ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು ಹೆಚ್ಚಿಸಿದವರು ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್ ಎಂದು ಇತಿಹಾಸ ಉಪನ್ಯಾಸಕಿ ಪ್ರಿಯಾಂಕಾ ಗೊನ್ನಳ್ಳಿಕರ್ ಹೇಳಿದರು.
ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ʼದೇಶದ ಬಗ್ಗೆ ಅಪಾರ ಗೌರವ ಹಾಗೂ ದೇಶಕ್ಕಾಗಿ ತನ್ನ ಪ್ರಾಣತ್ಯಾಗವನ್ನು ಮಾಡಿ ಇಡೀ ಭಾರತೀಯ ಯುವಕರಿಗೆ ಪ್ರೇರಣೆಯಾಗಿದ್ದಾರೆʼ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಮಾತನಾಡಿ, ;ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಂತೆ ಯುವಕರು ದೇಶಪ್ರೇಮ ಮೈಗೂಡಿಸಿಕೊಂಡು ದೇಶದ ಸಂಸ್ಕೃತಿ, ಪರಂಪರೆ ರಕ್ಷಣೆಗೆ ಮಾದರಿಯಾಗಬೇಕುʼ ಎಂದರು.
ಇದನ್ನೂ ಓದಿ : ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ
ಉಪನ್ಯಾಸಕರಾದ ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ, ವನದೇವಿ ಎಕ್ಕಳೆ, ಶಿವಪುತ್ರ ಧರಣಿ, ಸುಧೀರ್ ಅಲೂರೆ, ಮಹಾಂತೇಶ್ ಪಾಂಚಾಳ, ಸಂತೋಷ್ ಧೂಳ್ಗೆಂಡೆ, ರಾಜಕುಮಾರ ಹಳ್ಳಿಕರ್ ಹಾಗೂ ವಿದ್ಯಾರ್ಥಿಗಳಿದ್ದರು.





