ಆರ್‌ಎಸ್‌ಎಸ್ ಕಾಂಗ್ರೆಸ್‌ನಿಂದ ಪಳಗಿದ ಕೂಸು, ಇಂದು ಅದೇ ಆರ್‌ಎಸ್‌ಎಸ್ ಕಾಂಗ್ರೆಸ್‌ಗೆ ಮುಳುವಾಗಿದೆ ಎಂದು ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ಅಂಕುಶ ಗೋಖಲೆ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಗೂ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆತ ಘಟನೆ ಖಂಡಿಸಿ ಹುಮನಾಬಾದ್ ಪಟ್ಟಣದಲ್ಲಿ ಸೋಮವಾರ ವಿವಿಧ ಸಂಘಟನೆಗಳ ಒಕ್ಕೂಟ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಂಬಲಿತದಿಂದ ಆಯೋಜಿಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʼಸಂವಿಧಾನಕ್ಕೆ ಮುಟ್ಟಿದರೆ ಕೈ ಕಡಿಯುತ್ತೇವೆ, ಮನೆಗೆ ನುಗ್ಗಿ ತಲ್ವಾರ್‌ದಿಂದ ಹೊಡೆಯುತ್ತೇವೆ ಎಂದು ರೋಷದಿಂದ ಹೇಳುವುದು ಮೂರ್ಖತನದ ಪರಮಾವಧಿ. ಚುನಾವಣೆ ವೇಳೆ ಹಣ, ಹೆಂಡಕ್ಕೆ ಮತ ಪಡೆದು ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಆರ್‌ಎಸ್‌ಎಸ್ ಮನಸ್ಥಿತಿಯ ನಾಯಕರು ಸಂವಿಧಾನ ಬದಲಾವಣೆ ಹೊರಟಿದ್ದಾರೆ. ಎಂತಹ ನಾಯಕರನ್ನು ಆಯ್ಕೆ ಮಾಡಬೇಕೆಂಬ ಅರಿವು ಬರದಿಲ್ಲವೋ ಅಲ್ಲಿಯವರೆಗೆ ಸಂವಿಧಾನದ ಮೌಲ್ಯಗಳು ಉಳಿಸಲು ಸಾಧ್ಯವಿಲ್ಲʼ ಎಂದರು.
ʼ1940ರಲ್ಲಿ ಆರ್‌ಎಸ್‌ಎಸ್ ಮುಖಂಡ ಗೋಲ್ವಾಕರ್ ಅವರು ʼ ಒಂದು ದೇಶ, ಒಬ್ಬ ನಾಯಕ, ಒಂದು ಸಿದ್ದಾಂತ, ಒಂದು ಭಾಷೆ ಹಾಗೂ ಒಂದು ಧ್ವಜʼ ಎಂದು ಹೇಳಿದ್ದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾದ ಸರ್ವಾಧಿಕಾರಿ ಸಿದ್ಧಾಂತವಾಗಿದೆ. ಈ ದೇಶದಲ್ಲಿ ಶೇ 75ರಷ್ಟು ಭಾಗ ಮನಸ್ಮೃತಿ ಜಾರಿಯಿದ್ದರೆ, ಭಾರತ ಸಂವಿಧಾನ ಕೇವಲ ಶೇ 25ರಷ್ಟು ಜಾರಿಯಲ್ಲಿದೆʼ ಎಂದರು.
ʼಮಹಿಳೆಯರಿಗೆ ಅತ್ಯಂತ ನೀಚವಾಗಿ ಕಾಣುವ ಮನಸ್ಮೃತಿ ವಿಚಾರಧಾರೆಯನ್ನು ಓಬಿಸಿ, ದಲಿತ ಸಮುದಾಯದ ಮಹಿಳೆಯರು ತಿಳಿದುಕೊಳ್ಳುವ ಅಗತ್ಯವಿದೆ. ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಕಾರಣವೇ ಇದೇ ಮನಸ್ಮೃತಿಯಲ್ಲಿರುವ ವರ್ಣವ್ಯವಸ್ಥೆಯ ಕೆಟ್ಟ ವಿಚಾರಧಾರೆ ಕಾರಣವಾಗಿದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಆರ್‌ಎಸ್‌ಎಸ್ ಸಂಪೂರ್ಣವಾಗಿ ನಿಷೇಧಿಸಿ : ಅಂಕುಶ ಗೋಖಲೆ





