ಬಸವ ಸಂಸ್ಕೃತಿ ಅಭಿಯಾನ ಮತ್ತು ಅಭಿಯಾನದ ನೇತೃತ್ವ ವಹಿಸಿದ ಲಿಂಗಾಯತ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿರುವ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಭಾಲ್ಕಿ ಪಟ್ಟಣದ ತಹಸೀಲ್ ಕಚೇರಿಯಲ್ಲಿ ಸೋಮವಾರ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಮೇಶ ಚಿದ್ರಿ ನೇತೃತ್ವದಲ್ಲಿ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಮಲ್ಲಿಕಾರ್ಜುನ ವಡ್ಡನಕೇರಿ ಅವರಿಗೆ ಸಲ್ಲಿಸಿದರು.
ʼರಾಜ್ಯದಾದ್ಯಂತ ಸೆ.1ರಿಂದ ಅ.3ರವರೆಗೆ ನಡೆದ ಬಸವ ಸಂಸ್ಕೃತಿ ಅಭಿಯಾನ ಅಭೂತಪೂರ್ವ ಯಶಸ್ಸು ಕಂಡಿದೆ. ಇನ್ನು ಸಮಾರೋಪ ಸಮಾರಂಭದಲ್ಲಿ ನೂರಾರು ಮಠಾಧೀಶರು, ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಬಸವ ಭಕ್ತರು ಪಾಲ್ಗೊಂಡು ಬಸವ ಸಂಸ್ಕೃತಿ ಅಭಿಯಾನ ಐತಿಹಾಸಿಕವಾಗಿ ಯಶಸ್ವಿಗೊಳಿಸಿದ್ದಾರೆ. ಆದರೆ ಇದರ ಯಶಸ್ಸು ಸಹಿಸದ ಕನ್ನೇರಿ ಮಠದ ಪೀಠಾಧಿಪತಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಇಲ್ಲ ಸಲ್ಲದ ಹೇಳಿಕೆ ನೀಡಿ ನಾಲಿಗೆ ಮತ್ತು ಮೆದುಳಿಗೆ ಸಂಪರ್ಕ ಇಲ್ಲದಂತೆ ವರ್ತಿಸಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನೇರಿ ಮಠ ಬಸವಾದಿ ಶರಣರ ಪರಂಪರೆ ಹೊಂದಿರುವ ಪೀಠವಾಗಿದೆ. ಆದರೆ, ಬಸವ ಸಂಸ್ಕೃತಿ ಮತ್ತು ಮಠಾಧೀಶರ ವಿರುದ್ಧು ಕೀಳು ಮಟ್ಟದ ಶಬ್ದಗಳನ್ನು ಬಳಸಿ ಕನ್ನೇರಿ ಮಠಕ್ಕೆ ಅಗೌರವ ತಂದು ಕೊಟ್ಟಿದ್ದಾರೆ. ಇಂತಹ ನೀಚ ಮನಸ್ಥಿತಿ ಹೊಂದಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರು ಪೀಠದ ಮೇಲೆ ಕುಳಿತುಕೊಳ್ಳಲು ಯಾವುದೇ ನೈತಿಕಲ್ಲ. ಸಮಾಜದಲ್ಲಿ ವಿಷಬೀಜ ಬಿತ್ತಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ಇಂತಹ ಸ್ವಾಮೀಜಿ ವಿರುದ್ಧ ರಾಜ್ಯ ಸರಕಾರ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕುʼಈ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಬೀದರ್ | ಕನ್ನಡ ಕಾವ್ಯ ಕ್ಷೇತ್ರಕ್ಕೆ ಹೊಸ ಹೊಳಪು ತಂದುಕೊಟ್ಟ ಬೇಂದ್ರೆ : ಅನಂತ ಕೃಷ್ಣ ದೇಶಪಾಂಡೆ
ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ್, ತಾಲೂಕು ಅಧ್ಯಕ್ಷ ಬಸವರಾಜ ಕಾರಬಾರಿ, ಯುವ ಘಟಕದ ಜಿಲ್ಲಾಧ್ಯಕ್ಷ ಸುದೀಪ ತುಗಾವೆ, ಪ್ರಮುಖರಾದ ಜಗದೀಶ ಪಾಟೀಲ್, ಭದ್ರಯ್ಯ ಸ್ವಾಮಿ, ಸಂಗಮೇಶ ಮಾರ್ಗೆ, ಬಾಲಾಜಿ ಮೇಗೆ, ಸಂಗಮೇಶ ಗುಮ್ಮೆ ಸೇರಿದಂತೆ ಹಲವರು ಇದ್ದರು.





