ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾನೂನುಬಾಹಿರ ಹಾಗೂ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಬೀದರ್ ನಗರದಲ್ಲಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಆರ್‌ಎಸ್‌ಎಸ್ ಕಾನೂನು ಬಾಹಿರ ನಿಲುವು, ದಲಿತ ವಿರೋಧಿ ವರ್ತನೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಬಂದಿರುವ ಜೀವಬೆದರಿಕೆಗಳನ್ನು ಖಂಡಿಸಲಾಗಿದೆ ಎಂದು ಕೈಯಲ್ಲಿ ಬಾಬಾಸಾಹೇಬರ ಭಾವಚಿತ್ರ ಹಿಡಿದು, ಘೋಷಣೆಗಳನ್ನು ಹಾಕುತ್ತ ನಗರದಲ್ಲಿ ಮೆರವಣಿಗೆ ನಡೆಸಿದರು.
ಮನವಿಯಲ್ಲಿ ಕೇಂದ್ರದಲ್ಲಿ ಮನುವಾದಿ ಶಕ್ತಿ ಅಧಿಕಾರಕ್ಕೆ ಬಂದ ನಂತರ ದಲಿತ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಶೂ ಎಸೆಯುವ ಪ್ರಯತ್ನ ನಡೆದಿದೆ. ಆರ್‌ಎಸ್‌ಎಸ್ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ವರ್ತಿಸುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸರ್ಕಾರ ತಕ್ಷಣವೇ ಸೂಕ್ತ ರಕ್ಷಣೆಯನ್ನು ಒದಗಿಸಬೇಕುʼ ಎಂದು ಒತ್ತಾಯಿಸಿದ್ದಾರೆ.

ಬಳಿಕ ಬೀದರ್ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಮಾರುತಿ ಬೌದ್ಧೆ, ರಾಜಕುಮಾರ ವಾಘಮಾರೆ, ಅರುಣ ಪಟೇಲ್, ರಮೇಶ ಉಮಾಪೂರೆ, ಅಶೋಕ ಗಾಯಕವಾಡ, ಶಿವರಾಜ ತಡಪಳ್ಳಿ, ಸತೀಶ ರತ್ನಾಕರ್, ಝರೆಪ್ಪಾ ವರ್ಮಾ, ವಾಮನರಾವ ಮೈಸಲಗೆ, ನರಸಿಂಗ ಮೇಟಿ, ರಾಹುಲ ಹಾಲಹಿಪ್ಪರಗಾ, ಶಿರೋಮಣಿ ಹಲಗೆ, ರಮೇಶ ಬೆಲ್ದಾಳ, ವಿಜಯಕುಮಾರ ಭಾವಿಕಟ್ಟಿ, ಬಸವರಾಜ ಭಾವಿದೊಡ್ಡಿ, ಬಾಬುರಾವ ಹೊನ್ನಾ , ಅಬ್ದುಲ ಮನ್ನಾನ್ ಸೇಠ, ಉದಯ ನಾಯಕ, ಗಾಲೆಬ್ ಹಾಲ್ಕಿ, ಸಾಯಿ ಸಿಂಧೆ, ಮಹೇಶ ಗೋರನಾಳಕರ್, ವಹೀದ ಲಖನ್, ಅವಿನಾಶ ರಾಯ್, ಅಭಿ ಕಾಳೆ, ಜಗದೀಶ್ವರ ಬಿರಾದಾರ, ಓಂಪ್ರಕಾಶ ರೊಟ್ಟೆ, ಇಂದುಮತಿ ಸಾಗರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬಸವಕಲ್ಯಾಣ ನಗರಸಭೆಯಲ್ಲಿ ಅವ್ಯವಹಾರ : ಪೌರಾಯುಕ್ತ ಅಮಾನತಿಗೆ ಆಗ್ರಹಿಸಿ ಬಿಎಸ್ಪಿ ಪ್ರತಿಭಟನೆ






