ಗಂಡನ ಮನೆಯವರ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು 11 ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ.
ಅಂಜನಾಬಾಯಿ ಶೇಖರ ಪಾಟೀಲ್ (25) ಮೃತ ಮಹಿಳೆ. ಮನೆಯಲ್ಲಿ ಛಾವಣಿಯ ಕೊಂಡಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ʼ2022ರಲ್ಲಿ ಭಾಲ್ಕಿ ತಾಲೂಕಿನ ಗ್ರಾಮವೊಂದರ ಅಂಜನಾಬಾಯಿ ಬಸವಕಲ್ಯಾಣ ನಗರದ ಶೇಖರ್ ಪಾಟೀಲ್ ಅವರೊಂದಿಗೆ ವಿವಾಹವಾಗಿತು. ಗಂಡ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದರು. ಮನೆಯಲ್ಲಿ ಅಂಜನಾಬಾಯಿ ಅವರಿಗೆ ಮನೆಯಲ್ಲಿ ಆಗಾಗ ಗಂಡ, ಅತ್ತೆ ಮತ್ತು ಮಾವ ಮೂವರು ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದರುʼ ಎನ್ನಲಾಗಿದೆ.
ʼನನ್ನ ಮಗಳು ಅಂಜನಾಬಾಯಿ ಅವರ ಅತ್ತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ನನ್ನ ಮಗಳಿಗೂ ವೇಶ್ಯಾವಾಟಿಕೆ ಮಾಡುವಂತೆ ದಿನಾಲೂ ಕಾಡಿಸುತ್ತಿದ್ದರು ಎಂದು ತಂದೆ ವಿಜಯಕುಮಾರ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ : ಬೀದರ್ | ರಸ್ತೆ ಬದಿಯ ಸೇತುವೆಗೆ ಸ್ಕೂಟಿ ಡಿಕ್ಕಿ : ಒಂದೇ ಕುಟುಂಬದ ಮೂವರ ಸಾವು
ಈ ಸಂಬಂಧ ಬಸವಕಲ್ಯಾಣ ನಗರ ಠಾಣೆಯಲ್ಲಿ ಕಲಂ 85, 108 ಜೊತೆ 3(5) ಬಿಎನ್‌ಎಸ್-2023 ಅಡಿಯಲ್ಲಿ ಮೃತ ಅಂಜನಾಬಾಯಿ ಅವರ ಗಂಡ, ಅತ್ತೆ ಹಾಗೂ ಮಾವ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





