ಬೀದರ್‌ | ಫೆ.22ರಿಂದ 8 ದಿನಗಳ ಧಮ್ಮ ಪ್ರವಚನ

Date:

ಫೆಬ್ರವರಿ 22ರಿಂದ ಮಾರ್ಚ್ 1ರವರೆಗೆ ಬೀದರ್ ನಗರದ ಸಿದ್ಧಾರ್ಥ ಕಾಲೇಜು ಆವರಣದಲ್ಲಿ 8 ದಿನಗಳ ಧಮ್ಮ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಾಸಭೆಯ‌ ಭಾರತೀಯ ಬೌದ್ಧ ಮಹಾಸಭೆಯ ಜಿಲ್ಲಾಧ್ಯಕ್ಷ ರಾಜಪ್ಪ ಗುನಳ್ಳಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ʼಬೀದರ ಜಿಲ್ಲಾ ಮತ್ತು ತಾಲೂಕು ಶಾಖೆಗಳ ಸಹಯೋಗದಲ್ಲಿ ಪ್ರತಿದಿನ ಸಂಜೆ 6:30ರಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಗೌತಮ ಬುದ್ಧ ಅವರ ಶಾಂತಿ, ಸಮಾನತೆ, ನೈತಿಕತೆ ಹಾಗೂ ಕರುಣೆ ತತ್ವಗಳ ಕುರಿತು ಪ್ರವಚನಗಳು ನಡೆಯಲಿವೆʼ ಎಂದರು.

ಇಂದಿನ ಸಮಾಜದಲ್ಲಿ ನೆಮ್ಮದಿಯ ಬದುಕಿಗೆ ಶೀಲ ಹಾಗೂ ಸನ್ನಡತೆಗಳ ಅಗತ್ಯತೆಯನ್ನು ಮನಗಾಣಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುದ್ಧರ ನಂತರ ಧಮ್ಮ ಮಾರ್ಗವನ್ನು ಅನುಸರಿಸಿದ ಪ್ರಮುಖ ಶಿಷ್ಯರು ಹಾಗೂ ಚಕ್ರವರ್ತಿ ಸಾಮ್ರಾಟ ಅಶೋಕ ಸೇರಿದಂತೆ ಅನೇಕ ರಾಜರು ಬೌದ್ಧ ಧರ್ಮವನ್ನು ವಿಶ್ವದಾದ್ಯಂತ ಪಸರಿಸಿದ ಇತಿಹಾಸವನ್ನು ಅವರು ಸ್ಮರಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು 1956ರ ಅಕ್ಟೋಬರ್ 14ರಂದು ಬೌದ್ಧ ಧರ್ಮ ಸ್ವೀಕರಿಸಿ 22 ಪ್ರತಿಜ್ಞೆಗಳ ಮೂಲಕ ಭಾರತದಲ್ಲಿ ಬೌದ್ಧ ಧರ್ಮ ಪುನರುಜ್ಜೀವನಕ್ಕೆ ಮುನ್ನಡಿ ಬರೆದರು’ ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಪ್ರಸ್ತುತ ಜಗತ್ತಿನಲ್ಲಿ ಮೂಢನಂಬಿಕೆ, ಹಿಂಸಾಚಾರ ಮತ್ತು ಕೋಮುವಾದ ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧರ ಶಾಂತಿ ಸಂದೇಶ ಅತ್ಯಂತ ಪ್ರಸ್ತುತವಾಗಿದೆ. ಉತ್ತಮ ಸಮಾಜ ನಿರ್ಮಾಣದ ಮೂಲಕ ಉತ್ತಮ ರಾಷ್ಟ್ರ ಕಟ್ಟಲು ಸಾಧ್ಯವೆಂಬ ಅಂಬೇಡ್ಕರ್ ಅವರ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಧಮ್ಮ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆʼ ಎಂದರು.

