ಬೀದರ್ ತಾಲೂಕಿನ ಮರಖಲ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಒ ಹುದ್ದೆಗೆ ಐಎಎಸ್ ಪರೀಕ್ಷಾರ್ಥಿ ಅಧಿಕಾರಿ ರಮ್ಯಾ ಎಚ್. ಅವರನ್ನು ನಿಯೋಜಿಸಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಅವರು ಆದೇಶಿಸಿದ್ದಾರೆ.
ಐಎಎಸ್ ಅಧಿಕಾರಿ ರಮ್ಯಾ ರಂಗನಾಥ ಅವರು ಈ ಹಿಂದೆ ಬೀದರ್ ಮಹಾನಗರ ಪಾಲಿಕೆ ಆಯುಕ್ತರಾಗಿ ಕೆಲ ದಿನ ಕಾರ್ಯನಿರ್ವಹಿಸಿದ್ದಾರೆ. ಆ ಹುದ್ದೆಗೆ ಖಾಯಂ ಆಯುಕ್ತರಾಗಿ ಐಎಎಸ್ ಅಧಿಕಾರಿ ಮುಕುಲ್ ಜೈನ್ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.
ತರಬೇತಿ ಅವಧಿಯಲ್ಲಿರುವ ರಮ್ಯಾ ಅವರನ್ನು ನ.7 ರಿಂದ 13ವರೆಗೆ ಒಂದು ವಾರ ಪ್ರಭಾರ ಸಹಿತವಾಗಿ ಪಿಡಿಒ ಹುದ್ದೆಗೆ ನಿಯೋಜನೆ ಮಾಡಲಾಗಿದೆ. ಶುಕ್ರವಾರ ರಮ್ಯಾ ಅವರು ಮರಖಲ ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮರಖಲ ಗ್ರಾಮ ಪಂಚಾಯತ್ ಪಿಡಿಒ ಉಮೇಶ ಜಾಬಾ, ಅಧ್ಯಕ್ಷೆ ಈಶ್ವರಮ್ಮ ಬಸವರಾಜ ಓಂಕಾರೆ ಮತ್ತಿತರರಿದ್ದರು.
ಇದನ್ನೂ ಓದಿ : ಬೀದರ್ | ಪತ್ರಕರ್ತನ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹಿಸಿ ಗೃಹ ಸಚಿವರಿಗೆ ಮನವಿ





