2026ರ ಫೆ.12ರಂದು ದೆಹಲಿಯಲ್ಲಿ ಕೇಂದ್ರ ಸರ್ಕಾರ ವಿರುದ್ಧ ಬುಧ್ದಗಯಾ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ ಆಂದೋಲನ ನಡೆಸಲಾಗುವುದು ಬುದ್ಧಗಯಾ ಮಹಾಬೋಧಿ ಆಂದೋಲನದ ರೂವಾರಿ ಭಂತೆ ವಿನಯಚಾರ್ಯ ಹೇಳಿದರು.
ಬೀದರ್‌ನಲ್ಲಿ ಈಚೆಗೆ ಭಿಕ್ಕು ಸಂಘ, ಭಾರತೀಯ ಬೌದ್ಧ ಮಹಾಸಭೆ ಮತ್ತು ಬೌದ್ಧ ಉಪಾಸಕ ಉಪಾಸಕಿಯರ ಸಂಘದಿಂದ ನಡೆದ ಬುದ್ಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದ ನಿಮಿತ್ತ ಧಮ್ಮ ಧ್ವಜ ಪಥ ಸಂಚಲನ ಹಾಗೂ ವರ್ಷವಾಸ ಸಮಾರೋಪ ಸಮಾರಂಭ ನಡೆಯಿತು.
ನಗರದ ಶಿವನಗರದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ 500 ಮೀಟರ ಉದ್ದದ ಧಮ್ಮ ಧ್ವಜದ ಪಥ ಸಂಚಲನವನ್ನು ಸಮತಾ ಸೈನಿಕ ದಳದ ಸಾರಥ್ಯದಲ್ಲಿ ನಡೆಯಿತು. ಬಳಿಕ ಸಂಜೆ 6 ಗಂಟೆಗೆ ಡಾ. ಅಂಬೇಡ್ಕರ್ ವೃತ್ತದಲ್ಲಿ ನಡೆದ ಬೃಹತ್ ಬಹಿರಂಗ ಸಭೆ ನಡೆಯಿತು.

ʼ2026ರ ಫೆ.12ಕ್ಕೆ ದೇಹಲಿಯ ರಾಮಲೀಲಾ ಮೈದಾನದಲ್ಲಿ ಬೌದ್ಧರ ಶಕ್ತಿ ಪ್ರದರ್ಶನ ಮಾಡುವ ಕಾಲ ಬಂದಿದೆ. ನಮ್ಮ ಧ್ವನಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಪ್ರಧಾನಿ ಮೋದಿ ಅವರಿಗೆ ಮುಟ್ಟಿಸಬೇಕಾಗಿದೆ. ಧಾರಾಕಾರ ಮಳೆಯಲ್ಲೂ ಧಮ್ಮ ಧ್ವಜ ಪಥಸಂಚಲನ ಯಶಸ್ವಿಗೊಳಿಸಿದ ಜಿಲ್ಲೆಯ ಸ್ವಾಭಿಮಾನಿ ಸೈನಿಕರು ಮತ್ತು ಬೌದ್ಧ ಅನುಯಾಯಿಗಳ ಕಾರ್ಯ ಶ್ಲಾಘನೀಯʼ ಎಂದರು.
ʼಪ್ರಧಾನಿ ಮೋದಿ ಅವರಿಗೆ ಬೌದ್ಧ ಅನುಯಾಯಿಗಳ ಹೋರಾಟದ ಧ್ವನಿ ಕೆಳಿಸಿದರೆ ಅವರು ಬುಧ್ದಗಯಾದಲ್ಲಿ ಆಕ್ರಮಿಸಿರುವ ಪಂಡಿತರಿಗೆ ಮುಟ್ಟಿಸುತ್ತಾರೆ. ಆವಾಗ ಪಂಡಿತರು ಬುದ್ಧಗಯಾ ಬೌದ್ಧರಿಗೆ ಬಿಟ್ಟು ಗುಡಿ ಗುಂಡಾರ ದೇವಸ್ಥಾನಕ್ಕೆ ಸೇರುತ್ತಾರೆ. ಡಾ.ಆರ್.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣ ಮಾಡಲು ದೇಶದ ಎಲ್ಲಾ ಬುದ್ಧ ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳು ಬೌದ್ಧ ಅನುಯಾಯಿಗಳು ದೆಹಲಿ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕುʼ ಎಂದು ಕರೆ ನೀಡಿದರು.
ʼವಿದೇಶದಲ್ಲಿ ಬುದ್ಧರ ಗುಣಗಾನ ಮತ್ತು ಬುದ್ಧರ ನಾಡಿನಿಂದ ಬಂದವರು ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶದಲ್ಲಿ ರಾಮ-ನಾಮ ಜಪಿಸುತ್ತಾರೆ. ಇದೀಗ ನಾವು ಬುದ್ಧ- ಭೀಮ ನಾಮ ಜಪಿಸಿ ಮೋದಿಯವರ ನಿದ್ದೆ ಕೆಡಿಸೋಣ. ಮೋದಿ ಅವರು ಪಂಡಿತರ ನಿದ್ದೆ ಕೆಡಿಸುತ್ತಾರೆ. ನಮ್ಮ ಬೌದ್ಧಗಯಾ ನಮಗೆ ದೊರೆಯಲಿದೆʼ ಎಂದು ಮಾರ್ಮಿಕವಾಗಿ ನುಡಿದರು.

