12ನೇ ಶತಮಾನದ ಪ್ರಮುಖರ ವಚನಕಾರ ಶಿವಯೋಗಿ ಸಿದ್ದರಾಮೇಶ್ವರ ಅವರು ಜಾತಿ, ಲಿಂಗ, ವರ್ಣ ಭೇದ ಸಮಾಜ ಕಟ್ಟುವ ಮೂಲಕ ಸಮಾನತೆ ಸಮಾಜಕ್ಕಾಗಿ ಶ್ರಮಿಸಿದ್ದಾರೆ ಎಂದು ಸಂತಪೂರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸಿದ್ದಾರೆಡ್ಡಿ ಬಿರಾದರ್ ಹೇಳಿದರು.
ತಾಲೂಕಿನ ಸಂತಪೂರ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ʼಸಿದ್ದರಾಮೇಶ್ವರ ವಚನಗಳಲ್ಲಿ ಮಾನವೀಯ ಮೌಲ್ಯಗಳಿವೆ. ನಾವೆಲ್ಲರೂ ಬಸವಾದಿ ಶರಣರ ಅನುಭಾವದ ವಚನ ಸಾಹಿತ್ಯ ಓದುವುದು ರೂಢಿಸಿಕೊಳ್ಳಬೇಕುʼ ಎಂದರು.
ಪ್ರಾಚಾರ್ಯ ನವೀಲಕುಮಾರ ಉತ್ಕಾರ ಮಾತನಾಡಿ, ʼಸಿದ್ದರಾಮೇಶ್ವರ ಅವರು ಕಾಯಕ ನಿಷ್ಠರು, ಸಾಮಾಜಿಕ ಚಿಂತನೆಯ ಮೌಲ್ಯಗಳ ಪ್ರತಿಪಾದಕರು. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅನಿಷ್ಟ ಪದ್ಧತಿ, ಮೌಢ್ಯಗಳನ್ನು ನಿಷ್ಠುರವಾಗಿ ವಿರೋಧಿಸಿ ಶಿವಯೋಗಿ ಆದವರುʼ ಎಂದು ಹೇಳಿದರು.
ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಾದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಕ್ರಮವಾಗಿ ರೇಣುಕಾ ಅನಿಲಕುಮಾರ, ಗೀತಾ ನರಸಪ್ಪ, ಮತ್ತು ವೈಷ್ಣವಿ ಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಸಮಾನತೆಯ ಸಂದೇಶ ಸಾರಿದ ಸಿದ್ದರಾಮೇಶ್ವರರು : ಗುರುಮಹಾಂತ ಸ್ವಾಮೀಜಿ
ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಕಿರಣಕುಮಾರ ಬಿರಾದರ್, ಉಪನ್ಯಾಸಕರಾದ ಮಹಾಂತೇಶ ಪಾಂಚಾಳ, ಸುರೇಶ್ ಬಂಡೆ, ರಾಜಕುಮಾರ ಹಳ್ಳಿಕರ್, ಸಂತೋಷ್ ಧೂಳ್ಗೆಂಡೆ, ಸುಧೀರ್ ಅಲೂರೆ, ಪ್ರಿಯಾಂಕಾ ಗೊನ್ನಳಿಕರ್, ಮೀರಾತಾಯಿ ಕಾಂಬಳೆ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.





