ವರ್ಷದ ಮೊದಲ ಮಳೆ ಸೋಮವಾರ ಬೀದರ್ ನಗರ ಸೇರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತುಂತುರಿನಿಂದ ಸುರಿಯಿತು.
ಬೀದರ್ ನಗರದಲ್ಲಿ ರಾತ್ರಿ ಎಂಟು ಗಂಟೆ ಸುಮಾರಿಗೆ ಜೋರು ಮಳೆಯಾದರೆ, ಹುಮನಾಬಾದ್‌ನಲ್ಲಿ ಮಧ್ಯಾಹ್ನವೇ ಮಳೆ ಹನಿ ಬಿದ್ದವು, ಇನ್ನು ಔರಾದ್, ಭಾಲ್ಕಿ ಸೇರಿ ನಾನಾ ಕಡೆ ಸಂಜೆ ಕೆಲ ಹೊತ್ತು ತುಂತುರಾಗಿ ಸುರಿಯಿತು.
ಬೇಸಿಗೆಯ ಆರಂಭದಲ್ಲೇ ಸುಡುಬಿಸಿಲಿನೊಂದಿಗೆ ಮಳೆಯ ಸಿಂಚನವಾಯಿತು. ಕೆಲವಡೆ ಗುಡುಗಿನ ಸದ್ದು, ತಣ್ಣನೆಯ ಗಾಳಿ ಬೀಸಿತು.
ಇದನ್ನೂ ಓದಿ : ಬೀದರ್ | ನೀರು-ಮೇವು ಕೊರತೆಯಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ : ಡಿಸಿ ಶಿಲ್ಪಾ ಶರ್ಮಾ





