ಬೀದರ್‌ | ಶಾಂತಿ, ಸಮೃದ್ಧಿಯಿಂದ ಮನುಷ್ಯ ಸಂಬಂಧ ಗಟ್ಟಿ : ಸಬೀಹಾ ಫಾತಿಮಾ

Date:

ಕುರ್‌ಆನ್ ಸೃಷ್ಟಿಕರ್ತ-ಮಾನವ ಹಾಗೂ ಮನುಷ್ಯರ ನಡುವಿನ ಸಂಬಂಧ ಹೇಗಿರಬೇಕು ಎಂಬುದರ ಮಾರ್ಗದರ್ಶಿಯಾಗಿದೆ ಎಂದು ಅನುಪಮ ಮಹಿಳಾ ಮಾಸಿಕ ಉಪ ಸಂಪಾದಕಿ ಸಬೀಹಾ ಫಾತಿಮಾ ಹೇಳಿದರು.

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಜಮಾಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ‘ಶಾಂತಿ ಮತ್ತು ಸಮೃದ್ಧಿ ಕುರಾನಿನ ಬೆಳಕಿನಲ್ಲಿ’ ಕುರಿತ ಪ್ರವಚನ ಕಾರ್ಯಕ್ರಮದಲ್ಲಿ ಕುರ್‌ಆನ್ ಅಧ್ಯಾಯ 17ರ ಸೂಕ್ತ 23 ರಿಂದ 30 ರವರೆಗೆ ಪಠಿಸಿ, ಅವುಗಳ ವಿವರಣೆ ನೀಡಿ ಮಾತನಾಡಿದರು.

“ಸೃಷ್ಟಿಕರ್ತ-ಮಾನವ ಮತ್ತು ಮಾನವ- ಮಾನವರ ನಡುವಿನ ಸಂಬಂಧ ಗಟ್ಟಿಯಾದರೆ ಶಾಂತಿ, ಸಮೃದ್ಧಿ ನೆಲೆಗೊಳ್ಳುತ್ತದೆ. ʼಅಸ್ಸಲಾಮ್ ಅಲೈಕುಮ್ ರಹಮತುಲ್ಲಾಹೀ ಬರಕಾತುಹು’ ಎನ್ನುವುದು ಅಲ್ಲಾಹನು ನಿಮ್ಮ ಮೇಲೆ ಶಾಂತಿ, ಕರುಣೆ ಹಾಗೂ ಸಮೃದ್ಧಿ ವರ್ಷಿಸಲಿ ಎಂಬ ಪ್ರಾರ್ಥನೆಯಾಗಿದೆ. ನಾವು ಶಾಂತಿಗಾಗಿ ಪ್ರಾರ್ಥಿಸುವವರು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼನಮ್ಮೆಲ್ಲರ ಪ್ರಭು ಏಕದೇವನು, ಚಿರಂತನನು, ಸ್ವಯಂ ಜೀವಂತನು, ಇಡೀ ಪ್ರಪಂಚದ ನಿಯಂತ್ರಕನೂ ಆಗಿದ್ದಾನೆ. ಅವನ ಹೊರತು ಬೇರಾರೂ ಆರಾದ್ಯರಿಲ್ಲ. ಅವನಿಗೆ ತೂಕಡಿಕೆಯಾಗಲಿ, ನಿದ್ರೆಯಾಗಲಿ ಬಾಧಿಸುವುದಿಲ್ಲ. ಭೂಮಿಯಲ್ಲಿ ಇರುವುದೆಲ್ಲವೂ ಅವನದೇ ಆಗಿದೆ. ತಂದೆ-ತಾಯಿಯೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಸಂಬಂಧಿಕರು, ದರಿದ್ರರು, ಪ್ರಯಾಣಿಕರಿಗೆ ಅವರ ಹಕ್ಕು ಕೊಡಬೇಕು. ಅವರೊಂದಿಗೆ ಸೌಜನ್ಯ ನೀತಿ ಅನುಸರಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆʼ ಎಂದು ತಿಳಿಸಿದರು.

ದಿವ್ಯ ಉಪಸ್ಥಿತಿ ವಹಿಸಿದ್ದ ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ, ʼಪ್ರಸ್ತುತ ಶಾಂತಿಯನ್ನು ಉಳಿಸಿ, ಬೆಳೆಸಬೇಕಿದೆ. ಶಾಂತಿ ಎನ್ನುವುದು ಸಂಪತ್ತು ಹಾಗೂ ಅಪಾರ ಸಾಧನಗಳಿಂದ ದೊರೆಯುವಂಥದ್ದಲ್ಲ. ದೇವರ ಆರಾಧನೆ, ಕರುಣೆ, ದಯೆ, ನ್ಯಾಯ, ಸಮಾನತೆಯಿಂದ ಶಾಂತಿ ಲಭಿಸುತ್ತದೆ. ಮುಹಮ್ಮದ್(ಸ) ಹಾಗೂ ಬಸವಣ್ಣ ಶಾಂತಿ, ಸೌಹಾರ್ದತೆಯ ಪ್ರತೀಕʼ ಎಂದರು.