ಮೈಸೂರಿನ ಬೌದ್ಧ ಸಾಹಿತಿ, ಚಿಂತಕ ಹನಸೋಗೆ ಸೋಮಶೇಖರ ಮಾತನಾಡಿ, ʼಬೌದ್ಧ ಧಮ್ಮಕ್ಕೆ ಆಶ್ರಯ ನೀಡಿದ ಸಾಮ್ರಾಟ ಅಶೋಕ ಅವರು ನಿರ್ಮಿಸಿದ 84 ಸಾವಿರ ಬೌದ್ಧ ಸ್ತೂಪಗಳು ಬೌದ್ಧರ ಕೈಸೇರಬೇಕು. ಆವಾಗ ಮಾತ್ರ ಪ್ರಬುದ್ಧ ಭಾರತ ನಿರ್ಮಾಣ ಆಗಲು ಸಾಧ್ಯʼ ಎಂದರು.
ಕಾರ್ಯಕ್ರಮದಲ್ಲಿ ಭಂತೆ ಧಮ್ಮಾನಂದ ಮಹಾಥೇರೊ ಸಾನಿಧ್ಯ ವಹಿಸಿದರು. ಭಂತೆ ಸಂಘ ರಖೀತ್ ಅವರು ಮಾತನಾಡಿದರು.
ಇದನ್ನೂ ಓದಿ : ಬೀದರ್ | ವ್ಯಕ್ತಿತ್ವ ವಿಕಸನಕ್ಕೆ ಸಾಹಿತ್ಯ-ಸಂಸ್ಕೃತಿ ಮುಖ್ಯ : ಮಹೇಶ ಪಾಟೀಲ್
ಭಾರತೀಯ ಬೌದ್ಧ ಮಹಾಸಭೆ ಜಿಲ್ಲಾಧ್ಯಕ್ಷ ರಾಜಪ್ಪಾ ಗೂನ್ನಳ್ಳಿಕರ್, ಭಾಲ್ಕಿ ತಾಲೂಕಾಧ್ಯಕ್ಷ ವಿಜಯಕುಮಾರ ಗಾಯಕವಾಡ, ಆರ್.ಪಿ.ಐ (ಅಂಬೇಡ್ಕರ್) ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೊಡಬೊಲೆ, ಹಿರಿಯ ಸಾಹಿತಿ ಕಾಶಿನಾಥ ಚೆಲ್ವಾ, ದಶರಥ ಗುರು, ವಿಠಲದಾಸ ಪ್ಯಾಗೆ, ಅನಿಲಕುಮಾರ ಬೆಲ್ದಾರ್, ಶಂಕರರಾವ ದೊಡ್ಡಿ, ವಿನಯಕುಮಾರ ಮಾಳಗೆ, ಕೆ.ಪುಂಡಲಿಕರಾವ, ಶಿವಮೂರ್ತಿ ಸುಬಾನೆ, ಸುರೇಶ ಜೊಜನಾಕರ್, ಶ್ರೀಪತಿರಾವ ದಿನೆ, ಶಿವಕುಮಾರ ನಿಲಿಕಟ್ಟಿ, ರಾಜು ಶೇರಿಕರ್, ತಿಪ್ಪಣ್ಣಾ ಶಿವಪುರೆ, ಚಕ್ರಧರ್ ಹೊಸಳ್ಳೆ, ಜಿತೇಂದ್ರ ಕಾಂಬಳೆ, ಶಿವಕಾರ ಕುಂಚೆ, ವಿನೋದ ರತ್ನಾಕರ್, ಕಾಶಿ ಬಗದಲ್, ಸೂರ್ಯಕಾಂತ ಭಾವಿದೊಡ್ಡಿ, ಪ್ರಕಾಶ ಗೊಡಬೊಲೆ, ಜನಾರ್ಧನ್ ಜಹಿರಾಬಾದ, ಪ್ರಶಾಂತ ದೊಡ್ಡಿ,ಮೊಹನ್ ಕಾಳೆಕರ್, ಪ್ರಸನ್ ಡಾಂಘೆ, ರಾಹುಲ್ ಖಂದಾರೆ, ಮಾರುತಿ ಕಂಟಿ, ಅರುಣ ಪಟೇಲ್, ನರಸಿಂಗ ಸಾಮ್ರಾಟ, ಅಂಬಾದಾಸ ಗಾಯಕವಾಡ, ಸೂರ್ಯಕಾಂತ ಸಿಂಗೆ, ನರಸಪ್ಪಾ ಮೇಟಿ, ಅಶೋಕ ಆಲೂರಕರ್, ಪ್ರಕಾಶ ರಾವಣ, ಅಮರ ಅಲ್ಲಾಪೂರ, ವಿನಿತ್ ಗಿರಿ, ಶೋಭಾವತಿ ಜಂಜಿರೆ, ಚಂದ್ರಕಲಾ ಬಡಿಗೆರ್, ಮಂಜುಳಾ ಭಾವಿದೊಡ್ಡಿ ಅನೇಕರು ಉಪಸ್ಥಿತರಿದ್ದರು.





