ಇರಾನ್ ಮೇಲೆ ಇಸ್ರೇಲ್-ಅಮೆರಿಕಾ ದಾಳಿಯಿಂದಾಗಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಬೀದರ್ ನಗರದಲ್ಲಿ ಪ್ರತಿಭಟನೆ ನಡೆಯಿತು.
ಬೀದರ್ ನಗರದ ಇರಾನಿ ಬಡಾವಣೆಯ ಶಿಯಾ ಮುಸ್ಲಿಂಮರು ಇರಾನ್ ಮೇಲೆ ಇಸ್ರೇಲ್–ಅಮೆರಿಕಾ ನಡೆಸಿದ ದಾಳಿಗೆ ಆಕ್ರೋಶ ವ್ಯಕ್ತಪಡಿಸಿದರು. ಇರಾನಿ ದರ್ಗಾದಿಂದ ಮೆರವಣಿಗೆ ನಡೆಸಿ, ಕೈಯಲ್ಲಿ ಖಮೇನಿ ಅವರ ಫೋಟೋ ಹಿಡಿದು ಘೋಷಣೆ ಕೂಗಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಕಪ್ಪು ವರ್ಣದ ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
ʼಒಂದು ರಾಷ್ಟ್ರದ ಮೇಲೆ ಕಾರಣವಿಲ್ಲದೆ ದಾಳಿ ಆ ದೇಶದ ಸರ್ವೊಚ್ಚ ನಾಯಕನ ಹತ್ಯೆ ನಡೆಸುವ ಕೃತ್ಯ ಖಂಡನೀಯವಾಗಿದೆ. ಇದನ್ನು ಜಗತ್ತಿನ ಎಲ್ಲ ಸಮುದಾಯ ಪ್ರತಿಭಟಿಸಿ ಖಂಡಿಸಿಬೇಕುʼ ಎಂದರು.





