ಭಾಲ್ಕಿ ಹಿರೇಮಠದಲ್ಲಿ ಏ.10ರಿಂದ ಬಸವ ದರ್ಶನ ಪ್ರವಚನ

Date:

ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಹಾಗೂ ಚನ್ನಬಸವ ಪಟ್ಟದ್ದೇವರ
27ನೆಯ ಸ್ಮರಣೋತ್ಸವ ಮತ್ತು ವಚನ ಜಾತ್ರೆ ಹಾಗೂ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ನಿಮಿತ್ಯ ಏಪ್ರಿಲ್ 1ರಿಂದ 20ರವರೆಗೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ಹಂದಿಗುಂದದ ಸಿದ್ಧೇಶ್ವರ ಮಠದ ಶಿವಾನಂದ ಮಹಾಸ್ವಾಮಿ ಅವರಿಂದ ನಡೆಯಲಿರುವ ಬಸವ ದರ್ಶನ ಪ್ರವಚನದ ಕರಪತ್ರ ಬಿಡುಗಡೆಗೊಳಿಸಲಾಯಿತು.

ಸಾನಿಧ್ಯ ವಹಿಸಿದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಹಾಗೂ ವಚನ ಜಾತ್ರೆ ಹಾಗೂ ನನ್ನ ಅಮೃತ ಮಹೋತ್ಸವ ನೆಪ ಮಾತ್ರ. ಆದರೆ ಆ ನೆಪದಲ್ಲಿ ಬಸವತತ್ವ ಪ್ರಸಾರ ಮಾಡುವುದೇ ನಮ್ಮ ಮೂಲ ಉದ್ದೇಶವಾಗಿದೆ. ಅದಕ್ಕಾಗಿ ಈ ವರ್ಷ ಬಸವದರ್ಶನ ಪ್ರವಚನವನ್ನು ಏರ್ಪಡಿಸಲಾಗಿದೆ. ಅದಕ್ಕಾಗಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ತಾವೆಲ್ಲರೂ ಪ್ರಯತ್ನಸಬೇಕುʼ ಎಂದರು.

ʼಇಂದಿನ ದಿನಮಾನಗಳಲ್ಲಿ ಮನೆ-ಮನೆ ತೆರಳಿ ಆಮಂತ್ರಣ ನೀಡುವ ಅನಿವಾರ್ಯತೆ ಉಂಟಾಗಿದೆ. ಧರ್ಮ ಕಾರ್ಯಕ್ಕಾಗಿ ದುಡಿದವರಿಗೆ ದೇವರ ಕರುಣೆ ಆಗುತ್ತದೆ. ಬಸವಗುರುವಿನ ಕರುಣೆ ಆಗಬೇಕಾದರೆ ನಾವು ಬಸವಕಾರ್ಯಕ್ಕೆ
ದುಡಿಯುವುದನ್ನು ಕಲಿಯಬೇಕು. ಬಸವತತ್ವ ಪ್ರಸಾರದ ಕಳಕಳಿ ನಮ್ಮಲ್ಲಿ ಇರಬೇಕು. ನಮ್ಮ ಕೌಟುಂಬಿಕ
ಕಾರ್ಯಕ್ಕಾಗಿ ನಾವು ಎಲ್ಲರಿಗೆ ಹೇಗೆ ಪ್ರೀತಿಯಿಂದ ಆಮಂತ್ರಿಸುತ್ತೇವೆ, ಅದೇ ರೀತಿ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ
ಸಮಯ ನೀಡಿದರೆ ಈ ಕಾರ್ಯಕ್ರಮ ಯಶಸ್ವಿಯಾಗುತ್ತದೆʼ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಲಬುರಗಿಯ ಹಿರಿಯ ಸಾಹಿತಿ ಕಲ್ಯಾಣರಾವ ಪಾಟೀಲ ಕರಪತ್ರ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಮಲ್ಲಮ್ಮ ಆರ್.ಪಾಟೀಲ ಅವರಿಗೆ ಕರ್ನಾಟಕ ಸರಕಾರದ ಕಿತ್ತೂರು ರಾಣಿ ಪ್ರಶಸ್ತಿ ಘೋಷಣೆ ಆದ
ಪ್ರಯುಕ್ತ ಪೂಜ್ಯರಿಂದ ಸನ್ಮಾನಿಸಲಾಯಿತು.

ಇದನ್ನೂ ಓದಿ : ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಪಂಕಜಾ ಶಿವು ಲೋಖಂಡೆ, ರೇಖಾ ಶಿವರಾಜ ಮಹಾಜನ, ರೇಖಾಬಾಯಿ
ರಾಜಶೇಖರ ಅಷ್ಟೂರೆ, ನಿರ್ಮಲಾ ಚಂದ್ರಕಾಂತ ಪಾಟೀಲ, ಶಾರದಾಬಾಯಿ ಬಾಬುರಾವ ಹುಣಜೆ, ಸುನೀತಾ
ಮಹಾದೇವಪ್ಪ ಮಮ್ಮಾ, ರುದ್ರಾಣಿ ವಿಲಾಸ ಬಕ್ಕಾ, ಸುವರ್ಣಾ ಓಂಕಾರ ಬಲ್ಲೂರೆ, ಪ್ರೇಮಲಾ ಶರಣಪ್ಪ ತೊಂಡಾರೆ,
ವನೀತಾ ಶಿವಕುಮಾರ ಪಾಟೀಲ, ಬಸಮ್ಮತಾಯಿ, ಶಂಭುಲಿಂಗ ಕಾಮಣ್ಣ, ನಾಗಶೆಟ್ಟೆಪ್ಪ ಲಂಜವಾಡೆ, ಗುಂಡಪ್ಪ
ಸಂಗಮಕರ, ಶಾಂತಯ್ಯ ಸ್ವಾಮಿ, ರಾಜು ಜುಬರೆ, ಮಲ್ಲಿಕಾರ್ಜುನ ಹುಣಜೆ, ದೀಪಕ್‌ ಠಮಕೆ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...

ಔರಾದ್‌ | ರಸ್ತೆ ದುರಸ್ತಿ ಕಾಮಗಾರಿ ಕಳಪೆ : ತನಿಖೆಗೆ ಆಗ್ರಹ

ಔರಾದ್‌ ತಾಲೂಕಿನ ಮಮದಾಪುರ ಗ್ರಾಮದಿಂದ ಅಲ್ಲಾಪುರ ಗ್ರಾಮದ ಮಾರ್ಗವಾಗಿ ಮಹಾರಾಷ್ಟ್ರದ ಕುನಮಾರಪಳ್ಳಿ...