ರಾಜ್ಯ ಬಜೆಟ್‌ನಲ್ಲಿ ಹಡಪದ ಸಮುದಾಯಕ್ಕೆ ನಿರಾಶೆ ಉಂಟಾಗಿದೆ ಎಂದು ಹಡಪದ ಅಪ್ಪಣ್ಣ ಸಮಾಜದ ಯುವ ಮುಖಂಡ ರೇವಣಸಿದ್ಧ ಹಡಪದ ಆಕ್ರೋಶ ವ್ಯಕ್ತಪಡಿಸಿದರು.
ಹಡಪದ ಅಭಿವೃದ್ಧಿ ನಿಗಮ ಸ್ಥಾಪನೆಯಾದರೂ ಅದಕ್ಕೆ ಒಂದು ರೂಪಾಯಿಯೂ ಅನುದಾನ ನೀಡಿಲ್ಲ. ಮುಖ್ಯಮಂತ್ರಿಗಳು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿದೆ. ಆದರೆ, ಬಸವಣ್ಣನವರ ಆಪ್ತ ಶರಣರೆಂದೇ ಗುರುತಿಸಿಕೊಂಡಿದ್ದ ಹಡಪದ ಅಪ್ಪಣನವರ ಜನ್ಮಸ್ಥಳ ಅಭಿವೃದ್ಧಿಗೆ ಸರ್ಕಾರ ಹಿಂದೇಟು ಹಾಕುತ್ತಿದೆʼ ಎಂದು ದೂರಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಹಡಪದ ಅಪ್ಪಣ್ಣ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡಕ್ಕೂ ಅನುದಾನ ನೀಡದಿರುವುದಾಗಿ ಭರವಸೆ ನೀಡಿದರು. ಬಸವಕಲ್ಯಾಣದಲ್ಲಿರುವ ಹಡಪದ ಅಪ್ಪಣ್ಣನವರ ಅರಿವಿನ ಮನೆಯನ್ನು ಅಭಿವೃದ್ಧಿಪಡಿಸಲು ಮಾಡಿದ ಮನವಿಗೂ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಶಿವನಗರ ವಾಕಿಂಗ್ ಪಾತ್ ಅಭಿವೃದ್ಧಿಗೆ ಆಗ್ರಹ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳದಲ್ಲಿರುವ ಅಪ್ಪಣ್ಣನವರ ಜನ್ಮಸ್ಥಳ ಹಾಗೂ ದೇಗಿನಾಳ ಗ್ರಾಮದ ಅಭಿವೃದ್ಧಿಗೂ ಸರ್ಕಾರ ಗಮನ ಹರಿಸಬೇಕು. ಹಡಪದ ಸಮುದಾಯದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.





