ಬೀದರ್‌ | ದೇಶಪಾಂಡೆ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಯುಗಾದಿ ಕವಿಗೋಷ್ಠಿ

Date:

ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಯುಗಾದಿ ಕವಿಗೋಷ್ಠಿ , ಪ್ರಶಸ್ತಿ ಪ್ರದಾನ ಹಾಗೂ ಹಾಸ್ಯ, ಸಂಗೀತ ಕಾರ್ಯಕ್ರಮ ಜರುಗಿತು.

ಹಿರಿಯ ಸಾಹಿತಿ ಎಸ್.ಎಂ.ಜನವಾಡಕರ್‌ ಮಾತನಾಡಿ, ʼಇತ್ತೀಚಿನ ದಿನಗಳಲ್ಲಿ ನಮ್ಮ ಪೂರ್ವಜರ ಸಂಸ್ಕೃತಿ ನಶಿಸಿ ಹೋಗುತ್ತಿರುವುದು ದುರದೃಷ್ಟಕರ. ಇಂದಿನ ತರಣರು ನಮ್ಮ ಮೂಲ ಸಂಸ್ಕೃತಿಯನ್ನೇ ಮರೆಯುತ್ತಿದ್ದಾರೆ. ಸಾಹಿತಿಗಳು, ಕವಿಗಳು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸಬೇಕು. ಮುಂದಿನ ಜನಾಂಗಕ್ಕೆ ಸಾಹಿತ್ಯಿಕ ಸಂಸ್ಕೃತಿ ಪರಂಪರೆ ಮುಂದುವರೆಯಬೇಕು. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕವಿತೆ ರಚಿಸುವ ಮೂಲಕ ಸಾಂಸ್ಕೃತಿಕ ರಾಯಭಾರಿಗಳಾಗಬೇಕುʼ ಎಂದು ತಿಳಿಸಿದರು.

ಡಾ.ಜಗದೇವಿ ತಿಬಶೆಟ್ಟಿ ಆಶಯ ನುಡಿಯಲ್ಲಿ, ʼಕವಿ-ಕವಯಿತ್ರಿಯರು ಹೆಚ್ಚಿನ ಓದು ಮೈಗೂಡಿಸಿಕೊಂಡು ಜ್ಞಾನ ಸಂಪಾದಿಸಿಕೊಳ್ಳಬೇಕು. ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ನಾಡಿನ ಹೆಸರಾಂತ ಲೇಖಕರ ಸಾಹಿತ್ಯ ಓದುವ ಮೂಲಕ ಅತ್ಯುತ್ತಮ ಕವಿತೆ ರಚನೆಗೆ ಮುಂದಾಗಬೇಕುʼ ಎಂದು ಸಲಹೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಪುಣ್ಯವತಿ ವಿಸಾಜಿ ಅವರು ಮಾತನಾಡಿ, ʼಆಳವಾದ ಅಧ್ಯಯನ ಹಾಗೂ ಅನುಭವಗಳಿಂದ ಸೊಗಸಾದ ಕಾವ್ಯ ರಚಿಸಬಹುದು. ಸಮಾಜದ ಆಗುಹೋಗುಗಳ ಕುರಿತು ಜವಾಬ್ದಾರಿಯುತವಾದ ಗಟ್ಟಿ ಸಾಹಿತ್ಯ ಬರಬೇಕುʼ ಎಂದರು.

113

ಸಾಹಿತಿ ರಘುಶಂಖ ಭಾತಂಬ್ರಾ  ಅವರು ಎಂ.ಜಿ.ದೇಶಪಾಂಡೆ ಅವರ ಬದುಕು ಬರಹ ಕುರಿತು ಉಪನ್ಯಾಸ ನೀಡಿದರು. ಪ್ರಮುಖರಾದ ವಿಜಯಕುಮಾರ್ ಸೋನಾರೆ, ಶಂಭುಲಿಂಗ ವಾಲ್ದೊಡ್ಡಿ, ವಿಶ್ವನಾಥ ಮುಕ್ತಾ, ವೀರಭದ್ರಪ್ಪ ಉಪ್ಪಿನ್, ಮೋಹನ ಪಾಟೀಲ್ ಮನ್ನಳ್ಳಿ ಎಂ.ಜಿ.ದೇಶಪಾಂಡೆ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಗಾಯಕರಾದ ರೇಖಾ ಸೌದಿ ಅವರಿಗೆ ʼಗಾಯಕಿ ಲತಾ ಮಂಗೇಶ್ಕರ್ ಪ್ರಶಸ್ತಿʼ ಮತ್ತು ಸಮಾಜ ಸೇವಕರಾದ ಸಂಗಮೇಶ ಬಿರಾದಾರ ಅವರಿಗೆ ʼಸಮಾಜ ಚೂಡಾಮಣಿ ರತ್ನ ಪ್ರಶಸ್ತಿʼ ನೀಡಿ ಗೌರವಿಸಲಾಯಿತು.

