ತೆಲಂಗಾಣದಿಂದ ಕರ್ನಾಟಕಕ್ಕೆ ಆಟೋದಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರ ಆರೋಪಿಗಳನ್ನು ಬಂಧಿಸಿ ಸುಮಾರು ₹11.11 ಲಕ್ಷ ಮೌಲ್ಯದ ಗಾಂಜಾ ಹಾಗೂ ಆಟೋವನ್ನು ಔರಾದ್ ತಾಲೂಕಿನ ಸಂತಪೂರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಜಪ್ತಿ ವಶಪಡಿಸಿಕೊಂಡಿದ್ದಾರೆ.
ಔರಾದ್ ತಾಲೂಕಿನ ಗಡಿ ಗ್ರಾಮ ಜಂಬಗಿ(ಬಿ) ಗ್ರಾಮದ ಅರಣ್ಯ ಪ್ರದೇಶದ ಸಮೀಪ ಪೊಲೀಸರು ಡಿ.31ರಂದು ದಾಳಿ ನಡೆಸಿ, ಬಂಧಿತರಿಂದ ₹10.31 ಲಕ್ಷ ಮೌಲ್ಯದ 20.630 ಕೆ.ಜಿ. ಗಾಂಜಾ ಪಾಕೇಟ್ ಹಾಗೂ ₹80 ಸಾವಿರ ಮೌಲ್ಯದ ಆಟೋ ಜಪ್ತಿ ಮಾಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಂತಪೂರ ಪೊಲೀಸ್ ಠಾಣೆಯ ಪಿಎಸ್‌ಐ ದಿನೇಶ್ ಎಂ.ಟಿ ನೇತ್ರತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಶೇಷರಾವ್ (ಎಎಸ್,ಐ), ಅರುಣಸಿಂಗ್, ರಾಮರೆಡ್ಡಿ, ಸುಭಾಷ, ಗೌತಮ, ಕೊಟ್ರೇಶ ಮತ್ತು ದತ್ತಾತ್ರಿ ಅವರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ಬೀದರ್ | 10 ತಿಂಗಳಲ್ಲಿ 800ಕ್ಕೂ ಅಧಿಕ ರಸ್ತೆ ಅಪಘಾತ : 263 ಮಂದಿ ಸಾವು
ಈ ಸಂಬಂಧ ಸಂತಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತರನ್ನು ಬಂಧಿಸಿ ನ್ಕಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





