ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿರುವುದಕ್ಕೆ ಹಡಪದ ಸಮಾಜದ ಮುಖಂಡ ರೇವಣಸಿದ್ದ ಹಡಪದ ಸ್ವಾಗತಿಸಿದ್ದಾರೆ.
ಬಸವಣ್ಣನವರ ಕಾಯಕ ತತ್ವ ನಂಬಿ ಬದುಕು ನಡೆಸುತ್ತಿರುವ ಹಡಪದ ಸಮಾಜದ ವತಿಯಿಂದ ಮತ್ತು ಸಮಸ್ತ ಹಡಪದ ಸಮಾಜದ ಬಾಂಧವರ ಪರವಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ರಾಜ್ಯದಲ್ಲಿ ಹಡಪದ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದೆ. ಸರ್ಕಾರ ಇದೀಗ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿರುವುದು ಅತ್ಯಂತ ಖುಷಿಯ ವಿಚಾರ. ನಿಗಮದ ಪ್ರಯೋಜನವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜ ಅಭಿವೃದ್ಧಿ ಹೊಂದಬೇಕಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಕಾರು ಡಿಕ್ಕಿ : ವೃದ್ಧ ಸಾವು





