಮಾರ ಸಾಗರ, ನರಸಿಂಗ ಸಾಮ್ರಾಟ, ಸತೀಶ್ ಲಕ್ಕಿ, ಅಂಬೇಡ್ಕರ್ ಸಾಗರ, ಅರುಣ ಪಟೇಲ್, ಅಜಯ ದೀನೆ, ಪವನ ಮಿಠಾರೆ, ರಾಹುಲ್ ಡಾಂಗೆ, ಪ್ರಕಾಶ ರಾವಣ ರಂಜೀತಾ ಜೈನೋರ್, ಸುಧಾಮಣಿ ಗುಪ್ತಾ, ಜಗದೇವಿ ಭಂಡಾರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಿಲಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದಾರೆ.






