ಬೀದರ್ | ಕಂಬನಿ ತುಂಬಿದ ಕಣ್ಣು, ತಂದೆ ಭೀಮಣ್ಣ ಖಂಡ್ರೆ ಕಾರ್ಯ ಸ್ಮರಿಸಿದ ಈಶ್ವರ ಖಂಡ್ರೆ

Date:

ಬಡವ, ಬಲ್ಲಿದ, ಬಡವ, ಶ್ರೀಮಂತ ಎಲ್ಲರೂ ಸಮಾನರು, ಮೇಲ್ಜಾತಿ, ಕೀಳು ಜಾತಿ ಎಂಬ ಭಾವನೆಯೇ ತಪ್ಪು ಎಂದು ಪ್ರತಿಪಾದಿಸುತ್ತಿದ್ದ ತಮ್ಮ ತಂದೆ ಲಿಂಗೈಕ್ಯ ಭೀಮಣ್ಣ ಖಂಡ್ರೆ 60ರ ದಶಕದಲ್ಲೇ ಅಸೃಶ್ಯತೆ ವಿರುದ್ಧ ಹೋರಾಟ ಮಾಡಿದ್ದರು ಎಂದು ಸಚಿವ ಈಶ್ವರ ಖಂಡ್ರೆ ಸ್ಮರಿಸಿದರು.

ಶುಕ್ರವಾರ ನಿಧನರಾದ ತಮ್ಮ ತಂದೆ ಭೀಮಣ್ಣ ಖಂಡ್ರೆ ಅವರ ಪಾರ್ಥವ ಶರೀರಕ್ಕೆ ಪೂಜೆ ಸಲ್ಲಿಸಿದ ತರುವಾಯ ಮಾತನಾಡಿದ ಅವರು, ‘ಬಸವಾದಿ ಶರಣರ ತತ್ವಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ತಾವು ಜೀವಿಸಿದ್ದ ನೂರ್ಕಾಲವೂ ಕಾಯಕಯೋಗಿ, ಕರ್ಮಯೋಗಿಯಾಗಿ ಜನರಿಗಾಗಿ, ಜನರಿಗೋಸ್ಕರ ಬದುಕಿದವರು ತಮ್ಮ ತಂದೆ’ ಎಂದರು.

ಮುಟ್ಟಿ-ತಟ್ಟಿ ಎಂಬ ಅನಿಷ್ಠ ಅಸ್ಪೃಶ್ಯತೆ ವಿರುದ್ಧ ಸಿಡಿದೆದ್ದು ತಮ್ಮ ಸಮುದಾಯದ ಹಿರಿಯರನ್ನು ಸಮಾಜವನ್ನೇ ಎದುರು ಹಾಕಿಕೊಂಡು ಹೋರಾಟ ಮಾಡಿದ ತಮ್ಮ ತಂದೆ, ತಮ್ಮ ದೀಕ್ಷಾ ಗುರು ಚನ್ನಬಸವ ಪಟ್ಟದ್ದೇವರ ಮನವೊಲಿಸಿ ಅಶೋಕ ನಗರದ ನಿವಾಸಿಗಳನ್ನು ಭಾಲ್ಕಿ ಮಠಕ್ಕೆ ಕರೆತಂದು ಸ್ನಾನ ಮತ್ತು ವಿಭೂತಿ ಧಾರಣೆ ಮಾಡಿಸಿ, ಭಾಲ್ಕೇಶ್ವರ ದೇವಾಲಯದ ಸಿಹಿನೀರ ಬಾವಿಯಿಂದ ನೀರು ಸೇದಿಸಿ ಕುಡಿಸುವ ಮೂಲಕ ಕ್ರಾಂತಿಯನ್ನೇ ಮಾಡಿದ್ದರು ಎಂಬುದನ್ನು ನೆನಪಿಸಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

