ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ್ ಸಹಯೋಗದಲ್ಲಿ ಬೀದರ್ ತಾಲೂಕಿನ ಮನ್ನಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ ʼಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳುʼ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ರವೀಂದ್ರ ಲಂಜವಾಡಕರ್ ಮಾತನಾಡಿ, ʼನಮ್ಮ ಸಂವಿಧಾನವು ಗಾತ್ರದಲ್ಲಿ ದೊಡ್ಡದು, ಕಠಿಣವೂ ಆಗಿ ಸರಳವೂ ಆಗಿದೆ. ಜನರ ಆಶಯಗಳಿಗೆ ಅದು ತವರೂರಾಗಿದೆ. ಸಂವಿಧಾನವು ಮಹಿಳೆಯರಿಗೆ ವಿಶೇಷ ಹಕ್ಕು-ಅವಕಾಶಗಳನ್ನು ನೀಡಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿದೆʼ ಎಂದು ಹೇಳಿದರು.
ಧಾರವಾಡದ ನ್ಯಾಯವಾದಿ, ಸಾಹಿತಿ ಗುರು ಹಿರೇಮಠ ಅವರು ಮಾತನಾಡಿ, ʼಭಾರತದ ಸಂವಿಧಾನವು ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಸಂವಿಧಾನವಾಗಿದ್ದು, ಜನರಿಂದ ಜನರಿಗಾಗಿ ರೂಪುಗೊಂಡಿದೆ. ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವುದು ಅತ್ಯಂತ ಅಗತ್ಯʼ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಶರಣಪ್ಪ ಎಸ್.ಮಲಗೊಂಡ ಅವರು ಮಾತನಾಡಿ, ʼಸಂವಿಧಾನವು ಸ್ವಾತಂತ್ರ್ಯ, ನ್ಯಾಯ, ಸಮಾನತೆ ಹಾಗೂ ಸೌಹಾರ್ದತೆಯ ಮೌಲ್ಯಗಳನ್ನು ಒಳಗೊಂಡ ದೇಶದ ಆತ್ಮವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಬೆಳೆಸಬಹುದು. ಮಕ್ಕಳ ಭವಿಷ್ಯದ ಕನಸುಗಳಿಗೆ ಇಂದಿನಿಂದಲೇ ಬುನಾದಿ ಹಾಕಬೇಕುʼ ಎಂದು ಅಭಿಪ್ರಾಯಪಟ್ಟರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ. ಮಾತನಾಡಿ, ʼವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಕಾನೂನಿನ ಅರಿವು ಪಡೆದುಕೊಳ್ಳಬೇಕು. ಅರಿವಿನ ಕೊರತೆ ಅಜ್ಞಾನಕ್ಕೆ ಕಾರಣವಾಗುತ್ತದೆʼ ಎಂದು ಹೇಳಿದರು.
ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿ ಡಾ.ನವರಂಗ ಮಾಣಿಕರಾವ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಟಿ ಅವರು ಮಾತನಾಡಿದರು.
ಇದನ್ನೂ ಓದಿ : ಬೀದರ್ | ಒಳಮೀಸಲಾತಿ ಅನ್ಯಾಯ ಸರಿಪಡಿಸಲು ಬಲಗೈ ಸಮುದಾಯ ಒತ್ತಾಯ
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಜೈಶೀಲಾ, ಡಾ.ಪೃಥ್ವಿರಾಜ, ಡಾ.ದಶವಂತ, ಡಾ.ಸುರೇಂದ್ರ ಸಿಂಗ್, ಡಾ.ಶಾಜಿಯಾ ಅಂಜುಮ್, ಡಾ.ಸುನೀಲಕುಮಾರ, ಉಷಾರಾಣಿ, ಕಚೇರಿ ಅಧೀಕ್ಷಕರಾದ ಮಗದುಮ್, ಆನಂದ, ಅಯುಬ್ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ಜ್ಯೂಲಿ ನೆರವೇರಿಸಿದರು. ಪ್ರಾಧ್ಯಾಪಕರಾದ ಸವಿತಾ ಪಾಟೀಲ್ ನಿರ್ವಹಿಸಿದರು. ರೇಣುಕಾ ಸ್ವಾಗತಿಸಿದರು. ಡಾ.ಜ್ಞಾನಗಂಗಾ ವಂದಿಸಿದರು.