ಧಮ್ಮ ಪ್ರವಚನದಲ್ಲಿ ಭಂತೆ ಧಮ್ಯಾನಂದ ಮಹಾಥೇರೊ, ಭಂತೆ ವರಜ್ಯೋತಿ, ಭಂತೆ ಮನೋರಜ್ಜಿತ, ಭಂತೆ ಭೋಧಿರತ್ನ, ಭಂತೆ ಜ್ಞಾನಸಾಗರ ಥೇರೊ, ಭಂತೆ ರೇವತ ಥೇರೊ, ಭಂತೆ ಧರ್ಮಪಾಲ ಸೇರಿದಂತೆ ಅನೇಕ ಭಂತೆಗಳು ಧಮ್ಮ ಪ್ರವಚನ ನೀಡಲಿದ್ದಾರೆʼ ಎಂದು ಹೇಳಿದರು.

ಇದನ್ನೂ ಓದಿ : ಸರ್ವಜ್ಞ‌ ಕಾವ್ಯದಲ್ಲಿ ವೈಚಾರಿಕತೆ, ಸಾಮಾಜಿಕ ಪ್ರಜ್ಞೆ

ಪತ್ರಿಕಾಗೋಷ್ಠಿಯಲ್ಲಿ ಅಣದೂರ ವೈಶಾಲಿನಗರದ ಭಂತೆ ಸಂಘರಶ್ಚಿತ, ನಿವೃತ್ತ ಪ್ರಾಚಾರ್ಯ ಪ್ರೊ.ವಿಠಲದಾಸ ಪ್ಯಾಗೆ, ಶಿಕ್ಷಕ ಶಾಮಸುಂದರ ಖಾನಾಪುರೆ, ಮಹಾಸಭೆಯ ಖಜಾಂಚಿ ನರಸಪ್ಪ ಮೇಟಿ ಹಾಗು ಬಾಬು ಅಣದೂರ, ಜಗನ್ನಾಥ ಕಾಂಬಳೆ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಯುವ ಜನಾಂಗ ಕನ್ನಡಾಭಿಮಾನ ಬೆಳೆಸಿಕೊಳ್ಳಿ : ಎಸ್.ಎಂ.ಜನವಾಡಕರ್

ಯುವ ಸಮೂಹ ಮೊಬೈಲ್‌ ವ್ಯಸನದಿಂದಾಗಿ ಕನ್ನಡ ನಾಡು, ನುಡಿ, ಭಾಷೆ ಮತ್ತು...

ಬೀದರ್‌ | ಪರ್ಯಾಯ ರಾಜಕಾರಣದಿಂದ ಸಮ ಸಮಾಜ ನಿರ್ಮಾಣ : ನಟ ಚೇತನ ಅಹಿಂಸಾ

ಭಾರತದಲ್ಲಿ ಅಂಬೇಡ್ಕರ್‌-ಪೇರಿಯಾರ್-ಕಾನ್ಶಿರಾಮ್‌ ಅವರ ಸತ್ಯ ಪಂಥದ ಮೇಲೆ ಪರ್ಯಾಯ ರಾಜಕಾರಣ ರೂಪುಗೊಂಡರೆ...

ಬೀದರ್‌ | ಕಾರಂಜಾ ಸಂತ್ರಸ್ತರ ವಿರುದ್ಧ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಖಂಡನೆ

ಕಾರಂಜಾ ನೀರಾವರಿ ಯೋಜನೆಗಾಗಿ ಭೂಮಿ ನೀಡಿದ ರೈತ ಸಂತ್ರಸ್ತರ ಸಮಸ್ಯೆಗಳ ಕುರಿತು...

ಭಾಲ್ಕಿ | ಏ.10ರಿಂದ ಮೂರು ದಿನ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಭಾಲ್ಕಿ ಪಟ್ಟಣದಲ್ಲಿ ಏ.ರಿಂದ10 ಮೂರು ದಿವಸ ರಾಷ್ಟ್ರಮಟ್ಟದ ಹೊನಲು ಬೆಳಕಿನ ವಾಲಿಬಾಲ್...