102 ವರ್ಷಗಳ ಸಾರ್ಥಕ ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಅಜಾತಶತ್ರುವಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಹೈದ್ರಾಬಾದ್ ಕರ್ನಾಟಕದ ವಿಮೋಚನೆಗಾಗಿ, ಏಕೀಕರಣಕ್ಕಾಗಿ ಹೋರಾಡಿದ್ದ ಅವರು, ಶಾಸಕರಾಗಿ, ಸಚಿವರಾಗಿ, ವಿಧಾನಪರಿಷತ್ ಸದಸ್ಯರಾಗಿ, ಸಭಾ ನಾಯಕರಾಗಿ ಬೀದರ್ ಜಿಲ್ಲೆಯ ಸಮಗ್ರ ಪ್ರಗತಿಗೆ ಶ್ರಮಿಸಿದ್ದರು. ನಿಷ್ಠುರವಾದಿಗಳಾಗಿದ್ದ ಅವರು ಅನ್ಯಾಯ ಕಂಡರೆ ತಮ್ಮವರು, ಅನ್ಯರು ಎಂಬ ಭೇದವಿಲ್ಲದೆ ಪ್ರತಿಭಟಿಸುತ್ತಿದ್ದರು, ಅಸಹಾಯಕರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದರು.

ರೈತರಿಗೆ ಬೆಳೆ ನಷ್ಟವಾದಾಗ, ಬೆಂಕಿ ಮಳೆಯಿಂದ ನಷ್ಟ ಸಂಭವಿಸಿದಾಗ ಸರ್ಕಾರದ ವಿರುದ್ಧವೇ ಹೋರಾಟ ಮಾಡಿ ಪರಿಹಾರ ಕೊಡಿಸಿದ್ದರು. ಶರಣರ ಬಗ್ಗೆ ಅವಮಾನಕರ ರೀತಿಯಲ್ಲಿ ಮತ್ತು ಸಮಾಜದ ಜನರ ಭಾವನೆಗೆ ಧಕ್ಕೆ ಬರುವಂತೆ ಕೆಲವು ಕೃತಿಗಳಲ್ಲಿ ತಿರುಚಿ ಬರೆದಾಗ ಅದರ ವಿರುದ್ಧ ಹೋರಾಟ ಮಾಡಿ ಕೃತಿಯನ್ನೇ ಮುಟ್ಟುಗೋಲು ಹಾಕಿಸಿದ್ದರು. ಹಾವನೂರು ಆಯೋಗದ ವರದಿಯ ವಿರುದ್ಧ ಸದನದ ಒಳಗೆ ಹೊರಗೆ ಹೋರಾಟ ಮಾಡಿದ್ದರು. ಅವರ ಬದ್ಧತೆ, ನ್ಯಾಯಪರತೆ, ಬಡಜನರ ಪರ ಕಾಳಜಿ ಎಲ್ಲರಿಗೂ ಆದರ್ಶ ಎಂದರು.

1004849934

ಜಿಲ್ಲೆಯಲ್ಲಿ ಕಾರ್ಯಗತವಾಗಿರುವ ನೀರಾವರಿ ಯೋಜನೆಗಳೇ ಇರಲಿ, ಮೂಲಭೂತಸೌಕರ್ಯ ಯೋಜನೆಗಳೇ ಇರಲಿ ಅದರಲ್ಲಿ ತಮ್ಮ ತಂದೆಯವರ ಶ್ರಮ ಇದೆ. ಹೀಗಾಗಿಯೇ ತಮ್ಮ ತಂದೆಗೆ ಲೋಕನಾಯಕ ಎಂಬ ಬಿರುದನ್ನು ಡಾ.ಚನ್ನಬಸವ ಪಟ್ಟದ್ದೇವರು ನೀಡಿದ್ದರು ಎಂದರು.

ಛಲವಾದಿ ಭೀಮಣ್ಣ : ಗುರುಬಸವ ಪಟ್ಟದ್ದೇವರು

ಭೀಮಣ್ಣ ಖಂಡ್ರೆ ಅವರು ಛಲವಾದಿಗಳಾಗಿದ್ದರು. ಛಲಬೇಕು ಶರಣಂಗೆ ಎಂಬುದಕ್ಕೆ ಅನ್ವರ್ಥವಾಗಿದ್ದರು. ಅವರು ಗುಡುಗಿದರೆ ವಿಧಾನಸೌಧವೇ ನಡುಗುತ್ತಿತ್ತು. ಅನ್ಯಾಯದ ವಿರುದ್ಧ ಅವರು ಸದಾ ಸಿಡಿದು ನಿಂತು ನೊಂದವರಿಗೆ ನ್ಯಾಯಕೊಡಿಸುತ್ತಿದ್ದರು ಎಂದರು.

