ರಸ್ತೆ ಮೇಲೆ ಕೆಟ್ಟು ನಿಂತ ಲಾರಿಗೆ ಹಿಂಬದಿಯಿಂದ ಬಂದ ಕಾರು ಗುದ್ದಿದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ-65ರಲ್ಲಿ ಸೋಮವಾರ ನಡೆದಿದೆ.
ಚಿಟಗುಪ್ಪ ತಾಲೂಕಿನ ಇಟಗಾ ಗ್ರಾಮದ ಜೈಭೀಮ ಮೇತ್ರೆ (36) ಮೃತರು ಎಂದು ತಿಳಿದು ಬಂದಿದೆ. ಮೃತ ಜೈಭೀಮ ಅವರು ಬಸವಕಲ್ಯಾಣ ತಾಲೂಕಿನ ಇಲ್ಯಾಳ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಕೆಟ್ಟು ನಿಂತಿದ್ದ ಲಾರಿಗೆ ಗುದ್ದಿದೆ. ಅದೇ ವೇಳೆ ಹಿಂಬದಿಯಿಂದ ಬಂದ ಕಂಟೇನರ್ ಲಾರಿಯೊಂದು ಕಾರಿಗೆ ಗುದ್ದಿದೆ. ಸರಣಿ ಅಪಘಾತಕ್ಕೆ ಲಾರಿಗಳ ಮಧ್ಯೆ ಸಿಲುಕಿದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಕಾರು ಚಾಲಕನ ಪ್ರಾಣಪಕ್ಷಿ ಹಾರಿ ಹೋಗಿದೆ.
ಇದನ್ನೂ ಓದಿ : ಬೀದರ್ | ʼಈದಿನʼದ 5 ಸಣ್ಣ ಸುದ್ದಿಗಳು ಓದಿರಿ
ಸ್ಥಳಕ್ಕೆ ಹುಮನಾಬಾದ್ ಡಿವೈಎಸ್ಪಿ ಮುಡೋಳಪ್ಪ, ಸಿಪಿಐ ಸಂತೋಷ ಹಾಗೂ ಬಸವಕಲ್ಯಾಣ ಸಿಪಿಐ ಅಲಿಸಾಬ್ ನೇತ್ರತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲಿಸಿದರು.





