ಬೈಕ್-ಕಾರು ನಡುವೆ ಸಂಭವಿಸಿದ ಅಪಘಾತದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಔರಾದ್ ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಶನಿವಾರ ನಡೆದಿದೆ.
ತಾಲೂಕಿನ ಏಕಂಬಾ ಗ್ರಾಮದ ಆಕಾಶ ಜ್ಞಾನೋಬಾ ವಾಡಿಕರ್ (21) ಮೃತ ಯುವಕ ಎಂದು ತಿಳಿದು ಬಂದಿದೆ.
ದ್ವಿಚಕ್ರ ವಾಹನದ ಮೇಲೆ ಬಸ್ ನಿಲ್ದಾಣ ಕಡೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಬಳಿಕ ನೆಲದ ಮೇಲೆ ಹಾರಿ ಬಿದ್ದ ಸವಾರನ ಮೇಲೆ ಟ್ರ್ಯಾಕ್ಟರ್ ಹರಿದಿದೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಔರಾದ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಔರಾದ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬೀದರ್ | ನಾಳೆ ಉದ್ಯೋಗ, ಸಿರಿಧಾನ್ಯ, ಫಲಪುಷ್ಪ, ಮತ್ಸ್ಯಮೇಳ : ಕಣ್ಮನ ಸೆಳೆಯುವ ʼಮಾಡರ್ನ್ ಲೇಡಿʼ





