ಬೀದರ್‌ | ಒಟಿಪಿ ಹೇಳದಿದ್ದರೂ ಖಾತೆಯಿಂದ ₹8 ಲಕ್ಷ ಹಣ ಕಳೆದುಕೊಂಡ ಕಾರ್ಮಿಕ!

Date:

ಮೊಬೈಲ್‌ ಪೋನ್‌ಗೆ ಎಸ್‌ಎಂಎಸ್ ಮೂಲಕ ಬಂದ ಒಟಿಪಿ ಯಾರಿಗೂ ಹೇಳದಿದ್ದರೂ ಕಾರ್ಮಿಕರೊಬ್ಬರ ಬ್ಯಾಂಕ್ ಖಾತೆಯಿಂದ ₹8 ಲಕ್ಷ ಹಣ ವರ್ಗಾವಣೆಯಾಗಿದೆ.

ಸೈಬರ್‌ ಅಪರಾಧ ಪ್ರಕರಣಗಳು ದಿನೇ ದಿನೇ ಹೊಸ ರೂಪ ಪಡೆಯುತ್ತಿವೆ. ಅಪರಿಚಿತ ನಂಬರ್‌ದಿಂದ ಲಿಂಕ್‌ ಕಳುಹಿಸಿ ವಂಚಿಸುವುದು, ಡಿಜಿಟಲ್‌ ಅರೆಸ್ಟ್‌ ಹೆಸರಿನಲ್ಲಿ ಬೆದರಿಸಿ ಹಣ ಪೀಕುವುದು ಪ್ರಕರಣಗಳು ಹೆಚ್ಚಾಗಿದ್ದವು. ಈಗ ಮೊಬೈಲ್‌ಗೆ ಒಟಿಪಿ ಬಂದರೂ ಅದನ್ನು ಯಾರೊಂದಿಗೆ ಹಂಚಿಕೊಳ್ಳದವರ ಖಾತೆಯಿಂದಲೂ ಹಣ ಕಡಿತವಾಗುತ್ತಿದೆ.

ಬೀದರ್‌ ತಾಲೂಕಿನ ಚಿಲ್ಲರ್ಗಿ ಗ್ರಾಮದ ನೀಲಕಂಠ ಸಂಗಪ್ಪಾ ಎಂಬುವವರು ಹಣ ₹8 ಲಕ್ಷ ಕಳೆದುಕೊಂಡಿದ್ದಾರೆ. ಸದ್ಯ ಅವರು ಬೆಳಗಾವಿಯಲ್ಲಿ ಪೇಂಟರ್‌ ಕೆಲಸ ಮಾಡಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆಗಸ್ಟ್‌ 20ರಂದು ಮಧ್ಯಾಹ್ನ 3.27 ಗಂಟೆಗೆ ನೀಲಕಂಠ ಅವರ ಮೊಬೈಲ್‌ ಫೋನ್‌ಗೆ ಮೆಸೇಜ್‌ ಮೂಲಕ ಓಟಿಪಿ ಬಂದಿತ್ತು. ಅದನ್ನು ನೋಡಿ ಗಾಬರಿಗೊಂಡ ಅವರು ಕೂಡಲೇ ಬ್ಯಾಂಕ್‌ ವ್ಯವಸ್ಥಾಪಕರಿಗೆ ಕರೆ ಮಾಡಿ ನಿರಂತರ ಓಟಿಪಿ ಬರುತ್ತಿದ್ದು, ನನ್ನ ಬ್ಯಾಂಕ್‌ ಖಾತೆ ಬ್ಲಾಕ್‌ ಮಾಡಿ ಅಥವಾ ಖಾತೆಗೆ ಲಿಂಕ್ ಇರುವ ಮೊಬೈಲ್‌ ಸಂಖ್ಯೆ‌ ತೆಗೆಯುವಂತೆ ತಿಳಿಸಿದರು. ನೀಲಕಂಠ ಅವರು ಇಮೇಲ್‌ ಮೂಲಕ ಮನವಿ ಕಳಿಸಿದಾಗ ಮ್ಯಾನೇಜರ್‌ ಅವರು ನೀಲಕಂಠ ಅವರ ಹೆಸರಿನ ಖಾತೆ ಬ್ಲಾಕ್‌ ಮಾಡಿದ್ದರು.

ʼಆ.22ರಂದು ನೀಲಕಂಠ ಅವರು ಪತ್ನಿಯೊಂದಿಗೆ ಬ್ಯಾಂಕ್‌ಗೆ ತೆರಳಿ ಇಬ್ಬರ ಖಾತೆಗೆ ತಲಾ ₹9 ಲಕ್ಷ ಎಫ್‌ಡಿ ಮಾಡಿಸಿದ್ದರು. ಆ.28 ರಂದು ನೀಲಕಂಠ ಅವರು ಬ್ಯಾಂಕ್‌ ಮ್ಯಾನೇಜರ್‌ ಅವರಿಗೆ ಕರೆ ಮಾಡಿ ʼನನ್ನ ಬ್ಯಾಂಕ್‌ ಖಾತೆಗೆ ಇರುವ ಮೊಬೈಲ್‌ ಸಂಖ್ಯೆ ಬದಲಾಯಿಸಿದ್ದೀರಾ?ʼ ಅಂತ ಕೇಳಿದ್ದರು. ಅದಕ್ಕೆ ʼನಿಮ್ಮ ಖಾತೆಗೆ ಇರುವ ಮೊಬೈಲ್‌ ಸಂಖ್ಯೆ ಬದಲಾವಣೆ ಆಗಿಲ್ಲ. ಆದರೆ, ನಿಮ್ಮ ಖಾತೆಯಿಂದ ಲೋನ್‌ ಹಾಗೂ ಬೇರೆ-ಬೇರೆ ಕಡೆ ಹಣ ವರ್ಗಾವಣೆಯಾಗಿದೆʼ ಅಂತ ಅವರು ಖಾತೆಯ ವಿವರ ಕಳುಹಿಸಿದ್ದರುʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ʼಯಾರೋ ಅಪರಿಚಿತರು ನನ್ನ ಖಾತೆಯಿಂದ ₹8 ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದ ಕೂಡಲೇ ಸೈಬರ್‌ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಿದ್ದೇನೆ. ಆ.25 ರಂದು ₹3 ಲಕ್ಷ, ಆ.26ರಂದು ₹2 ಲಕ್ಷ, ಆ.27ರಂದು ₹3 ಲಕ್ಷ ಹೀಗೆ 9 ಬಾರಿ ಒಟ್ಟು ₹8 ಲಕ್ಷ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ನನಗೆ ಮಾಹಿತಿ ಇಲ್ಲದೆ ಅಪರಿಚಿತರು ನನ್ನ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆʼ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ : ಕೃಷಿ ರಂಗ | ಕೃಷಿಗೆ ಬೆನ್ನೆಲುಬಾದ ಮೈಸೂರಿನ ನೇಗಿಲು

ವಂಚಕರನ್ನು ಪತ್ತೆ ಹಚ್ಚಿ, ಹಣ ವಾಪಸ್‌ ಕೊಡಿಸುವಂತೆ ನೀಲಕಂಠ ಸಂಗಪ್ಪಾ ಅವರು ಬೀದರ್‌ ನಗರದ ಸಿಇಎನ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...