ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ದೇಶಾಭಿಮಾನ ಮೂಡಿಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ ಮಹಾತ್ಮ ಜ್ಯೋತಿಬಾ ಫುಲೆ ಸ್ವತಂತ್ರ್ಯ ಪದವಿ ಪೂರ್ವ ಕಾಲೇಜು ವತಿಯಿಂದ ಬಾಳೂರು ಗ್ರಾಮದ ಶ್ರೀ ವೀರನಾಥ ದೇವಸ್ಥಾನದಲ್ಲಿ ಈಚೆಗೆ ಆಯೋಜಿಸಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಲೇಜಿನಲ್ಲಿ ಕಲಿತದನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ನಿರುದ್ಯೋಗ, ಪರಿಸರ ಮಾಲಿನ್ಯ, ಅಸಮಾನತೆ, ಮುಂತಾದ ಸವಾಲುಗಳು ನಮ್ಮ ಮುಂದೆ ಇವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲ ಯುವ ಸಮೂಹ ಜ್ಞಾನ, ಶಿಸ್ತು ಮತ್ತು ಸೇವಾಮನೋಭಾವ ಮೈಗೂಡಿಸಿಕೊಳ್ಳಬೇಬೇಕುʼ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಪ್ರೇಮಸಾಗರ್ ದಾಂಡೇಕರ ಮಾತನಾಡಿ, ʼರಾಷ್ಟ್ರೀಯ ಭಾವಕ್ಯತೆಯಲ್ಲಿ ಯುವಕರ ಪಾತ್ರ ಪ್ರಮುಖವಾದದ್ದು, ಯಶಸ್ವಿ ಬದುಕಿಗೆ ಶಿಸ್ತು, ಸಹಕಾರ ಹಾಗೂ ತಾಳ್ಮೆ ಮನೋಭಾವ ಅಗತ್ಯವಿದೆʼ ಎಂದು ಕಿವಿಮಾತು ಹೇಳಿದರು.

ಸಮಾರೋಪ ಸಮಾರಂಭಕ್ಕೂ ಮುನ್ನ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ವೀರನಾಥ ದೇವಸ್ಥಾನ ಆವರಣದಲ್ಲಿ ಸ್ವಚ್ಛತೆ ಹಾಗೂ ವಿವಿಧ ಕಾರ್ಯಚಟುವಟಿಕೆ ಕೈಗೊಂಡರು.
ಇದನ್ನೂ ಓದಿ : ಶೌಚಾಲಯ ಕಾಣದ ರಾಜ್ಯದ 170 ಸರ್ಕಾರಿ ಶಾಲೆಗಳು
ಜ್ಞಾನ ಉದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಕಾಶಿನಾಥ ಚಲ್ವಾ, ಶಿಕ್ಷಕರಾದ ನಿರ್ಮಲಾ ಚಲ್ವಾ, ಅಶೋಕುಮಾರ್ ಚಲ್ವಾ ಹಾಗೂ ಉಪನ್ಯಾಸಕರಾದ ನಾಗನಾಥ ಬಿರಾದಾರ, ಸತೀಶ್ ಶಿಂಧೆ, ಕಲಾವತಿ, ಚಂದ್ರಕಾಂತ್ ಮೇತ್ರೆ, ಶ್ರೀಕಾಂತ್ ಭೋಸ್ಲೆ, ನರ್ಸಿಂಗ್ ಗಾಯಕವಾಡ, ಸುದೇಶ್ ಕಾಂಬಳೆ ಹಾಗೂ ವಿದ್ಯಾರ್ಥಿ, ಸಿಬ್ಬಂದಿ ಇದ್ದರು. ಉಪನ್ಯಾಸಕ ಮುಕೇಶ ಚಲ್ವಾ ಸ್ವಾಗತಿಸಿ, ನಿರೂಪಿಸಿದರು. ಪ್ರಾಂಶುಪಾಲ ನಾರಾಯಣ ನೇಳಗೆ ವಂದಿಸಿದರು.





