ಬಸವಕಲ್ಯಾಣ | ಸಾಹಿತ್ಯ ಪರಂಪರೆ ದಾಟಿಸುವ ಹೊಣೆಗಾರಿಕೆ ಪ್ರಕಾಶಕರ ಮೇಲಿದೆ : ನ.ರವಿಕುಮಾರ

Date:

ಸಾಹಿತ್ಯ ಪರಂಪರೆಯ ಅರಿವನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹೊಣೆಗಾರಿಕೆ ಪ್ರಕಾಶಕರ ಮೇಲಿದೆ ಎಂದು ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯದರ್ಶಿ ಅಭಿನವ ರವಿಕುಮಾರ್ ಹೇಳಿದರು.

ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ‘ಪುಸ್ತಕೋದ್ಯಮ ನೆಲೆ-ಬೆಲೆ’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಾಹಿತಿಯನ್ನೇ ಜ್ಞಾನ ಎಂದು ಭಾವಿಸುವ ಹೊಸತಲೆಮಾರು ರೂಪುಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು .

‘ಸ್ಪರ್ಧಾತ್ಮಕ ಪಠ್ಯಗಳ ನೆಪದಲ್ಲಿ ಮೂಲ ಪಠ್ಯಗಳನ್ನು ಕಲಿಸದೆ ಗೈಡ್ ಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಮೂಲ ಪಠ್ಯಗಳ ಓದು ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಾಸಕ್ಕೆ ಮತ್ತು ಸೃಜನಶೀಲತೆಗೆ ಸಾಮರ್ಥ್ಯ ಸಹಕಾರಿಯಾಗಿದೆ. ಹೊಸ ಹೊಸ ಆಲೋಚನೆಗಳು ಮೊಳೆಯಲು, ವಿಶ್ಲೇಷಣಾ ಮನೋಧರ್ಮ ಹೆಚ್ಚಾಗುಲು ಕಲಿಕೆಯ ಗುಣಮಟ್ಟ ಸುಧಾರಿಸಲು ಮೂಲ ಪಠ್ಯಗಳ ಅನುಸಂಧಾನ ಅಗತ್ಯ’ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೃಷ್ಟಿ ಪಬ್ಲಿಕೇಷನ್ಸ್ ಸೃಷ್ಟಿ ನಾಗೇಶ್ ಮಾತನಾಡಿ, ʼಶರಣರ ನಾಡು ಬಸವಕಲ್ಯಾಣ ಮತ್ತು ವಚನಸಾಹಿತ್ಯದ ಗರಿಮೆಯನ್ನು ನೋಡಿ ಒಮ್ಮೆ ಮನಸ್ಸಿನೊಳಗೆ ತೆಗೆದುಕೊಳ್ಳಬೇಕು. ಚಾಲುಕ್ಯರ ಆಡಳಿತದ ಚಿತ್ರಣವನ್ನು, ಬಸವಣ್ಣನವರ ಆದರ್ಶವನ್ನು ಹೊಸ ನೆಲೆಗಳಲ್ಲಿ ಅಧ್ಯಯನ ಮಾಡಿ ಕೃತಿ ರೂಪ ನೀಡಬೇಕು. ವಚನ ಸಾಹಿತ್ಯ ಮತ್ತು ಶರಣ ಸಂಸ್ಕೃತಿಯ ಅರಿವಿನ ವಿಸ್ತಾರವನ್ನು ಓದುಗ ವಲಯಕ್ಕೆ ತಿಳಿಸುವ ಕೆಲಸ ಈಗಾಗಲೇ ನಡೆಯುತ್ತಿದೆ. ಅದು ಇನ್ನಷ್ಟು ಸಾಧ್ಯವಾಗಬೇಕು. ಕನ್ನಡ ಪುಸ್ತಕ ಪ್ರಾಧಿಕಾರ ಸಾಹಿತ್ಯ ಆಕಾಡೆಮಿ ಮುಂತಾದ ಸಾಹಿತ್ಯ ಸಂಸ್ಥೆಗಳು ಇಂಥ ಪ್ರದೇಶಗಳಲ್ಲಿ ಕಮ್ಮಟಗಳನ್ನು ನಡೆಸಿ ಯುವ ಬರಹಗಾರರ ಮತ್ತು ಓದುಗರ ಸಮುದಾಯವನ್ನು ಬೆಳೆಸಬೇಕು’ ಎಂದರು.

ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ ಮಾತನಾಡಿ, ‘ಪುಸ್ತಕಗಳು ಗಂಭೀರ ಓದುಗರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಮೇಲಿದೆ. ಪ್ರಕಾಶನ ಸಂಸ್ಥೆ ಬೆಳವಣಿಗೆ ಓದುಗ ವರ್ಗವನ್ನು ಅವಲಂಬಿಸಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ‘ಲೋಕವನ್ನು ಅರಿಯಲು ಅಕ್ಷರ ಮತ್ತು ಪುಸ್ತಕ ಸಂಸ್ಕೃತಿಯಿಂದ ಸಾಧ್ಯ. ಸಂಶೋಧನೆ, ವಿಮರ್ಶೆ, ಸಾಹಿತ್ಯದ ತಾತ್ವಿಕತೆಗಳ ಗಂಭೀರ ಅನುಸಂಧಾನಕ್ಕಾಗಿ ಮೂಲಪಠ್ಯ ಓದು ಬೇಕು. ಸಮಾಜ, ರಾಜಕಾರಣ ಸೇರಿ ಎಲ್ಲವುಗಳನ್ನು ಸಾಂಸ್ಕೃತಿಕ ಪಠ್ಯವಾಗಿ ಅಧ್ಯಯನ ಮಾಡಬೇಕಾದರೂ ಪುಸ್ತಕಗಳು ಪ್ರತಿಕಾರಗಳಾಗಿ ಪರಿಗಣಿಸಬೇಕಾಗಿದೆ’ ಎಂದರು.

ಬೆಂಗಳೂರಿನ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳಾದ ಭೂಮಿ ಬುಕ್ಸ್ ನ ವಿಶಾಲಕ್ಷಿ ಶರ್ಮ, ಕದಂಬ ಪ್ರಕಾಶನದ ನಾಗೇಶ್, ಕಲ್ಲಚ್ಚು ಪ್ರಕಾಶನದ ಮಹೇಶ್ ನಾಯಕ್, ಕನ್ ಕ್ಲೇವ್ ಇಂಡಿಯಾ ಪ್ರಕಾಶನದ ನಂದೀಶ್ ಸಂವಾದದಲ್ಲಿ ಮಾತನಾಡಿದರು.

ಇದನ್ನೂ ಓದಿ : ಬೀದರ್ | 2 ಎಕರೆ ನಿವೇಶನ ಮಂಜೂರು : ಅಲೆಮಾರಿಗಳ ಹೋರಾಟಕ್ಕೆ ಜಯ; ಧರಣಿ ಅಂತ್ಯ

ಉಪನ್ಯಾಸಕರಾದ ಅಶೋಕ ರೆಡ್ಡಿ ಗದಲೇಗಾಂವ, ಶ್ರೀನಿವಾಸ ಉಮಾಪುರೆ, ವಿವೇಕಾನಂದ ಶಿಂದೆ, ರೋಶನ್ ಬಿ, ಎಂಡಿ ಜಬಿ, ಜಗದೇವಿ ಜಾವಳಗೆ, ಶೀತಲ್ ರೆಡ್ಡಿ, ಸನತ್ ರೆಡ್ಡಿ, ಪ್ರಿಯಾ ಚೌಹಾಣ್ ಮೊದಲಾದವರು. ಚೆನ್ನಬಸಪ್ಪ ಗೌರ ಸ್ವಾಗತಿಸಿದರು. ಗಂಗಾಧರ ಸಾಲಿಮಠ ನಿರೂಪಿಸಿದರು. ಸಂಗೀತಾ ಮಹಾಗಾಂವೆ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...