ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ದಲಿತ ಸೇನೆಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ದಲಿತ ಸೇನೆಯ ರಾಜ್ಯಾಧ್ಯಕ್ಷ ಹನುಮಂತ ಯಲಸಂಗಿ ಅವರ ಆದೇಶ ಮೇರೆಗೆ, ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ ಹಾಗೂ ದಲಿತ ಸೇನೆ ತಾಲೂಕಾಧಕ್ಷ ಅಶೋಕ ಶಿಂಧೆ ನೇತೃತ್ವದಲ್ಲಿ ನೂತನ ಪದಾಧಿಕಾರಿ ನೇಮಕ ಮಾಡಲಾಯಿತು.
ಪದಾಧಿಕಾರಿಗಳ ನೇಮಕ :
ಸತೀಶ್ ಗಾಯಕವಾಡ (ಉಪಾಧಕ್ಷ), ಅಶೋಕ್ ಕಾಂಬಳೆ (ಕಾರ್ಯದರ್ಶಿ), ಅರುಣ ಖುನೆ (ಗೌರವಾಧ್ಯಕ್ಷ), ಪ್ರಫುಲ್ ಸೂರ್ಯವಂಶಿ (ಪ್ರಧಾನ ಕಾರ್ಯದರ್ಶಿ), ಶ್ರೀನಿವಾಸ ಬುಲೆ (ಉಪಾಧ್ಯಕ್ಷ), ಯಶವಂತ ಸೂರ್ಯವಂಶಿ (ಸಂಘಟಕ ಕಾರ್ಯದರ್ಶಿ), ರಾಜು ಲಾಟೆ (ಖಜಾಂಚಿ), ಅನಿಲ ವಾಡಿಯರ್ (ಸಂಘಟಕ ಕಾರ್ಯದರ್ಶಿ), ರಾಜು ಶಿಂಧೆ, ರಾವ್ ಸಾಹೇಬ್ ಶಿಂಧೆ (ಸಂಘಟಕರು), ಪ್ರಶಾಂತ್ ಗಾಯಕವಾಡ (ಮಹೇಕರ ಗ್ರಾಮಾಧಕ್ಷ), ರಮೇಶ್ ಸೂರ್ಯವಂಶಿ (ಮಹೇಕರ ಗ್ರಾಮ ಉಪಾಧಕ್ಷ) ಆಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಅಧಿಕಾರಿಗಳ ದಾಳಿ : ಮೂರು ಕೇಂದ್ರ ಸೀಜ್
ಈ ವೇಳೆ ದಲಿತ ಸೇನೆ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಸಿದ್ಧಾರ್ಥ್ ಡಾಂಗೆ, ದಲಿತ ಸೇನೆ ಬಸವಕಲ್ಯಾಣ ತಾಲೂಕಾಧ್ಯಕ್ಷ ಪ್ರಫುಲ್ ಗಾಯಕವಾಡ, ದಲಿತ ಸೇನೆ ಹುಲಸೂರ ಹೋಬಳಿ ಅಧಕ್ಷ ನಾಗನಾಥ ಬನ್ಸೊಡೆ ಸೇರಿ ಸಂತೋಷ್ ಜೇಧೆ, ಬಬನ್ ಗೋರೆ, ಅಶೋಕ ಶಿಂಧೆ ಮತ್ತಿತರರಿದ್ದರು.





