ಔರಾದ್ ತಾಲೂಕಿನ ಮಮದಾಪುರ ಗ್ರಾಮದಿಂದ ಅಲ್ಲಾಪುರ ಗ್ರಾಮದ ಮಾರ್ಗವಾಗಿ ಮಹಾರಾಷ್ಟ್ರದ ಕುನಮಾರಪಳ್ಳಿ ಗಡಿವರೆಗೆ ಕೈಗೊಂಡಿರುವ ರಸ್ತೆ ದುರಸ್ತಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಅಲ್ಲಾಪುರ ಗ್ರಾಮದ ಪ್ರಕಾಶ ಕಾಂಬಳೆ ಅವರು ದೂರಿದ್ದಾರೆ.
ಈ ಸಂಬಂಧ ಔರಾದ್ ತಹಸೀಲ್ದಾರ್ ಮಹೇಶ ಪಾಟೀಲ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ರಸ್ತೆ ದುರಸ್ತಿಯ ಕಾಮಗಾರಿ ಕಳಪೆ ನಡೆದಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಜಿಲ್ಲಾ, ತಾಲೂಕು ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ತನಿಖೆಗೆ ಸ್ಪಂದಿಸುತ್ತಿಲ್ಲ. ಒಟ್ಟು 5 ಲಕ್ಷ ಮೊತ್ತದ ಕಾಮಗಾರಿಯನ್ನು ರಸ್ತೆ ದುರಸ್ತಿ ಹಾಗೂ ಮೆಂಟೆನನ್ಸ್‌ಗಾಗಿ ವಿಭಾಗಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗುಣಮಟ್ಟದ ರಸ್ತೆ ದುರಸ್ತಿ ಕಾಮಗಾರಿ ನಡೆಸದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭಾಲ್ಕಿ | ನಿಟ್ಟೂರನಲ್ಲಿ ನಾಳೆ ʼಸಮಾನತೆ ಸಭೆʼ : ನಟ ಚೇತನ ಅಹಿಂಸಾ ಭಾಗಿ