ಚನ್ನಬಸವ ಪಟ್ಟದ್ದೇವರ ಮಾರ್ಗದರ್ಶನದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಭೀಮಣ್ಣ ಖಂಡ್ರೆ ಅವರ ಕೊಡುಗೆ ಅಪಾರವಾಗಿದೆ. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ, ಹಿಂದುಳಿದ ಬೀದರ್ ಭಾಗದ ಯುವಜನರು ಎಂಜಿನಿಯರಿಂಗ್ ಶಿಕ್ಷಣ ದೊರಕಿಸುವಲ್ಲಿ ಅವರ ಶ್ರಮ ಅಪರಿಮಿತವಾದ್ದು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಸ್ವಂತ ಕಚೇರಿಯೂ ಇರಲಿಲ್ಲ. ಬೆಂಗಳೂರು ನಗರದ ಹೃದಯ ಭಾಗದಲ್ಲಿ ಭೂಮಿ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ, ಸಮಾಜ ಸಂಘಟಿಸಿ ಗಟ್ಟಿಗೊಳಿಸಿದ ಕೀರ್ತಿಯೂ ಭೀಮಣ್ಣ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಭೀಮಣ್ಣ ಖಂಡ್ರೆ ಸಮಾಜದ ದೊಡ್ಡ ಶಕ್ತಿ : ರಂಭಾಪುರಿ ಶ್ರೀ

ಭೀಮಣ್ಣ ಖಂಡ್ರೆ ಅವರು ನಮ್ಮ ಸಮಾಜ, ಸಮುದಾಯಕ್ಕೆ ಒಂದು ದೊಡ್ಡ ಶಕ್ತಿಯಾಗಿದ್ದರು, ಸಮಾಜದ ರಕ್ಷಣೆಗೆ ಸದಾ ಅವರು ಮುಂದೆ ನಿಲ್ಲುತ್ತಿದ್ದರು ಎಂದು ಬಾಳೆಹೊನ್ನೂರಿನ ರಂಬಾಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.

1004849935

ಭಾಲ್ಕಿಯಲ್ಲಿ ಶನಿವಾರ ಭೀಮಣ್ಣ ಖಂಡ್ರೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ನಿಷ್ಠುರವಾದಿಗಳಾಗಿದ್ದ ಅವರು ಸಮಾಜದ ಅಭ್ಯುದಯಕ್ಕಾಗಿ ಮಾಡಿರುವ ಕಾರ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಬೀದರ್ | ಭೀಮಣ್ಣ ಖಂಡ್ರೆ ಅಂತ್ಯಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಆಗಮನ

ಸದಾ ಧರ್ಮಮಾರ್ಗದಲ್ಲಿ ನಡೆದ ಸಚ್ಚಾರಿತ್ರ್ಯದ ರಾಜಕಾರಣಿ, ಸಮಾಜದ ಧುರೀಣರಾದ ಭೀಮಣ್ಣ ಖಂಡ್ರೆ ಅವರನ್ನು 2 ದಿನಗಳ ಹಿಂದೆ ಬಂದು ನೋಡಿ ಅವರ ಕಿವಿಯಲ್ಲಿ ಪಂಚಾಕ್ಷರಿ ಮಂತ್ರೋಪದೇಶ ಮಾಡಿ ತೆರಳಿದ್ದನ್ನು ಸ್ಮರಿಸಿದರು. ಲೋಕನಾಯಕರಾಗಿ ಆದರ್ಶ ಬದುಕು ನಡೆಸಿದ ಅವರಿಗೆ ಶಿವಸಾಯುಜ್ಯ ದೊರಕಲಿ ಎಂದು ಪ್ರಾರ್ಥಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...