ಬೀದರ್‌ | ಆಡಂಬರದ ಜೀವನ ಶೈಲಿಯಿಂದ ಪರಿಸರಕ್ಕೆ ಕುತ್ತು : ಆಶಿಶ್‌ ರೆಡ್ಡಿ

Date:

ಭೂಲೋಕದಲ್ಲಿ ಬದುಕುಳಿದಿರುವ ಜೀವರಾಶಿಗಳಿಗೆ ಉತ್ತಮ ಪರಿಸರವೇ ಮೂಲ ಆಧಾರವಾಗಿದೆ ಎಂದು ಬೀದರ್ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ ರೆಡ್ಡಿ ತಿಳಿಸಿದರು.

‌ಔರಾದ್‌ ತಾಲೂಕಿನ ಯನಗುಂದಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ʼಪರಿಸರವೆಂದರೆ ನಮ್ಮ ಸುತ್ತಮುತ್ತಲಿನ ಗಿಡಗಳು, ಮರಗಳು, ನದಿಗಳು ಕಾಡುಗಳು ಇವೆಲ್ಲವೂ ಪರಿಸರದ ಭಾಗವಾಗಿದ್ದು, ಪರಿಸರವು ಜೀವಸಂಕುಲಕ್ಕೆ ಅಗತ್ಯವಾಗಿ ಬೇಕಾಗುವ ಆಹಾರ, ಗಾಳಿ, ನೀರು ಒದಗಿಸುತ್ತದೆ. ಇಂದು ಮಾನವನ ಆಡಂಬರ ಜೀವನ ಶೈಲಿಯಿಂದಾಗಿ ಪರಿಸರ ಹಾಳಾಗುತ್ತಿದೆ. ಮುಂದಿನ ಪೀಳಿಗೆ ಬದುಕುಳಿಯಬೇಕಾದರೆ ನಾವೆಲ್ಲರೂ ಪರಿಸರ ರಕ್ಷಿಸುವ ಅಗತ್ಯವಿದೆʼ ಎಂದು ಹೇಳಿದರು.

ʼಪರಿಸರದಲ್ಲಿ ಬದುಕುತ್ತಿರುವ ಪ್ರಾಣಿ, ಪಕ್ಷಿಗಳಿಗೆ, ಜಲಚರ ಜೀವಿಗಳ ಹಾಗೇ ಮನುಕುಲಕ್ಕೆ ಅಗತ್ಯವಾಗಿರುವ ಆಮ್ಲಜನಕದ ಮೂಲವೇ ಪರಿಸರವಾಗಿದೆ. ಪರಿಸರ ಹಾಳಾದಂತೆ ಎಲ್ಲಾ ಜೀವರಾಶಿಗಳಿಗೆ ಕಟಂಕ ತಪ್ಪಿದಲ್ಲ. ಕರೋನಾ ವೇಳೆ ಆಮ್ಲಜನಕ ಮಹತ್ವ ನಾವೆಲ್ಲರೂ ಅರಿತುಕೊಂಡಿದ್ದೇವೆ. ಮತ್ತೊಮ್ಮೆ ಇಂತಹ ಭಯಾನಕ ರೋಗಗಳ ಬರಬಾರದು ಎಂದರೆ ಪರಿಸರ ಸಂರಕ್ಷಣೆ ಮಾಡಲೇಬೇಕುʼ ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼತ್ಯಾಜ್ಯ ವಸ್ತುಗಳ ನಿಯಂತ್ರಣ, ಮಳೆ ನೀರು ಕೊಯ್ಲು, ಪರಿಸರ ಸ್ನೇಹಿ ಬ್ಯಾಗ್ ಬಳಕೆ, ಸಾವಯುವ ಕೃಷಿ ಪದ್ಧತಿಯಿಂದ ಪರಿಸರ ಕಾಪಾಡಬಹುದು. ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರದ ಮಹತ್ವ ಅರಿತುಕೊಂಡು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರುವ ಅಗತ್ಯವಿದೆʼ ಎಂದರು.

WhatsApp Image 2025 12 12 at 8.03.43 AM

ಶಾಲೆಯ ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ಮಾತನಾಡಿ, ʼಯನಗುಂದಾ ಶಾಲಾ ಆವರಣದಲ್ಲಿ ಬೆಳೆಸಿರುವ ಗಿಡ, ಮರಗಳ ಕುರಿತು ಮಾಡಿರುವ ವಿಡಿಯೋ ತುಣಕನ್ನು ವೀಕ್ಷಿಸಿ, ಬೀದರ ಜಿಲ್ಲೆಯ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಶಾಲಾ ಆವರಣದಲ್ಲಿ ಬೆಳೆದು ನಿಂತ ಗಿಡ-ಮರಗಳು ಕಂಡು ಸಂತಸ ವ್ಯಕ್ತ ಪಡಿಸಿದ್ದು ನಮಗೆ ಹೊಸ ಉತ್ಸಾಹ ಮೂಡಿಸಿದೆʼ ಎಂದರು.

