ಪ್ರತಿ ವರ್ಷದಂತೆ ಈ ವರ್ಷವೂ ಬಿದರಿ ಉತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಬರುವ ಜನವರಿ 9, 10 ಮತ್ತು 11ರಂದು ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸುಗಮ ಸಂಗೀತ ಸ್ಪರ್ಧೆ, ನೃತ್ಯ, ಸಂಗೀತ ಸಂಜೆಯ ರಸದೌತಣದ ಜೊತೆಗೆ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಲು ಬಿದರಿ ಉತ್ಸವ ಸಮಿತಿ ನಿರ್ಧರಿಸಿದೆ.
ಕಳೆದ 7 ವರ್ಷಗಳಿಂದ ಬಿದರಿ ಉತ್ಸವವನ್ನು ಆಯೋಜಿಸುತ್ತ ಬರುತ್ತಿರುವ ಬಿದರಿ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬರುವ 2026ರ ಜನವರಿ 9ರಿಂದ 11ರ ವರೆಗೆ 3 ದಿನಗಳ ಕಾಲ ಅದ್ಧೂರಿಯಾಗಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳ ಸಮ್ಮಿಲನವನ್ನು ಜಿಲ್ಲೆಯ ಜನತೆಗೆ ಉಣಬಡಿಸಲಿದೆ ಅಲ್ಲದೆ ಸಂಗೀತ ಕ್ಷೇತ್ರದ ಹಿರಿಯ ಸಾಧಕರಿಗೆ ಕೊಡಮಾಡುತ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯ ವಿತರಣಾ ಸಮಾರಂಭವನ್ನೂ ನೆರವೇರಿಸಲಿದೆ.
ʼಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರೂ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆʼ ಎಂದು ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದರು.
ಬಿದರಿ ಉತ್ಸವ ನಿಮಿತ್ತದ ಸಿದ್ದತಾ ಸಭೆಯಲ್ಲಿ ಅವರು ಈ ವಿವರಗಳನ್ನು ನೀಡಿ, ಜಿಲ್ಲೆಯ 16 ವರ್ಷ ವಯೋಮಿತಿಯೊಳಗಿನ ಪ್ರತಿಭಾನ್ವಿತ ಸಂಗೀತ ಕಲಾವಿದ ಮಕ್ಕಳಿಗೆ ವೇದಿಕೆ ಒದಗಿಸಿಕೊಡುವುದು ಮತ್ತು ಸಂಗೀತಾಸಕ್ತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸುವ ಬಿದರಿ ಸುಗಮ ಸಂಗೀತ ಸ್ಪರ್ಧೆಯನ್ನು ಜನವರಿ 9ರಂದು ಶುಕ್ರವಾರ ಬೆಳಿಗ್ಗೆ 9ರಿಂದ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕೆ ಗ್ರಾಮೀಣ ಭಾಗದ ಮಕ್ಕಳನ್ನೂ ಸೇರಿಸಿಕೊಳ್ಳೋಣ ಎಂದು ಪ್ರಮುಖರಾದ ಡಾ.ಗೌತಮ ಅರಳಿ, ರಾಜೇಂದ್ರ ಮಣಗೇರಿ, ಜಯದೇವಿ ಯದ್ಲಾಪೂರೆ, ಗೀತಾ ಗಡ್ಡೆ, ವಿದ್ಯಾವತಿ ಬಲ್ಲೂರ್, ಸುಬ್ರಹ್ಮಣ್ಯ ಪ್ರಭು, ಎಸ್ ಪ್ರಬಾಕರ್, ಶ್ರೀಮಂತ ಸಪಾಟೆ, ಡಾ.ಶಿವಕುಮಾರ ಗಡ್ಡೆ, ಸಂತೋಷ ಜೋಳದಾಪಕೆ, ಸುಬ್ಬಣ್ಣ, ಕರಕನಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜ.10ರಂದು ಜಿಲ್ಲಾ ರಂಗಿಮಂದಿರ ಆವರಣದಲ್ಲಿ ನೃತ್ಯ, ದೇಶಿ ಆಟಗಳನ್ನೂ, ಕೃಷಿ ಸಂಬಂಧಿತ ಪರಿಕರಗಳ ಪ್ರದರ್ಶನವನ್ನೂ ಆಯೋಜಿಸುವ ಕುರಿತಂತೆ ಯೋಜಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ರಾಣಿ ಸತ್ಯಮೂರ್ತಿ, ವೀರಶೆಟ್ಟಿ ಮೈಲೂರಕರ್, ಆರತಿ ಪಾಟೀಲ್, ಪಾರ್ವತಿ ಸೋನಾರೆ, ಮಲ್ಲಮ್ಮ ಸಂತಾಜಿ, ಶ್ರೇಯಾ ಮಹೇಂದ್ರಕರ್, ಕಸ್ತೂರಿ ಪಟಪಳ್ಳಿ, ಶರತಕುಮಾರ ಅಭಿಮಾನ, ಪುಷ್ಪಾ ಕನಕ ಹಾಗೂ ಸುಧಾ ಭಾರದ್ವಾಜ ಸಲಹೆ ನೀಡಿದರು.