1000722357
ಬೀದರ್ ಬಸವ ಮಂಟಪದ ಮಾತೆ ಸತ್ಯದೇವಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿಮಾ ಬಹೆನ್‍ಜಿ ಮಾತನಾಡಿ, ʼದೇವರು ಪ್ರೇಮ, ಶಾಂತಿ, ಶಕ್ತಿಯ ಸಾಗರ. ಆತನಿಂದಲೇ ಶಾಂತಿ ದೊರೆಯುತ್ತದೆ. ಆರಾಮ ವಲಯ ಹಾಗೂ ವಿಜ್ಞಾನ ಪ್ರಗತಿಯಿಂದ ಶಾಂತಿ ಸಿಗುವುದಿಲ್ಲ. ಮನುಷ್ಯ ಏಕಾಂತದಲ್ಲಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಂತಿ ಸ್ವರೂಪನಾಗಲು ಪ್ರಯತ್ನಿಸಬೇಕುʼ ಎಂದು ತಿಳಿಸಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ತಷ್ಕೀಲಾ ಖಾನಂ ಮಾತನಾಡಿ, ʼದ್ವೇಷ, ಅನ್ಯಾಯ, ವೈರತ್ವ ತೊರೆದು, ಪ್ರೀತಿ, ನ್ಯಾಯ, ಸಮಾನತೆ ಪಾಲಿಸಿದರೆ ಶಾಂತಿ ಸಾಧ್ಯ. ನಮ್ಮ ನೆಚ್ಚಿನ ಭಾರತದಲ್ಲಿ ಶಾಂತಿಯಿಂದ ಅನೇಕತೆಯಲ್ಲಿ ಏಕತೆ ಸಾಧಿಸಬಹುದಾಗಿದೆ. ಅಸಮಾನತೆ, ಅನ್ಯಾಯವೇ ಅಶಾಂತಿಗೆ ಕಾರಣʼ ಎಂದು ಹೇಳಿದರು.

ʼಮನಸ್ಸಿನ ಶಾಂತಿ ಪ್ರಭುವಿನ ಸ್ಮರಣೆಯಲ್ಲಿದೆ. ನಾವು ಯಾವಾಗಲೂ ಸೃಷ್ಟಿಕರ್ತನ್ನು ಸ್ಮರಿಸುತ್ತ. ಅವನನ್ನೇ ಪ್ರಶಂಸಿಸಬೇಕು. ನಮ್ಮ ತಂದೆ-ತಾಯಿ ಒಂದೇ. ನಾವೆಲ್ಲ ಸಹೋದರರು ಎಂಬ ಭಾವನೆಯಿಂದ ಸಮಾನತೆ, ಶಾಂತಿ ಸ್ಥಾಪನೆಯಾಗುತ್ತದೆʼ ಎಂದು ಹೇಳಿದರು.

ಜಮಾ ಅತೆ ಇಸ್ಲಾಮಿ ಹಿಂದ್ ಸ್ಥಳೀಯ ಮಹಿಳಾ ವಿಭಾಗದ ಸಂಚಾಲಕಿ ಆಸ್ಮಾ ಸುಲ್ತಾನಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಮಂದೀಪ್ ಕೌರ್, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ನಿರ್ದೇಶಕಿ ಮೇಹರ್ ಸುಲ್ತಾನಾ, ಹಿರಿಯ ಸ್ತ್ರೀ ರೋಗ ತಜ್ಞರಾದ ಡಾ.ಶೇಖ ಸುಮಯ್ಯಾ ಕುಲ್‍ಸುಮ್, ಡಾ.ವಿಜಯಶ್ರೀ ಎಸ್.ಬಶೆಟ್ಟಿ, ಡಾ.ಸುಮಯ್ಯ ಫಾತಿಮಾ, ಸಾಹಿತಿ ಡಾ.ಸುನಿತಾ ಕೂಡ್ಲಿಕರ್, ಡಾ.ಅಮಲ್ ಷರೀಫ್, ಡಾ.ದೀಪಾ ನಂದಿ, ಬಿಲ್ಕೀಸ್ ಫಾತಿಮಾ, ಬುಶ್ರಾ ಜಮಾಲ್, ಬುತುಲ್ ಸಯೀದ್ ಫಾತಿಮಾ, ವಿದ್ಯಾವತಿ ಹಿರೇಮಠ, ಡಾ. ಬುಶ್ರಾ ಐಮನ್, ರುಖಯ್ಯಾ ಫಾತಿಮಾ, ಡಾ.ಮಕ್ತುಂಬಿ ಎಂ. ಭಾಲ್ಕಿ, ಅಕ್ಕ ಪಡೆಯ ಸಂಗೀತಾ ಉಪಸ್ಥಿತರಿದ್ದರು.

ಇದನ್ನೂ ಓದಿ : ಬೀದರ್‌ | ಸಂವಿಧಾನ ಭಾರತದ ಪವಿತ್ರ ಮಹಾಗ್ರಂಥ : ಸಚಿವ ಈಶ್ವರ ಖಂಡ್ರೆ

ವಾಯಫಾ ಆಶ್ರಫ್ ಅವರ ಕುರ್‌ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಹಾಜರಾ ಬೇಗಂ ಕುರ್‌ಆನ್ ಪಠಣ ಕನ್ನಡಕ್ಕೆ ಅನುವಾದಿಸಿದರು. ಅಫ್ರಾ ನಾಜ್ ನಿರೂಪಿಸಿದರು. ಜಮಾ ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ತೌಹೀದ್ ಸಿಂಧೆ ವಂದಿಸಿದರು. ಇದೇ ವೇಳೆ ಕುರ್‌ಆನ್ ಸಂದೇಶಗಳ ಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...