ʼಗ್ರಾಮಸ್ಥರ ಸಹಕಾರ ಮತ್ತು ಮಕ್ಕಳ ಹಾಗೂ ಶಿಕ್ಷಕರ ಪರಿಶ್ರಮದಿಂದ ಶಾಲೆಯಲ್ಲಿ ಉತ್ತಮ ಪರಿಸರ ನಿರ್ಮಾಣವಾಗಿದೆ. ಮಕ್ಕಳಲ್ಲಿ ಪರಿಸರದ ಪ್ರಜ್ಞೆ ಮೂಡಿಸಲು ಕಾಡಿನಲ್ಲಿ ಕಾಲ್ನಡಿಗೆ, ವನ‌ಸಂಚಾರ, ನಿಸರ್ಗದಲ್ಲಿ ಕಡೆ ನಮ್ಮ ನಡೆ ಎನ್ನುವಂತಹ ಹಲವು ವಿನೂತನ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆʼ ಎಂದು ಹೇಳಿದರು.

ಬೀದರ ಜಿಲ್ಲೆಯಲ್ಲಿ ಮೂರು ನೂರು ಹಕ್ಕಿಗಳ ಪ್ರಭೇದಗಳಿವೆ‌. ವಿಶಿಷ್ಟ ಪ್ರಾಣಿಗಳಿವೆ, ಅವುಗಳ ಬಣ್ಣ, ಗೂಡು ಕಟ್ಟುವ, ಆಹಾರ ಹುಡುಕವ ರೀತಿ, ವಿಭಿನ್ನವಾಗಿದೆ. ಇದನ್ನು ಶಾಲಾ ಮಕ್ಕಳಿಗೆ ಪರಿಚಯಿಸುವ ಉದ್ದೇಶದಿಂದ ಮಕ್ಕಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಅರಣ್ಣ ಇಲಾಖೆ ವತಿಯಿಂದ ನಡೆಯುತ್ತಿದೆʼ ಎಂದು ವಲಯ ಅರಣ್ಯ ಅಧಿಕಾರಿ ಮುದಾಸೀರ್ ಅಹ್ಮದ್ ‌ ಅವರು ಹೇಳಿದರು.

ಔರಾದ ಶಾಖೆಯ ಉಪ ಅರಣ್ಯ ವಲಯ ಅಧಿಕಾರಿ ಬಾಲಾಜಿ, ಹಾಗೂ ಸಂತಪೂರ ಉಪ ವಲಯ ಅಧಿಕಾರಿ ವೈಜಿನಾಥ ಮೇತ್ರೆ, ವನಸಿರಿ ಗ್ರಾಮಿಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ನೌನಾಥ ಇದ್ದರು.

ಇದನ್ನೂ ಓದಿ : ಬೀದರ್‌ | ಕಲ್ಯಾಣ ಕರ್ನಾಟಕದಲ್ಲಿ 20,462 ಶಿಕ್ಷಕರ ಹುದ್ದೆ ಖಾಲಿ

ಶಾಲೆಯ ಪ್ರಭಾರಿ ಮುಖ್ಯಗುರು ಬಸವರಾಜ ಮಠಪತಿ ಅಧ್ಯಕ್ಷ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಸಂಗಾರಡ್ಡಿ ಬೆಲ್ದಾಳ, ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಶಿವರಾಜ ಶೆಟಕಾರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಸವರಾಜ ದೇಶಮುಖ, ವಿಜಯಕುಮಾರ ಮೇತ್ರೆ, ಜನಾರ್ಧನ ರೆಡ್ಡಿ, ಚಂದ್ರಶೇಖರ ಪಾಟೀಲ್ ಉಪಸ್ಥಿತರಿದ್ದರು. ಶಿಕ್ಷಕ ಎಂ.ಡಿ.ಸಿರಾಜ್ ಸ್ವಾಗತಿಸಿದರು. ಮುಸ್ತಾಫ ಆಜಾದ್ ವಂದಿಸಿದರು, ಲಕ್ಷ್ಮಣರಡ್ಡಿ ಗಂಗಾಪೂರೆ ನಿರೂಪಿಸಿದರು. ಶಿಕ್ಷಕರಾದ ಖುರ್ರಂ ಮುರ್ತುಜಾ, ಭೂಮಪ್ಪಾ ಬೆಲ್ದಾಳ, ತೇಜಸ್ವಿ ಚಾಂದಕವಠೆ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...