ಹೋಳಿ ಹಬ್ಬದ ಅಂಗವಾಗಿ ಬೀದರ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಶಾಂತಿಯುತವಾಗಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಠಿಯಿಂದ ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ-21 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮದ್ಯ ಮಾರಾಟ ನಿಷೇಧಿಸಿದ್ದಾರೆ.
ಬೀದರ ನಗರದಲ್ಲಿ ಮಾರ್ಚ್2ರ ರಾತ್ರಿ 11.30 ರಿಂದ ಮಾರ್ಚ್3ರ ಮಧ್ಯರಾತ್ರಿ 12 ಗಂಟೆಯವರೆಗೆ
ಬೀದರ, ಹುಮನಾಬಾದ, ಬಸವಕಲ್ಯಾಣ, ಔರಾದ್ (ಬಿ), ಕಮಲನಗರ, ಹುಲಸೂರ, ಚಿಟಗುಪ್ಪಾ ತಾಲ್ಲೂಕಿನಲ್ಲಿ ಮಾರ್ಚ್ 3ರ ಸಂಜೆ 6ರಿಂದ ಮಾರ್ಚ್ 4ರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಭಾಲ್ಕಿ ತಾಲ್ಲೂಕಿನಾದ್ಯಂತ ಮಾರ್ಚ್ 4ರ ಬೆಳಿಗ್ಗೆ 6 ರಿಂದ ಮಾರ್ಚ್ 5ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ತರಹದ ಮದ್ಯ ಮಾರಾಟ ಅಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾ.2ರಂದು ಆದೇಶ ಹೊರಡಿಸಿದ್ದಾರೆ.





