ಬಸವಕಲ್ಯಾಣ ನಗರದಲ್ಲಿ ಅ.14ರಂದು ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿಯಾದ ಶಿಕ್ಷಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭೀಮ ಆರ್ಮಿ ಸಂಘಟನೆ ತಾಲೂಕು ಘಟಕ ಆಗ್ರಹಿಸಿದೆ.
ಈ ಸಂಬಂಧ ಭೀಮ ಆರ್ಮಿ ತಾಲೂಕಾಧ್ಯಕ್ಷ ಚೇತನ ಕಾಡೆ ಅವರು ಬಸವಕಲ್ಯಾಣ ಬಿಇಒ ಸಿದ್ದವೀರಯ್ಯ ರುದುನೂರ ಅವರಿಗೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ, ಅದರ ಪ್ರತಿಗಳನ್ನು ಪ್ರತ್ಯೇಕವಾಗಿ ಜಿಲ್ಲಾಧಿಕಾರಿ ಹಾಗೂ ಡಿಡಿಪಿಐ ಅವರಿಗೂ ಸಲ್ಲಿಸಿದ್ದಾರೆ.
ʼಸರ್ಕಾರಿ ನೌಕರರು ಖಾಸಗಿ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂಬ ನಿಯಮವಿದ್ದರೂ ಇತ್ತೀಚೆಗೆ ಬಸವಕಲ್ಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಕೆಲ ಶಿಕ್ಷಕರು, ಸರ್ಕಾರಿ ನೌಕರರು ಭಾಗವಹಿಸಿ ತಮ್ಮ ಬೇಜವಾಬ್ದಾರಿತನ ಮೆರೆದಿದ್ದಾರೆʼ ಎಂದು ದೂರಿದ್ದಾರೆ.
ಇದನ್ನೂ ಓದಿ : ಔರಾದ್ | ಸೋಯಾ ಬಣವಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು : ಪರಿಹಾರಕ್ಕೆ ಆಗ್ರಹ
ʼಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾದ ಶಿಕ್ಷಕರು ಸೇರಿದಂತೆ ಇತರೆ 20 ಸರ್ಕಾರಿ ನೌಕರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದುʼ ಎಂದು ಚೇತನ ಕಾಡೆ ಎಚ್ಚರಿಸಿದ್ದಾರೆ.





