ಬೀದರ್ ಜಿಲ್ಲೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,200 ಬೆಲೆ ನಿಗದಿಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪಾ ಹುಡಗಿ ಅವರು ಉರುಳು ಸೇವೆ ನಡೆಸಿದರು.
ಬೀದರ್ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರುಗಡೆ ಸಂಯುಕ್ತ ಕಿಸಾನ್ ಮೋರ್ಚಾ (ರೈತ ಸಂಘಟನೆಗಳ ಒಕ್ಕೂಟ) ವತಿಯಿಂದ ಗುರುವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭಿಸಿ ಛತ್ರಪತಿ ಶಿವಾಜಿ ವೃತ್ತದವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಚೇರಿವರೆಗೆ ಉರುಳು ಸೇವೆ ನಡೆಸಿದರು.
ಬಳಿಕ ರೈತ ಮುಖಂಡ ಕರಬಸಪ್ಪಾ ಹುಡಗಿ ಅವರು ಮಾತನಾಡಿ, ʼಕಬ್ಬು ಬೆಲೆ ನಿಗದಿ ಕುರಿತ ನಮ್ಮ ಬೇಡಿಕೆಯನ್ನು ಸರ್ಕಾರ ಹಾಗೂ ಜಿಲ್ಲಾ ಆಡಳಿತ ತಕ್ಷಣ ಈಡೇರಿಸಬೇಕು. ಬೇಡಿಕೆ ಪೂರೈಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ವಿನೂತನ ಪ್ರತಿಭಟನೆಗಳನ್ನು ನಡೆಸಲಾಗುವುದು. ನಮ್ಮ ಹಕ್ಕಿನ ದರ ಸಿಗುವವರೆಗೆ ಧರಣಿ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲʼ ಎಂದು ಎಚ್ಚರಿಸಿದರು.

ಇದನ್ನೂ ಓದಿ : ಬೀದರ್ | ಟನ್ ಕಬ್ಬಿಗೆ ₹3,100 ಬೆಲೆ ಕೊಡಲೇಬೇಕು : ಪಟ್ಟು ಹಿಡಿದ ರೈತರು, ಧರಣಿ ಆರಂಭ
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಕಿಸಾನ್ ಮಹಾಸಭಾದ ಕಲಬುರಗಿ ವಿಭಾಗದ ಅಧ್ಯಕ್ಷ ಮೌಲಾ ಮುಲ್ಲಾ, ಕಲಬುರಗಿ ಆದಿನ್ನಾಥ ಹೀರಾ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ಮುಖಂಡರಾದ ಈಶ್ವರಸಿಂಗ ಠಾಕೂರ, ರಾಜಶೇಖರ ನಾಗಮೂರ್ತಿ, ಪೀರಪ್ಪಾ ಔರಾದೆ, ಜಗನ್ನಾಥ ಚಿಲ್ಲಾಬಟೆ, ರೈತ ಸಂಘದ ಮುಖಂಡರಾದ ಖಾಸೀಮ ಅಲಿ, ಶಂಕರೆಪ್ಪಾ ಮರ್ಕಲ್, ಕೊಂಡಿಬಾ ಪಾಂಡ್ರೆ, ಶಿವರಾಜ ಪಾಟೀಲ್ ಅತಿವಾಳ, ಬಾಬುರಾವ ಹೊನ್ನಾ,ಶಿವರಾಯ ಮುದಾಳೆ, ಖಾಶೆಪ್ಪಾ ಬೇಲೂರ. ಧುಳಪ್ಪಾ. ರುದ್ರಸ್ವಾಮಿ, ಸಂತೋಷ ಗುದಗೆ, ಮಲ್ಲಿಕಾರ್ಜುನ ಸಂಗಮ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ ಬಾವುಗೆ, ಶಾಂತಮ್ಮ ಮೂಲಗೆ, ಶಿವಲೀಲಾ ಹೋಳಸಮುದ್ರ, ವಿಜಯಕುಮಾರ ಬಾವುಗೆ, ವೀರಾರೆಡ್ಡಿ, ವಿಠಲ್ ರಾವ, ನಾಗಶೆಟ್ಟಿ, ಭೀಮರಾವ, ಖಮರ ಪಟೇಲ್, ವಿಜಯ ರೇಡ್ಡಿ, ನಾಗಶೇಟ್ಟಿ ಚೆನ್ನಮಲ್ಲ, ಮುಖೀಮೊದ್ದಿನ ನಂದಗಾAವ, ಖಾನಸಾಬ ಬಸವಕಲ್ಯಾಣ, ಸಂಜು ಪಾಟೀಲ್ ಹುಣಜಿ, ಬಾಬುರಾವ ಪಾಟೀಲ್ ಗೊದಿಪ್ಪರ್ಗಾ, ಸುರೇಶ ಪಾಟೀಲ್, ಬಸವರಾಜ ಅಷ್ಟೂರ, ಸೋಮನಾಥ ಏಳಕೂರ ಸೇರಿದಂತೆ ಅನೇಕ ರೈತ ನಾಯಕರು ಉಪಸ್ಥಿತರಿದ್ದರು.





