ಮೇವು ತರಲು ಜಮೀನಿಗೆ ತೆರಳಿದ ವೇಳೆ ಹಾವು ಕಡಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಬೀದರ್ ತಾಲೂಕಿನ ಸಿಕೆಂದ್ರಪುರ ಗ್ರಾಮದಲ್ಲಿ ನಡೆದಿದೆ.
ಶಿವನಾಥ ಸಂಬಪ್ಪ ಮುತ್ತಂಗಿಕರ್ (45) ಮೃತ ರೈತ. ಶುಕ್ರವಾರ ಎಮ್ಮೆಗಳಿಗೆ ಮೇವು ತರಲು ತಮ್ಮ ಜಮೀನಿಗೆ ತೆರಳಿದ ವೇಳೆ ಹಾವು ಕಡಿದಿದೆ. ಆರೋಗ್ಯದಲ್ಲಿಏರುಪೇರಾದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರೈತ ಕೊನೆಯುಸಿರೆಳಿದ್ದಾರೆ ಎಂದು ವೈದ್ಯರು ತಿಳಿಸಿದರು.
ಈ ಸಂಬಂಧ ಬೀದರ್ ಗ್ರಾಮೀಣ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಪರಹಾರಕ್ಕೆ ಆಗ್ರಹ : ಹಾವು ಕಡಿದು ಮೃತಪಟ್ಟಿರುವ ರೈತ ಶಿವನಾಥ ಮುತ್ತಂಗಿಕರ್ ಅವರ ಕುಟುಂಬ ತೀರ ಬಡತನ ಪರಿಸ್ಥಿತಿಯಲ್ಲಿದ್ದು, ಬೀದರ ಜಿಲ್ಲಾ ಆಡಳಿತ ಹಾಗೂ ಕ್ಷೇತ್ರದ ಶಾಸಕರು ಸರ್ಕಾರದಿಂದ ಪರಿಹಾರ ಧನ ಒದಗಿಸಬೇಕೆಂದು ಹೋರಾಟಗಾರರಾದ ಅಮೃತ ಮುತ್ತಂಗಿಕರ್, ಪ್ರಕಾಶ ರಾವಣ, ಭೀಮರಾವ ಮಾಲಗತ್ತಿ ಹಾಗೂ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಬೀದರ್ | ಪಿಡಿಒ ಹುದ್ದೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ರಮ್ಯಾ ನಿಯೋಜನೆ