ಕವಿಗೋಷ್ಠಿಯಲ್ಲಿ ಬಸವರಾಜ ದಯಾಸಾಗರ,  ಜಗದೇವಿ ದುಬುಲಗುಂಡೆ, ರೂಪಾ ಪಾಟೀಲ, ಮಾಧುರಿ ಕುಲಕರ್ಣಿ, ಮಲ್ಲಿಕಾರ್ಜುನ ಸ್ವಾಮಿ ಸಂಗಮ, ಡಾ.ಸುಜಾತಾ ಹೊಸಮನಿ, ಅರವಿಂದ ಕುಲಕರ್ಣಿ, ಸಂಗಮೇಶ್ವರ ಜ್ಯಾಂತೆ, ರವಿದಾಸ್ ಕಾಂಬಳೆ, ಪ್ರಭು ಮಾಲೆ, ಸಂಗೀತಾ ಕಾಂಬಳೆ, ವೀರೇಶ್ವರಿ ಮೂಲಗೆ, ಚಂದ್ರಶೇಖರ ಸಿಂಧೆ ಅವರು ಸ್ವರಚಿತ ಕವಿತೆ ವಾಚಿಸಿದರು.

ಪ್ರಕಾಶ ಕುಲಕರ್ಣಿ ಮುಗನೂರು ಹಾಸ್ಯ ನಡೆಸಿಕೊಟ್ಟರು. ಕರಬಸಪ್ಪ ವಿಶ್ವಕರ್ಮ, ಮಲ್ಲಿಕಾರ್ಜುನ ರಾಂಪುರೆ, ಬಸವರಾಜ ಯರನಳ್ಳಿ, ಪವನ ಗೌಡ, ಗಂಗಮ್ಮ, ರಾಂಪುರೆ ಅಕ್ಕನ ಬಳಗದವರು ಜಾನಪದ, ಭಾವಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಆಸ್ತಾ ಬಚ್ಚನ್  ಬಾಲಕಿ ನೃತ್ಯ ನಡೆಸಿಕೊಟ್ಟರು.

ಈ ಸುದ್ದಿ ಓದಿದ್ದೀರಾ? ರಂಜಾನ್ | ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸಿದ್ಧತೆ, ಸಚಿವ ಜಮೀರ್ ಭಾಗಿ

ಪ್ರಮುಖರಾದ ಅಂಕಿತಾ ಬಚ್ಚನ, ಆರ್.ಎಸ್.ಬಿರಾದಾರ, ಜಗನ್ನಾಥ ಯರನಳ್ಳಿ, ಮಹೇಶಕುಮಾರ ಮಜಗೆ, ಸುಧಾಕರ ಯರನಳ್ಳಿ, ಶಿವರಾಜ್ ಕಾಳಶೆಟ್ಟಿ, ರಮೇಶ ಇಟಗೆ, ಸುರೇಶ್ ಬಾಬು, ಬಸವರಾಜ ಮೂಲಗೆ, ರೇವಣಪ್ಪ ಮೂಲಗೆ ಸೇರಿದಂತೆ ಮತ್ತಿತರರಿದ್ದರು. ಪ್ರೇಮಾ ಅವಿನಾಶ ಸ್ವಾಗತಿಸಿದರು. ಶಿಲ್ಪಾ ರಾಯವಾಡೆ ಪ್ರಾರ್ಥನೆ ಗೀತೆ ಹಾಡಿದರು. ಪುಷ್ಪಾ ಪಾಟೀಲ್ ಸಂಗಡಿಗರು ನಾಡಗೀತೆ ನಡೆಸಿಕೊಟ್ಟರು. ಯೋಗೇಂದ್ರ ಯದಲಾಪೂರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಮಜಗೆ ನಿರೂಪಿಸಿದರು. ಬಾಬುರಾವ ಗೊಂಡಾ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...