ಬೀದರ್‌ | ʼಸಂವಿಧಾನ ಯುವಯಾನʼ ಬೈಕ್‌ ಜಾಥಾಕ್ಕೆ ಸ್ವಾಗತ

Date:

ʼದೇಶಪ್ರೇಮಿ ಯುವಾಂದೋಲನʼ ಸಂಘಟನೆಯಿಂದ ರಾಜ್ಯಾದ್ಯಂತ ಏಪ್ರಿಲ್ 14 ರಿಂದ 26ರವೆಗೆ ಹಮ್ಮಿಕೊಂಡಿರುವ ʼಸಂವಿಧಾನ ಯುವಯಾನʼ ಬೈಕ್‌ ಜಾಥಾ ಮಂಗಳವಾರ ಬೀದರ್ ನಗರ ತಲುಪಿತು. ನಗರದ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದಲ್ಲಿ ಸ್ವಾಗತಿಸಲಾಯಿತು.

ಬೀದರ್ ಬಸವ ಮಂಟಪದ ಮಾತೆ ಸತ್ಯದೇವಿ ಮಾತಾಜಿ ಅವರು ಮಾತನಾಡಿ, ʼಯುವಕರು ದೇಶ ಕಟ್ಟುವ ಹಾಗು ಜನರಲ್ಲಿ ಜಾಗೃತಿ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದದ್ದುʼ ಎಂದು ಶುಭ ಹಾರೈಸಿದರು.

ಮುಖಂಡ ಶಿವಯ್ಯ ಸ್ವಾಮಿ ಅವರು ಮಾತನಾಡಿ, ʼಸಂವಿಧಾನದ ಆಶಯದಂತೆ ನಾವೆಲ್ಲರೂ ನಮ್ಮ ಹಕ್ಕು ಪಡೆಯಬೇಕು, ಕರ್ತವ್ಯ ನಿರ್ವಹಿಸಬೇಕು. ಎಲ್ಲರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರ ಗುತ್ತಿಗೆ ಎಂಬ ಆಧುನಿಕ ಜೀತ ಪದ್ಧತಿಯನ್ನು ರದ್ದುಗೊಳಿಸಿ ಸುಭದ್ರ ಉದ್ಯೋಗ ಕೊಡುವ ಕೆಲಸ ಸರ್ಕಾರ ಮಾಡಬೇಕುʼ ಎಂದು ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಮುಖರಾದ ಓಂಪ್ರಕಾಶ ರೊಟ್ಟೆ, ಶ್ರೀಕಾಂತ ಸ್ವಾಮಿ, ನಿಜಾಮುದ್ದೀನ್, ರಮೇಶ್ ಮಠಪತಿ , ಜಗದಿಶ್ವರ ಬಿರಾದಾರ, ಮಹೇಶ್ ಗೋರನಾಳಕರ್, ಗುರುದಾಸ್ ಅಮದಲಪಾಡ್ ಅವರು ಜಾಥಾ ಉದ್ದೇಶಿಸಿ ಮಾತನಾಡಿದರು.

ಕಲಬುರಗಿ ಜಿಲ್ಲೆಯ ವಾಡಿಯಿಂದ ಏ.14ರಂದು ಆರಂಭಗೊಂಡಿರುವ ಬೈಕ್ ಯಾತ್ರೆ ಏ.26ರಂದು ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾದ ಸಮಾವೇಶದಂದು ಮುಕ್ತಾಯಗೊಳ್ಳಲಿದೆ.

ಧರ್ಮಕ್ಕಿಂತ ದೇಶ ಮುಖ್ಯ : ಬಸವಲಿಂಗ ಪಟ್ಟದ್ದೇವರು

ಏಪ್ರಿಲ್ 26 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಂವಿಧಾನ ಸಂರಕ್ಷಣಾ ಸಮಾವೇಶ ಪ್ರಚಾರದ ಸಂವಿಧಾನ ಯುವಯಾನ ತಂಡ ಭಾಲ್ಕಿ ತಲುಪಿತು. ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಜಾಥಾಕ್ಕೆ ಸ್ವಾಗತಿಸಿದರು.

WhatsApp Image 2025 04 16 at 8.08.46 AM
ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ʼಸಂವಿಧಾನ ಯುವಯಾನʼ ಜಾತಾವನ್ನು ಸ್ವಾಗತಿಸಿದರು.

ಧರ್ಮಕ್ಕಿಂತ ದೇಶ ಮುಖ್ಯ, ನಮ್ಮ ದೇಶದ ಸಂಸ್ಕೃತಿ, ಧರ್ಮ ಎಲ್ಲವು ಉಳಿಯಬೇಕಾದರೆ ಸಂವಿಧಾನ ರಕ್ಷಣೆ ಆಗಬೇಕು. ಈ ಬೈಕ್ ಜಾಥಾ ಸಮಾವೇಶ ಬಹಳ ಮುಖ್ಯ, ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕುʼ ಡಾ. ಬಸವಲಿಂಗ ಪಟ್ಟದ್ದೇವರು ಕರೆ ನೀಡಿದರು.

ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಭಾರತೀಯ ಸಂವಿಧಾನದ ಆಶಯಗಳು ವಚನಗಳಲ್ಲಿ ಕಾಣುತ್ತೇವೆ, ಹಾಗೆಯೇ ಶರಣರ ವಚನಗಳ ಮೌಲ್ಯಗಳು ಸಂವಿಧಾನದಲ್ಲಿ ಕಾಣುತ್ತವೆ. ಸಂವಿಧಾನ ರಕ್ಷಣೆ ಮಾಡುವ ಈ ಬೈಕ್‌ ಜಾಥಾ ಅಭಿಯಾನ ಮತ್ತು ಸಮಾವೇಶ ಯಶಸ್ವಿಯಾಗಲಿʼ ಎಂದು ಶುಭ ಹಾರೈಸಿದರು.

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮುಖಂಡರಾದ ಶಶಿಧರ್‌ ಕೋಸಂಬೆ ಸೇರಿದಂತೆ ಮತ್ತಿತರರು ಜಾಥಾಕ್ಕೆ ಶುಭ ಕೋರಿ ಬೀಳ್ಕೊಟ್ಟರು.

ಸಂವಿಧಾನ ಯುವಯಾನ ತಂಡದ ಪ್ರಮುಖರಾದ ಸರೋವರ ಬೆಂಕಿಕೆರೆ, ಹೇಮಂತ್‌ ಸಕಲೇಶಪುರ, ರಾಜೇಂದ್ರ ರಾಜವಾಳ, ದುರ್ಗೇಶ ಬರಗೂರ್‌, ಮರಿಸ್ವಾಮಿ,ಟೋಪಣ್ಣ ಕೋಮಟೆ, ಯಮುನಾ, ರವಿ ನವಲಹಳ್ಳಿ, ಶರಣು, ಗೀತಾ ಹೊಸಮನಿ, ಕೌಶಲ್ಯ, ರವಿ ಯಮನೂರ್‌, ಶಾಂತಾ, ಉಮೇಶ, ಚನ್ನಕೇಶವ್‌ ಅವರು ಜಾಥಾ ಕೈಗೊಂಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...