ಬಸವಕಲ್ಯಾಣದಲ್ಲಿ ದಾದಾ ಸಾಹೇಬ್ ಕಾನ್ಶಿರಾಮ್ ಅವರ 92ನೇ ಜಯಂತಿ ಆಚರಣೆ

Date:

ಬಸವಕಲ್ಯಾಣ ನಗರದಲ್ಲಿರುವ ಬಿಕೆಡಿಬಿ ಮಿಟಿಂಗ್ ಹಾಲ್‌ನಲ್ಲಿ ಜನರ ಧ್ವನಿ ಸಂಘಟನೆ ಬಸವಕಲ್ಯಾಣ ತಾಲ್ಲೂಕು ಘಟಕದ ವತಿಯಿಂದ ದಾದಾ ಸಾಹೇಬ್ ಕಾನ್ಶಿರಾಮ್ ಅವರ 92ನೇ ಜಯಂತಿಯನ್ನು ಆಚರಿಸಲಾಯಿತು.

ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅಂಕುಶ ಗೋಖಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼದೇಶದಲ್ಲಿ ಉತ್ತರ ಭಾರತದಲ್ಲಿನ ಬಹುಜನರಿಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಪರಿಚಯಿಸಿ, ಅಲ್ಲಿನ ಬಹುಜನರಲ್ಲಿ ಜಾಗೃತಿ ಮೂಡಿಸಿ ರಾಜಕೀಯ ಅಧಿಕಾರ ಪಡೆಯುವಂತೆ ಮಾಡಿದ ಮಹತ್ವದ ನಾಯಕ ಕಾನ್ಶಿರಾಮ್ ಆಗಿದ್ದಾರೆ. ಕಾನ್ಶಿರಾಮ್‌ ಅವರ ರಾಜಕೀಯ ಪ್ರಜ್ಞೆ, ಆಳವಾದ ಚಿಂತನೆ ಇಂದಿನ ಸಮಾಜದಲ್ಲಿ ತುಂಬಾ ಅಗತ್ಯವಾಗಿದೆʼ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಸಮಾಜದ ಯುವ ಮುಖಂಡ ರಾಹುಲ್ ದಲಾಲೆ ಮಾತನಾಡಿ, ಉತ್ತರ ಪ್ರದೇಶದಲ್ಲಿ ಬಹುಜನರ ಪರವಾಗಿ ಚಳುವಳಿ ನಡೆಸುವ ವೇಳೆ ಅನೇಕ ಅಡೆತಡೆಗಳನ್ನು ಎದುರಿಸಿದರೂ ಕಾನ್ಶಿರಾಮ್ ಅವರು ಹಿಂಜರಿಯದೆ ಮುನ್ನಡೆದು ಬಹುಜನರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಬಲ ನೀಡಿದರು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಜಕುಮಾರ ಸಿಂದೆ ಮಾತನಾಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಮುನ್ನಡೆಸಿಕೊಂಡು ಬಂದ ಚಳುವಳಿಯ ರಥವನ್ನು ಕಾನ್ಶಿರಾಮ್ ಅವರು ಮುಂದುವರಿಸಿಕೊಂಡು ಹೋಗಿ ಉತ್ತರ ಭಾರತದಲ್ಲಿ ಸಾಮಾಜಿಕ ಹಾಗೂ ರಾಜಕೀಯವಾಗಿ ತಮ್ಮದೇ ಆದ ಛಾಪು ಮೂಡಿಸಿದರು ಎಂದು ಹೇಳಿದರು.

WhatsApp Image 2026 03 15 at 9.25.03 PM
ಜನರ ಧ್ವನಿ ಸಂಘಟನೆಯ ಸಂಸ್ಥಾಪಕ ಅಂಕುಶ ಗೋಖಲೆ ಅವರು ಮಾತನಾಡಿದರು.

ಸಂಘಟನೆಯ ಹಿರಿಯ ಮುಖಂಡ ತಿಪ್ಪಣ್ಣಾ ವಾಲಿ ಅವರು ಕಾನ್ಶಿರಾಮ್ ಅವರ ಜೀವನ ಚರಿತ್ರೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ ಸಿಂದೆ, ಬಸವಲ್ಯಾಣ ತಾಲ್ಲೂಕು ಅಧ್ಯಕ್ಷ ಮಾರುತಿ ಡಿ.ಕಾಂಬಳೆ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೋಮನಾಥ ಮುಡಬಿಕರ, ಖೆರ್ಡಾ(ಬಿ) ಗ್ರಾಪಂ ಮಾಜಿ ಅಧ್ಯಕ್ಷ ಉದಯಕುಮಾರ ಕಾಂಬಳೆ, ದಲಿತ ಸೇನೆ ಬಸವಕಲ್ಯಾಣ ತಾಲ್ಲೂಕಾಧ್ಯಕ್ಷ ಪ್ರಫುಲ್ ಗಾಯಕವಾಡ, ದಲಿತ ಸೇನೆ ಹುಲಸೂರ ತಾಲ್ಲೂಕಾಧ್ಯಕ್ಷ ಅಶೋಕ ಸಿಂಧೆ, ಯುವ ಹೋರಾಟಗಾರ ಮಹಾಂತೇಶ ಗೌರಕರ ಮುಖಂಡರಾದ ಸುನಿಲ್ ಶಿಂಧೆ ಯರಂಡಗಿ, ಅತುಲ್ ಗಿರಿ ಮಹಾರಾಜ, ರಾಜು ಸೂರ್ಯವಂಶಿ ಸಸ್ತಾಪೂರ, ಸಂಜು ಗಾಯಕವಾಡ, ಸಂಜು ಗೊಡಬೊಲೆ, ದಿಗಂಬರ ಜಲ್ದೆ, ಗೌತಮ ಕಾಂಬಳೆ, ಸಾಗರ ಹಳ್ಳಿಖೇಡೆ, ದೇವಾನಂದ ತೊಳೆ, ಸತೀಶ ಹಾಲಹಳ್ಳಿ, ದೀಪಕ್ ಸಿಂಧೆ, ಅನಿಲ್ ಗಾಯಕವಾಡ, ಉಮೇಶ್ ಕಾಂಬಳೆ, ಗೋಪಿನಾಥ ದಲಾಲೆ, ಆದಿತ್ಯ ಗಜರೆ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದನ್ನೂ ಓದಿ : ಬಸವಕಲ್ಯಾಣ | ಬಸವೇಶ್ವರ ದೇವಸ್ಥಾನ ಚುನಾವಣೆ : 15 ಜನರ ಗೆಲುವು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...