ಜ.11ರಂದು ಜಿಲ್ಲಾ ರಂಗಮಂದಿರದಲ್ಲಿ ಖ್ಯಾತನಾಮ ಕಲಾವಿದರಿಂದ ವಾದ್ಯ ಸಹಿತ ಬಿದರಿ ಸಂಗೀತ ಸಂಜೆ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಕ್ಕಳ ನೃತ್ಯದ ಕಾರ್ಯಕ್ರಮಗಳ ಆಯೋಜನೆ, ಗಣ್ಯರಿಗೆ ಮತ್ತು ಸಂಗೀತಗಾರರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಕುರಿತಾಗಿ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಿರಿಯರಾದ ಬಾಬು ವಾಲಿ, ರಾಮಕೃಷ್ಣನ್ ಸಾಳೆ, ಶರಣಪ್ಪ ಹೋತಪೇಟ್, ಜಯರಾಜ ಖಂಡ್ರೆ, ಆನಂದ ದೇವಪ್ಪ, ಅನೀಲಕುಮಾರ ಬೆಲ್ದಾರ್, ವಿಜಯಕುಮಾರ ಪಾಟೀಲ್ ಯರನಳ್ಳಿ, ದಾನಿ ಬಾಬುರಾವ್, ಹಾವಶೆಟ್ಟಿ ಪಾಟೀಲ್, ವೀರಭದ್ರಪ್ಪ ಉಪ್ಪಿನ್, ಯೋಗೇಶ ಮಠದ, ರತೀನ್ ಕಮಲ್ ಹಾಗೂ ಕಾಮಶೆಟ್ಟಿ ಚಿಕಬಸೆ ಅವರುಗಳು ಪ್ರಸ್ತಾಪಿಸಿದರೆ ಇದಕ್ಕೆ ಸರ್ವರೂ ಸಹಮತಿಸಿದರು.
ಇದನ್ನೂ ಓದಿ : ಬೀದರ್ | ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಗುರಿ : ಡಾ.ಮಾನಸ
ಕಾರ್ಯಕ್ರಮದಲ್ಲಿ ದೇವಿದಾಸ ಜೋಶಿ ನಿರೂಪಿಸಿ, ರೇವಣಸಿದ್ದಪ್ಪ ಡೊಂಗರಗಾಂವ್ ಸ್ವಾಗತಿಸಿ ಶಿಖರೇಶ್ವರ ಪಾಟೀಲ್, ಹಾಗೂ ಸುನೀಲ ಭಾವಿಕಟ್ಟಿ, ನಾಗಶೆಟ್ಟಿ ಧರಂಪೂರ್, ಸುನೀಲ ಕುಲಕರ್ಣಿ, ಶ್ರೀಕಾಂತ ಕೋಟಗೆ, ಅಶ್ವಿನಿ ಶ್ರೀಕಾಂತ, ರಾಜೇಶ ಕುಲಕರ್ಣಿ, ಮಹೇಶ ಪಾಟೀಲ್, ನಟರಾಜ ಪಾಟೀಲ್ ಹಾಗೂ ರಾಘವೇಂದ್ರ ಅಡಿಗ ಸೇರಿದಂತೆ ಮತ್ತಿತರರು ಇದ್ದರು.





